Posts

‘ರಾಜ_ಬಿಜ್ಜಳನ_ಸೊಕ್ಕು_ಮುರಿದ_ಶರಣ_ಮಾಚಯ್ಯ’👍🏻👌 ✍🏾ವಿಶೇಷ ಲೇಖನ-;#ಲೋಕೇಶ್_ಎನ್_ಮಾನ್ವಿ.

Image
‘#ರಾಜ_ಬಿಜ್ಜಳನ_ಸೊಕ್ಕು_ಮುರಿದ_ಶರಣ_ಮಾಚಯ್ಯ’👍🏻👌 ಈ ಭಾವಚಿತ್ರವನ್ನು ಬಹುತೇಕರು ನೋಡಿರುತ್ತೀರಿ ಇದರ ಹಿಂದಿನ ರೋಚಕವಾದ ನೈಜ ಕಥೆನ್ನು ತಿಳಿಯೋಣ ಬನ್ನಿ, ೧೨ನೇ ಶತಮಾನದಲ್ಲಿ ಮಹಾಮಾನತಾವಾದಿ, ವಿಶ್ವಗುರು ಬಸವಣ್ಣನವರು ಕಲ್ಯಾಣ ರಾಜ್ಯದ ಪ್ರಧಾನಮಂತ್ರಿಯಾಗಿರುತ್ತಾರೆ, ಪ್ರತಿದಿನ ಬಸವಣ್ಣನವರು ರಾಜ ಬಿಜ್ಜಳನ ಸಭೆಗೆ ಹೋಗುತ್ತಿರುತ್ತಾರೆ ಪ್ರತಿಬಾರಿ ಹೋದಾಗಲೂ ಅವರ ವಸ್ತ್ರಗಳು ಪಳಪಳನೆ ಹೊಳೆಯುತ್ತಿರುತ್ತವೆ, ಇದನ್ನು ಕಂಡ ಕೊಂಡೆ ಮಂಚಣ್ಣ ರಾಜ ಬಿಜ್ಜಳನಿಗೆ ಕಿವಿ ಊದುತ್ತಾನೆ, ಪ್ರಧಾನಿ ಬಸವರಸರ ವಸ್ತ್ರಗಳು ಎಷ್ಟು ಶುಭ್ರವಾಗಿವೆ ಪಳಪಳನೇ ಮಿಂಚುತ್ತಿವೆ, ಇದನ್ನು ಒಗೆಯುವಾತ ಮಾಡಿವಾಳ ಮಾಚಿದೇವ ಅವನಿಗೆ ನಿಮ್ಮ ವಸ್ತ್ರವನ್ನು ಒಗೆಯಲು ಕಳಿಸಿದರೆ ನಿಮ್ಮ ವಸ್ತ್ರವೂ ಸುಂದರವಾಗಿ ಕಾಣುತ್ತವೆ ಎಂದಾಗ, ಬಿಜ್ಜಳ ತನ್ನ ಬಟ್ಟೆಯನ್ನು ಮಡಿ ಮಾಡಿಸಿಕೊಡಲು ಬಸವಣ್ಣನಿಗೆ ದುಂಬಾಲು ಬಿದ್ದ, ಮಡಿವಾಳಯ್ಯ ಪರಮ ಭಕ್ತ , ಅವನನ್ನು ಅಗಸನೆಂದು ಭಾವಿಸದಿರಲು ಬಸವಣ್ಣ ತಿಳಿ ಹೇಳಿದ , ಅದನ್ನು ರಾಜ ಲೆಕ್ಕಿಸದೆ ಮಾಸಿದ ತನ್ನ ಬಟ್ಟೆಗಳ ಗಂಟನ್ನು ಮಡಿ ಮಾಡಲು ಕಳಿಸಿದ ,  ಮಾಚಯ್ಯ ಶರಣರ ಬಟ್ಟೆ ಮಡಿಮಾಡುವಾಗ ಒಂದು ಕೈಯಲ್ಲು ಘಂಟೆ ಇನ್ನೊಂದು ಕೈಯಲ್ಲು ಖಡ್ಗ ವಿರುತ್ತಿತ್ತು, ಭವಿಗಳು ಶರಣರ ಬಟ್ಟೆ ಮುಟ್ಟಲು ಬರಬಾರದು ಎಂದು ಬರುವಾಗಲೇ ಘಂಟೆಯ ನಾದ ಮಾಡುತ್ತಿದ್ದರು ಮಾಚಯ್ಯ. ಬಸವಣ್ಣನ ಬಟ್ಟೆ ಮಡಿಮಾಡುತ್ತಿರುವಾಗ ಭವಿ ಬಿಜ್ಜಳನ ಮೈಲಿಗೆ ಬಟ್ಟೆಯ ಗಂಟನ್ನು ...

ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, -: ಅಲ್ಲಮಪ್ರಭುದೇವರ ವಚನ. ✍🏾-;ವಿಶ್ಲೇಷಣೆ- ಲೋಕೇಶ್_ಎನ್_ಮಾನ್ವಿ.

Image
ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ. ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ. ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ.                  ವಚನ-;ಅಲ್ಲಮಪ್ರಭುದೇವರು. ಅಲ್ಲಮರ ಈ ವಚನ ಲಿಂಗಾನುಸಂಧಾನದ ನಂತರ ಅದಕ್ಕೂ ಮೀರಿದ ಪರಿಪೂರ್ಣ ನಿಜ ಸುಖದ  ಬಯಲ ಬಿಡಾಡಿಗಳಿಗೆ ಲಭಿಸುವ ಅನಂತತೆಯ ಆನಂದವಾಗಿದೆ. ಕಣ್ಣಿಂಗೆ ಕಣ್ಣು,  ಕಣ್ಮುಚ್ಚಿ ಮಲಗಿದರೂ ಇಡೀ ಜಗತ್ತನ್ನೇ ತಂದು ತೋರುವ ಮನಸ್ಸು, ನೋಡದ ವಸ್ತುವನ್ನು, ಕಲ್ಪಿಸುವಷ್ಟರಲ್ಲಿ ಅದರ ಚಿತ್ರವನ್ನೇ ತಂದಿಡಬಲ್ಲ ಮನಸ್ಸು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ,  ಅದು ಮನಸ್ಸಿಗೇ ಮನಸ್ಸು ಅರಿವೆಂಬ ಕಣ್ಣು, ಕಂಡಿದ್ದನ್ನು  ಪ್ರಮಾಣಿಸಿ ನೋಡುವ ಅರಿವಿನ ಕಣ್ಣು , ಅದೇ ನೇತ್ರ. ಆ ನೇತ್ರವೇ (ಅರಿವಿನ ದೃಷ್ಠಿಯೇ) ಲಿಂಗವನ್ನು ಅನುಸಂಧಾನಿಸುವ ಸೂತ್ರ, ಆ ಸೂತ್ರವಿಡಿದು ಜ್ಯೋತಿವಿಡಿದು ಜ್ಯೋತಿಯಾದಂತೆ ಸೂತ್ರವೇ ಲಿಂಗ, ಲಿಂಗವೆ ಗುಹ್ಯ, ಹಿಡಿದ ಸೂತ್ರ ಕಾಣಲಾರದ ಪಟ, ಅದುವೇ ಪ್ರಕೃತಿಯ ಅಗೋಚರ ಸತ್ಯ ಗುಹ್ಯ. ಗುಹ್ಯಕ್ಕೆ ಗುಹ್ಯ, ಅಗೋಚರಕ್ಕೂ ಅಗೋಚರ ಪರಮ ವಿಸ್ತ್ರುತ ವಿಸ್ತಾರ ಸತ್ಯವದು,  ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೂ ರಹಸ್ಯ ಸೃಷ್ಠಿಯ ಪ್ರತಿ ಚಲನೆಯೂ   ಕ್ಷಣಕ್ಷಣಕ್ಕೂ ...

ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿ ಆನು ಬದುಕಿದೆನಯ್ಯಾ, ವಚನ- ವಿಶ್ವಗುರು_ಬಸವಣ್ಣನವರು. ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ.

