ಅಕ್ಕಮಹಾದೇವಿಯವರ ವಚನದ ಭಾವಾರ್ಥ ವಿಶ್ಲೇಷಣೆ.
ಎನ್ನ ನಾಲಗೆಗೆ ಬಪ್ಪರುಚಿ ನಿಮಗರ್ಪಿತ.
ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗರ್ಪಿಸದ ಮುನ್ನ ಮುಟ್ಟಲಮ್ಮೆನಯ್ಯಾ.
-;#ಜಗನ್ಮಾತೆ ಅಕ್ಕಮಹಾದೇವಿಯವರು,
#ಭಾವಾರ್ಥ-;
ಎನ್ನ ನಾಲಗೆಗೆ ಬಪ್ಪರುಚಿ ನಿಮಗರ್ಪಿತ.
ಆಹಾ ಎಂಥಹಾ ಮಧುರು ಭಕ್ತಿ ಅಕ್ಕಮಹಾದೇವಿ ತಾಯಿಯದ್ದು, ಸಾವಿಲ್ಲದ, ಕೇಡಿಲ್ಲದ, ಭವವಿಲ್ಲದ, ಭಯವಿಲ್ಲದ,ನಿರ್ಭಯ ಚೆಲುವ ಚೆನ್ನಮಲ್ಲಿಕಾರ್ಜುನನ ಬೆರೆತು ಬೇರಿಲ್ಲದಂತಿಪ್ಪಳಾಗಿ ಅಂಗಗುಣವಳಿದ ಲಿಂಗಗುಣ ಸಂಪನ್ನೆ, ಶರಣೆ ಸತಿಯಾಗಿ ಲಿಂಗಪತಿ ಭಾವ ತುಂಬಿರಲು,
ಅಂಗೇಂದ್ರಿಯಗಳು ಅಡಗಿ ಲಿಂಗೇಂದ್ರಿಯಗಳಾದವಾಗಿ.
ಕಣ್ಣು ನೋಡುವ ನೋಟ ಲಿಂಗದ ನೋಟ, ಕಿವಿ ಕೇಳುವ ವಾರ್ತೆ ಲಿಂಗವಾರ್ತೆ, ಮೂಗಿಗೆ ಸೂಸುವ ಪರಿಮಳ ಲಿಂಗ ಪರಿಮಳ, ಎನ್ನ ನಾಲಗೆ ನುಡಿವ, ಪ್ರತಿ ನುಡಿಯೂ ಲಿಂಗವಾಣಿ, ಎನ್ನ ನಾಲಗೆಗೆ ತಾಕುವ ರುಚಿ ಸತ್ವವ ಸೂರೆಮೂಡಿ ತನ್ನೊಗಳಗಿನ ಲಿಂಗಕ್ಕೆ ಅರ್ಪಿಸುತ್ತಾಳೆ ಮಹಾದೇವಿಯಕ್ಕ,
ಎನ್ನ ನಾಸಿಕಕ್ಕೆ ಬಪ್ಪ ಪರಿಮಳ ನಿಮಗರ್ಪಿತ.
ಸಹಸ್ರ ಸಹಸ್ರ ಸುಗಂಧ ಪುಷ್ಪಗಳು ಸೂಸುವ ಸುವಾಸನೆಯೂ, ಎನ್ನ ನಾಸಿಕದಿಂದ ನಿಮಗರ್ಪಿತ, ಭಕ್ತಿಪರಿಮಳ.
ಎನ್ನ ಕಾಯಕ್ಕೆ ಬಪ್ಪ ಸುಖ ನಿಮಗರ್ಪಿತ,
ಚೆನ್ನಮಲ್ಲಿಕಾರ್ಜುನಯ್ಯಾ.
ನನ್ನ ದೇಹಕ್ಕೆ ಬರುವ ಸುಖವು ನಿಮಗರ್ಪಿತ, ನನ್ನಲ್ಲಿ ಸುಖ-ದುಃಖವೆಂಬ ಭಿನ್ನವಿಲ್ಲದೇ ಅದು ಕೂಡ ಪ್ರಸಾದವೆಂದು ಸ್ವಿಕರಿಸುವೆ, ಆದ ಕಾರಣ ನನಗೊದಗಿದ ಸುಖವು ಕೂಡ ನಿಮಗರ್ಪಿತ. *#ಚೆನ್ನಮಲ್ಲಿಕಾರ್ಜುನ* ಎನಗೆ ಸರ್ವಸ್ವವೂ ನೀವಾದಿರಾಗಿ, ಬಂದ ಪರಿಸ್ಥಿತಿಯನ್ನು ಛಲದಿಂದ ಎದುರಿಸಿ ಸಾಧಿಸುವೆ, ಏನೇ ಬಂದರೂ ಅದು ನಿಮ್ಮ ಆಜ್ಞೆ, ಎಂದು ನಿಮಗರ್ಪಿಸಿ, ಸಮಾಧಾನದಿಂದ ಸ್ವೀಕರಿಸುವೆ, ನಿಮ್ಮದೆಂದು ಅರಿಯದ ಮುನ್ನ ಮುಟ್ಟಲಾರೆ, ನಿಮ್ಮದೆಂದು ಅರಿತು ಮುಟ್ಟಿದ ಮೇಲೆ ಅದು ಲಿಂಗಮಯ ಪ್ರಸಾದವ ನಿಮಗರ್ಪಿಸಿ, ಸಂದೇಹಿಸದೆ ಸ್ವೀಕರಿಸುವೆ ಎನ್ನುತ್ತಾರೆ
ಜಗನ್ಮಾತೆ ಅಕ್ಕಮಹಾದೇವಿಯವರು.👏🏻👏🏻
✍🏾ವಚನ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.
sir Akkama mahadivi avra odalillade nudiellade kadeillada vachanada menige helii
ReplyDelete