Posts

Showing posts with the label ಚೆನ್ನಬಸವಣ್ಣನವರ ವಚನಗಳು ಮತ್ತು ಭಾವಾರ್ಥ.

‘ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ’ ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ -; ಲೋಕೇಶ್ ಎನ್ ಮಾನ್ವಿ.🙏🏻

Image
  ಶ್ರೀಗುರುಬಸವಲಿಂಗಾಯನಮಃ ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ ಧರೆ ಧನ ವನಿತೆಯರು   ಎನ್ನವರು ತನ್ನವರೆಂದು ಹೋರಿ ಹೋರಿ ಸಾಯುತ್ತಿದೆ ಜೀವ ,  ಸರ್ವಕರ್ತೃ ಕೂಡಲಚೆನ್ನಸಂಗಯ್ಯನೆಂದರಿಯದೆ .. 👏👏 ✍🏾• ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು • 🙏                             ಭಾವಾರ್ಥ -; ‘ ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ ’ ಚಿಲಿಪಿಲಿ ಎಂದು ಹಾಡುತ್ತಾ ಬಂದ ಗುಬ್ಬಚ್ಚಿಗಳು . ತನಗೆ ತನ್ನ ಮರಿಗಳಿಗೆಂದು , ಒಂದು ಗೂಡು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದವು , ಒಂದು ದಿನ ಗಡಿಬಿಡಿಯಲ್ಲಿ ಯಾವುದೊ ಪಾಳು ಬಿದ್ದ ಮನೆಯಲ್ಲೊ ಅಥವಾ ಇನ್ಯಾರೊ ಕಟ್ಟಿದ ಮನೆಯ ಗೋಡೆಯ ಸಂದಿಯಲ್ಲೊ ಗೂಡುಕಟ್ಟಿ , ಆಹಾರ ಸಂಗ್ರಹದಲ್ಲಿ ತೊಡುಗುತ್ತವೆ ,  ಇತರೆ ಗುಬ್ಬಿಗಳನ್ನು ಕರೆತಂದು  ಆ ಮನೆ ತಮ್ಮದೆಂದು ಅತ್ಯಂತ ಗರ್ವದಿಂದ ತೋರ್ಪಡಿಸುತ್ತವೆ ,  ಒಂದುದಿನ ಎಲ್ಲವೂ ತನ್ನದೆನ್ನುವ ಸಂತಸದಲ್ಲಿ  ಕುಳಿತು ಮೈಮರೆತವು ಗುಬ್ಬಿಗಳು . ಇದನ್ನು ಕಂಡ ಮನೆಯ ಮಾಲಿಕ ಗೋಡೆಯ ಸಂದಿಯನ್ನು   ಮುಚ್ಚಿಬಿಡುತ್ತಾನೆ . ಅದನ್ನೇ ಆಶ್ರಯಿಸಿ    ಕ್ಷಣಿಕವಾದುದ್ದನ್ನು ನಂಬಿ ಎಲ್ಲವೂ ತನ್ನದೆಂದು ಮೈಮರೆತ ಗುಬ್ಬಿಗಳು ...

ಅನುಭಾವವೆಂದರೇನು ? ಓದಿರಿ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ವಚನದ ವಿಶ್ಲೇಶಣೆಯಲ್ಲಿ.

Image
          ಓಂ ಶ್ರೀಗುರುಬಸವಲಿಂಗಾಯ ನಮಃ ಅನುಭಾವ ಅನುಭಾವವೆಂದೆಂಬರು ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿರೋ . ಅನುಭಾವವೆಂಬುದು ಅಂತರಂಗ ಶುದ್ಧಿ ಕಾಣಿರೋ , ಅನುಭಾವವೆಂಬುದು ರಚ್ಚೆಯ ಮಾತೆ ? ಅನುಭಾವವೆಂಬುದು ಸಂತೆಯ ಸುದ್ದಿಯೆ ? ಅನುಭಾವವೆಂಬುದೇನು ಬೀದಿಯ ಪಸರವೆ ? ಏನೆಂಬೆ ಹೇಳಾ ಮಹಾಘನವ ! ಆನೆಯ ಮಾನದೊಳಗಿಕ್ಕಿದರಡಗೂದೆ ದರ್ಪಣದೊಳಗಡಗೂದಲ್ಲದೆ ? ಕಂಡ ಕಂಡಲ್ಲಿ ಗೋಷ್ಠಿ , ನಿಂದ ನಿಂದಲ್ಲಿ ಅನುಭಾವ , ಬಂದ ಬಂದಲ್ಲಿ ಪ್ರಸಂಗವ ಮಾಡುವ ನಿರ್ಬುದ್ಧಿ ನೀಚರ ಮೆಚ್ಚ *# ಕೂಡಲಚೆನ್ನಸಂಗಮದೇವ .* • ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು •                             # ಭಾವಾರ್ಥ -: #ಅನುಭಾವ ಅನುಭಾವವೆಂದೆಂಬರು ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿರೋ , ಅನುಭಾವ ಎಂಬುದು ತೋರಿಕೆಯ ಹಿರಿತನವರಲ್ಲ , ಅನುಭಾವವೆಂಬುದು , ಭೂಗರ್ಭದಲ್ಲಡಗಿದ ಖನಿಜ ಸಂಪತ್ತಿದ್ದಂತೆ , ಚಿನ್ನ - ಮುತ್ತು - ರತ್ನ - ವಜ್ರಗಳ ನಿಕ್ಷೇಪವೇ ಭೂಮಿಯ ಅಂತರಾಳದಲ್ಲಡಗಿರುವಂತೆ , ತನ್ನೊಳಗೆ ಅನುಭಾವವೆಂಬ ರತ್ನವು ಅಡಗಿದೆ ,. #ಅನುಭಾವವೆಂಬುದು ಅಂತರಂಗ ಶುದ್ಧಿ ಕಾಣಿರೋ , ಬಹಿರಂಗದಲ್ಲಿ ಆಕರ್ಷಕವಾಗಿ , ವಿಭೂತಿ ಗಂಧ ರುದ್ರಾಕ್ಷಿ...