Image
ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿ ಆನು ಬದುಕಿದೆನಯ್ಯಾ, ಅದೇನು ಕಾರಣ ತಂದೆಯೆಂದರಿದೆನಯ್ಯಾ, ಎನ್ನ ಕಾರಣ ತಂದೆಯೆಂದರಿದೆನಯ್ಯಾ, ಅರಿದರಿದು, ನಿಮ್ಮ ಶರಣನು ಆಚರಿಸುವ ಆಚರಣೆಯ ಕಂಡು ಕಣ್ದೆರೆದೆನಯ್ಯಾ, ಕೂಡಲ ಸಂಗಮದೇವಾ .           ✍🏾-; ವಿ ಶ್ವಗುರು ಬಸವಣ್ಣನವರು. ಸ್ಥಲ - ಪಿಂಡಜ್ಞಾನಸ್ಥಲ ವಿಷಯ - ಪುನರ್ಜನ್ಮ  ಭಾವಾರ್ಥ- ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿ ಆನು ಬದುಕಿದೆನಯ್ಯಾ. ಅಯ್ಯಾ, ಪರಮದಯಾಮಯಿಯಾದ ನಿರಾಕಾರ ಸೃಷ್ಠಿಕರ್ತನೇ, ನಿಮ್ಮ  ಶರಣನ (ಅರಿವಿನ ಸಕಾರ ರೂಪ)  ಮರ್ತ್ಯಕ್ಕೆ ತಂದೆಯಾಗಿ ನಾನು ಬದುಕಿದೆನಯ್ಯಾ, ನೆನೆನೆನೆದು ಸುಖಿಯಾಗಿ ಮರೆವೆಯ ಕತ್ತಲು ಕಳೆದು ಅರಿವಿನ ಚಿದ್ಬೆಳಕ ಮೂಡಿ ಆ ಬೆಳಕಿನ ಪಥದಲ್ಲಿ ಸುಖಿಯಾಗಿ ಬದುಕಿದೆನಯ್ಯಾ, ಯಾವ ಕಾರಣಕ್ಕಾಗಿ ನಿಮ್ಮ ಶರಣನನ್ನು ಧರೆಗೆ ತಂದೆಯೆಂದರಿದೆನಯ್ಯಾ, ಎನಗಾಗಿಯೇ ತಾನೇ ಎನ್ನ ಅರಿವಿನ ಅನುಸಂಧಾನಕ್ಕಾಗಿಯೇ ತಾನೇ, ಇದನ್ನು ಅರಿತ ನಾನು ನಿಮ್ಮ ಶರಣರ ಅರಿವಿನ ನುಡಿಗಳ ಕೇಳಿ ನಿಜ ಸುಖಿಯಾದೆ ಭವ ಪಾಶ ಹರಿದು, ಭಕ್ತನಾದೆ, ನಿಮ್ಮ ಶರಣರು ಆಚರಿಸುವ ಸದಾಚರಣೆಗಳನ್ನು ಕಂಡು ಕಂಡು ಎನ್ನೊಳಗಿನ ಅರಿವಿನ ಕಣ್ತೆರೆಯಿದು ನಾನು (ಅರಿವಿನ ಸಕಾರ ರೂಪ) ಶರಣನಾದೆ, ಭವಿತ್ವದ ಜಡತ್ವದಿಂದ ವಿಮೋಚನೆಗೊಂಡು, ಸದಾ ಹೊಸತನ ತುಂಬಿದ ಚೈತನ್ಯಾತ್ಮಕ ‘ಜಾತಿರಹಿತ ‘ ಜಂಗಮ ಬದುಕಿ...

ಉಂಬಲ್ಲಿ ಊಡುವಲ್ಲಿ ಕ್ರೀಯಳಿಯಿತ್ತೆಂಬರು, ಕೊಂಬಲ್ಲಿ ಕೊಡುವಲ್ಲಿ ಕುಲವರಸುವರು, -ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ -; ಲೋಕೇಶ್_ಎನ್_ಮಾನ್ವಿ.

Image
ಉಂಬಲ್ಲಿ ಊಡುವಲ್ಲಿ ಕ್ರೀಯಳಿಯಿತ್ತೆಂಬರು,  ಕೊಂಬಲ್ಲಿ ಕೊಡುವಲ್ಲಿ ಕುಲವರಸುವರು,  ಎಂತಯ್ಯಾ ಅವರ ಭಕ್ತರೆಂತೆಂಬೆ?  ಎಂತಯ್ಯಾ ಅವರ ಯುಕ್ತರೆಂತೆಂಬೆ?  ಕೂಡಲಸಂಗದೇವಾ ಕೇಳಯ್ಯಾ,  ಹೊಲತಿ ಶುದ್ಧ ನೀರ ಮಿಂದಂತಾಯಿತ್ತಯ್ಯಾ            ✍🏾-ವಿಶ್ವಗುರು ಬಸವಣ್ಣನವರು. ಭಾವಾರ್ಥ- ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು. ಅನ್ನವನ್ನು ಉಣುವಾಗ ಅದು ಯಾವ ರೈತ ಬೆಳೆದದ್ದು ಎಂಬುದು ಮುಖ್ಯವಾಗುವುದಿಲ್ಲ, ಆಗ ಅದನ್ನು ಸಂಸ್ಕರಿಸಿ  ಉಣ್ಣುತ್ತಾರೆ ಕಾರಣ ಹಸಿವಿಗೆ ‘ಅನ್ನವೇ ಬ್ರಹ್ಮ’ ತದನಂತರ ಮತ್ತೆ ಜಾತಿಯ ಚರ್ಚೆ. ಹಾಗೆಯೇ… ಉಡುವಾಗ ಬಟ್ಟೆ ಯಾವ ರೈತನ ಹೊಲದ ಹತ್ತಿಯದ್ದು ಅದು ಮುಖ್ಯವಾಗಲ್ಲ, ಯಾವ ಜಾತಿಯವ ತಯ್ಯಾರಿಸಿದ ಅದು ಮುಖ್ಯವಾಗಲ್ಲ, ಬಟ್ಟೆ ತೊಳೆದರೆ ಅದು ಮಡಿಯಾಗುತ್ತದೆ, ಹಾಗೆಯೇ ತಾವು ಧರಿಸುವ ಸತ್ತ ದನದ ‘ಚರ್ಮದ ಪಾದರಕ್ಷೆಯನ್ನು’ ನೀರು ಚುಮುಕಿಸಿ ಶುದ್ಧ ಮಾಡಿ ಧರಿಸಬಹುದಾದರೆ, ಪಾದರಕ್ಷೆಯನ್ನು ತಯ್ಯಾರಿಸಿದ ಜೀವಂತ ಮಾನವನನ್ನು ಜಾತಿವಿಡಿದು ಸತ್ತ ದನಕ್ಕಿಂತ ಜೀಳಾಗಿ ನೋಡುತ್ತಾರೆ, ರೈತ ಬೆಳೆದ ಅನ್ನವನ್ನೇ ಉಣ್ಣುತ್ತಾರೆ, ಆದರೆ  ಅನ್ನ ನೀಡುವ ರೈತನನ್ನು ಕೀಳಾಗಿ ಕಾಣುತ್ತಾರೆ. ಶಿಲ್ಪಿ ಮಾಡಿದ ಚರ್ಮದ ವಸ್ತುಗಳನ್ನೇ ಬಳಸುತ್ತಾರೆ, ಆದರೆ, ಆ ಶಿಲ್ಪಿಯನ್ನೇ ಕೀಳಾಗಿ ಕಾಣುತ್ತಾರೆ, ರೈತ ಬೆಳೆದದ್ದು ಉಣುವಾಗ ಇಲ್ಲದ ಜಾತಿ ಉಂಡ ನಂತರವೇಕೆ..? ಕೊಂಬಲ್ಲ...

ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ ? ಚಿನ್ಮಯಜ್ಞಾನಿ_ಚೆನ್ನಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ- ಲೋಕೇಶ್_ಎನ್_ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ  ?  ಶಬ್ದ ಮೌನಿಯಾದಡೇನಯ್ಯಾ ನೆನಹು ಮೌನಿಯಾಗದನ್ನಕ್ಕರ  ?  ತನು ಬೋಳಾದಡೇನಯ್ಯಾ ಮನ ಬೋಳಾಗದನ್ನಕ್ಕರ  ?  ಇದು ಕಾರಣ _ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಸ್ಥಲವಾರಿಗೆಯೂ ಅಳವಡದು ,. ವಚನ-; #ಚಿನ್ಮಯಜ್ಞಾನಿ _ ಚೆನ್ನಬಸವಣ್ಣನವರು , ಭಾವಾರ್ಥ-; # ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ  ? ಬ್ರಹ್ಮ + ಚಾರಿ = ಬ್ರಹ್ಮಚಾರಿ , ನಾನು ನನ್ನದೆಂಬ ಆಸೆ _ ಆಮಿಷ _ ರೋಷ _ ವಿಷಯಾದಿಗಳನ್ನು ಬಿಟ್ಟು ,  ಶ್ರೇಷ್ಠ ಸತ್ ಚಿಂತನೆಗಳನ್ನು ಆಚರಣೆಯಲ್ಲಿ ಮೈಗೂಡಿಸಿಕೊಂಡವನು ಎಂದರ್ಥ ,. ಹೀಗಿರುವಾಗ ನಾನು ಬ್ರಹ್ಮಚಾರಿ ಶ್ರೇಷ್ಠ ಚಿಂತನೆಗಳನ್ನು ಮೈಗೂಡಿಸಿಕೊಂವನೆಂದು   ಲೋಕದ ಜನರೆದುರು ಬಿಂಬಿಸಿಕೊಂಡು , ಅಂತರಂಗದಲ್ಲಿ ಆಸೆ _ ಆಮಿಷ _ ರೋಷ _ ವಿಷಯಾದಿಗಳನ್ನು ಬಿಡದೆ , ಉದಾ - ಮಾವಿನ ಹಣ್ಣನ್ನು ಬಿಟ್ಟೆನೆಂದರೂ ಅದರ ಸವಿರುಚಿ ಮತ್ತು ರೂಪಕವನ್ನು ಮನದಲ್ಲಿ   ತುಂಬಿಕೊಂಡ ಆಸೆಯಳಿಯದ ಕಪಟಿ ಎಂದೂ ಬ್ರಹ್ಮಚಾರಿಯಾಗಲಾರ ..   ಶಬ್ದ ಮೌನಿಯಾದಡೇನಯ್ಯಾ ನೆನಹು ಮೌನಿಯಾಗದನ್ನಕ್ಕರ  ? ಇನ್ನು ಲೋಕದ ಗೊಡವೆಯೇ ನನಗೆ ಬೇಡೆಂದು , ಮಾತು ಬಿಟ್ಟು ಮೌನಾಚರಣೆ ಮಾಡುವೆನೆಂದರೆ , ಮಾತಿನ...

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

Image
  ಶ್ರೀಗುರುಬಸವಲಿಂಗಾಯ ನಮಃ ಏನಿ ಬಂದಿರಿ ಹದುಳಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ ,  ಕುಳ್ಳಿರೆಂದಡೆ ನೆಲ ಕುಳಿಹೋಹುದೆ , ಒಡನೆ ನುಡಿದಡೆ ಸಿರ  ಹೊಟ್ಟೆಯೊಡೆವುದೆ , ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ . ✍🏾-; ವಿಶ್ವಗುರು _ ಬಸವಣ್ಣನವರು. ಭಾವಾರ್ಥ - ಏನಿ ಬಂದಿರಿ ಹದುಳಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ ,   ಏನ್ರಿ  ಈಗ ಬಂದಿರೆ , ಹೇಗಿದ್ದೀರಾ, ಸೌಖ್ಯವೇ, ಹೇಗಿತ್ತು ಪ್ರಯಾಣ,    ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ,  ಮತ್ತೇನು ಸಮಾಚಾರ   ಎಂದು  ಪ್ರೀತಿಯಿಂದ  ಕೇಳಿ   ವಿಚಾರಿಸಿದರೇನು ನಿಮ್ಮ ಮನೆಯ ಐಶ್ವರ್ಯ ಸಂಪತ್ತು ಹಾರಿ ಹೋಗುವುದೇ ?  ಕುಳ್ಳಿರೆಂದಡೆ ನೆಲ ಕುಳಿಹೋಹುದೆ , ಮನೆಗೆ ಬಂದ ಅತಿಥಿಗಳಿಗೆ,  ಮೊದಲು ಮನೆಯ  ಒಳಗಡೆ ಕರೆದು, ಕುಳಿತುಕೊಳ್ಳಿ  ದಣಿವಾಗಿದೆಯೇ ನೀರು ಕುಡಿಯಿರಿ  ಎಂದು ಉಪಚರಿಸುವುದು ಸಂಸ್ಕೃತಿ, ಅದನ್ನು ಬಿಟ್ಟು ಬಂದ ಅತಿಥಿಗಳಿಗೆ ಗೌರವಿಸದೇ  ಅವರ ಭಾವನೆಗಳಿಗೆ ಬೆಲೆ ಕೊಡದೇ,  ಮನೆಯ ಅಂತೆಯೇ ನಿಲ್ಲಿಸಿ, ಮಾತಾಡಿ ಕಳಿಸಿದರೇನು.? ಬಂದು, ಏಕೆ ಅವರು ಬಂದು ಕುಳಿತರು ನಿಮ್ಮ ಮನೆಯ,  "ನೆಲ ತೆಗ್ಗು ಗುಂಡಿ ಬೀಳುವುದೆ" ,. ? ಎಂದು ಪ್ರಶ್ನಿಸುತ್ತಾರೆ ಬ...