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.

Image
ಓಂ ಶ್ರೀಗುರುಬಸವಲಿಂಗಾಯ ನಮಃ.  ‘ಯುವ ಕಣ್ಮಣಿ Youth Icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು’ ಯಾರ ಹೆಸರು ಕೇಳಿದರೆ ಎನ್ನ ಕಿವಿ ನಿಮಿರುವುದೊ, ಯಾರ ಹೆಸರು ಕೇಳಿದರೆ ಮೈ ಮೇಲಿನ ರೋಮ ರೋಮವು ಎದ್ದೇಳ್ವವೊ, ಅವರೇ, ಅವರೇ… ನನ್ನ ಹೀರೋ, ಚಿನ್ಮಯಜ್ಞಾನಿ, ಅವಿರಳಜ್ಞಾನಿ, ದ್ವಿತೀಯ ಶೂನ್ಯಸಿಂಹಾಸನಾಧೀಶ್ವರ ಷಟಸ್ಥಲಚಕ್ರವರ್ತಿ ಉಳವಿಯ ಚೆನ್ನಬಸವಣ್ಣನವರು . ಇವರು ಜೀವಿಸಿದ ಜೀವಿತಾವಧಿ ಅತ್ಯಂತ ಕಡಿಮೆ, ಕೇವಲ ೨೪ವರ್ಷ ಮಾತ್ರ. ಆದರೆ ಇವರು ಬದುಕಿದ ಜೀವನ ಇದೆಯಲ್ಲಾ ಅದು ಯುಗಯುಗಗಳೇ ಕಳೆದರೂ, ಸೂರ್ಯಚಂದ್ರಾದಿಗಳೇ ಅಳಿದರೂ, ಸೃಷ್ಠಿಸಮಷ್ಠಿಯ ಅಂತ್ಯಕಾಲಕ್ಕೂ ನಿಲುಕದ ಮಹಾನ್ ವ್ಯಕ್ತಿತ್ವವದು,  ಹೌದು, ಇವರು ಕಲ್ಯಾಣಕ್ರಾಂತಿ ಪುರುಷ ಭಕ್ತಿಭಂಡಾರಿ ಅಣ್ಣಾ ಬಸವಣ್ಣನವರ ಸೋದರ ಅಳಿಯ, ಅಕ್ಕನಾಗಲಾಂಬಿಕೆ ಮತ್ತು ಶಿವದೇವಯ್ಯನವರ ಕಾರುಣ್ಯದ ಕಂದ, ತಾಯಿಯ ಗರ್ಭದಲ್ಲಿರುವಾಗಲೇ ಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದವರು ಚೆನ್ನಬಸವಣ್ಣನವರು. ಜನಿಸುತ್ತಲೇ ಶಿವತೇಜಸ್ಸು, ಸೂರ್ಯನ ಪ್ರಕಾಶ, ಚಂದ್ರನಂತೆ ಬೆಳದಿಂಗಳ ಕಂಗಳು, ಮುದ್ದು ಮುಖ, ಅಚಾರ ವಿಚಾರದಲ್ಲಿ  ಅಪ್ರತಿಮ ಜ್ಞಾನಿ ಎನ್ನಪ್ಪ ಚೆನ್ನಬಸವಣ್ಣನ ಕುರಿತ ಬಸವಣ್ಣನವರು ಹೀಗೆ ಹೇಳುತ್ತಾರೆ, ಬಿತ್ತದೆ ಬೆಳೆಯದೆ ಬೆಳೆದ ಹೆಬ್ಬೆಳಸಿನ ರಾಶಿಯ ನೋಡಾ,
ಸುಗಂಧ ಬಂಧುರದಂತೆ ಹುಟ್ಟುತ್ತವೆ ಪರಿಮಳ !
ಆದಿ ಅನಾದಿಯಿಲ್ಲದ ಮುನ್ನ ತನ್ನಿಂದವೆ ತಾನಾಗಿರ್ದ ಕಾರಣ
ಮುಟ್ಟದೆ ತಟ್ಟದೆ ಗು...