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

Image
  ಓಂ ಶ್ರೀಗುರುಬಸವಲಿಂಗಾಯ ನಮಃ ‘ ನಿ ಜಸುಖಿ   ಹ ಡಪದ   ಅ ಪ್ಪಣ್ಣನವರು ’ ‘ ನಿ ಜಸುಖಿ ಹ ಡಪದ ಅ ಪ್ಪಣ್ಣನವರು ’ ಹ ನ್ನೆರಡನೇ ಶತಮಾನ ಮೌಢ್ಯತೆಯ ಕಾರ್ಮೋಡದಿಂದ ಸರಿದ ಸುಜ್ಞಾನ ಯುಗ , ಭಕ್ತಿ ಯುಗ , ವೈಚಾರಿಕತೆಯ ಯುಗ , ಸಮಾನತೆ ಸೌಹಾರ್ದತೆಯ ಕಂಡ ಯುಗ , ಅದುವೇ ಬಸವ ಮಹಾ ಯುಗ ,  ಈ ಬಸವ ಯುಗದ ಉತ್ಸಾಹಿ ಶರಣರೇ ಹಡಪದ ಅಪ್ಪಣ್ಣನವರು , ಅಪ್ಪಣ್ಣನವರ ಜನ್ಮಸ್ಥಳವು ಕೂಡ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಜನಿಸಿದ್ದಾರೆ ಎಂಬ ಪ್ರತೀತಿ ಇದೆ , ಇದು ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರದಿಂದ 6 ಕಿ , ಮಿ  ದೂರ  ಇದೆ . ಹೀಗಿರುವಾಗ ಹಡಪದ ಅಪ್ಪಣ್ಣ ಎಂದೇ ಪ್ರಖ್ಯಾತರಾದ ಶರಣರ , ಕಾಯಕವಾದ ಹಡಪ ಪದಕ್ಕೆ ಎರಡು ಅರ್ಥವಿದೆ , ಹಡಪ ಎಂದರೆ ಡಬ್ಬೆ ಅದು ವೀಳ್ಯೆದ ಡಬ್ಬೆ , ಹಾಗೂ ಕ್ಷೌರ ಸಾಮಗ್ರಿಯ ಡಬ್ಬೆ , ಎರಡಕ್ಕೂ ಹಡಪ ಎಂಬ ಹೆಸರಿದೆ , ಹೀಗಿರುವಾಗ ಅಪ್ಪಣ್ಣನವರು ಅಪಾರ ಭಕ್ತಿ ಜ್ಞಾನವುಳ್ಳವರಾಗಿದ್ದರು ಕಾಯಕ ಜೀವಿಗಳಾಗಿ ಕ್ಷೌರ ವೃತ್ತಿಯನ್ನು ನಡೆಸಿಕೊಂಡು ಹೋಗುತ್ತಿದ್ದ ಶರಣರು ,  ಮಾಡುವ ಕಾಯಕ ಯಾವುದಾದರೂ ಅದು ಮೇಲೂ ಅಲ್ಲ, ಕೀಳೂ ಅಲ್ಲ, ತನು_ಮನ_ಧನವೆಂಬ ತ್ರಿಕರಣ ಶುದ್ಧವಾಗಿ ಮಾಡುವುದೇ ಕಾಯಕವಾಗಿದೆ,  ಕಾಯಕ ನಿಷ್ಠರಾದ ಶರಣ ಹಡಪದ ಅಪ್ಪಣ್ಣನವರು,  ಲಿ...