‘ಕ್ರಾಂತಿಕಾರಿ ಶರಣರು’ ಉರಿಲಿಂಗಪೆದ್ದಿಗಳು.
*‘ ಕ್ರಾಂತಿಕಾರಿ ಶರಣರು -02’* ‘ ೯೦೦ ವರ್ಷಗಳ ಹಿಂದೆಯೇ , ಜಾತಿ ವ್ಯವಸ್ಥೆಗೆ ಸೆಡ್ಡು ಹೊಡೆದು ’ ‘ ಗುರು ಪೀಠಕ್ಕೆ ಸಾರಥಿಯಾದ , ಶರಣ ಉರಿಲಿಂಗಪೆದ್ದಿಯವರು ’ ಕರ್ನಾಟಕ ಸರಕಾರ ಗುರುತಿಸಿ ದಲಿತ ವಚನಕಾರರ ಪಟ್ಟಿಯಲ್ಲಿ , ಶರಣ ಉರಿಲಿಂಗಪ್ಪೆದ್ದಿಯವರು ಕೂಡ ಒಬ್ಬರು ಇವರು ಬಸವಣ್ಣನವರ ಸಮಕಾಲೀನರು . ಇವರ ಅಂಕಿತನಾಮ - ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ . ಇವರ ಒಟ್ಟು 360 ವಚನಗಳು ಲಭ್ಯವಿವೆ . ಪೂರ್ವಾಶ್ರಮದಲ್ಲಿ ಈತನೊಬ್ಬ ಚೋರವೃತ್ತಿಯವ ಎಂದು ತಿಳಿದು ಬರುತ್ತದೆ , ಆ ನಂತರ ಈತ ಮಹಾ ಶರಣನಾಗಿ ಬದಲಾದ ಸನ್ನಿವೇಶವನ್ನು ನೋಡೋಣ ಬನ್ನಿ , ಈಗಿನ ಮಹಾರಾಷ್ಟ್ರ ರಾಜ್ಯದಲ್ಲಿ ಅವಸೆ ಕಂಧಾರ ಎಂಬುದು ಒಂದು ಊರಿನಲ್ಲಿ . ಉರಿಲಿಂಗದೇವ ಎಂಬ ಶರಣನಿದ್ದ ಈತನೂ ಕೂಡ ವಚನಕಾರನೇ ಎಂಬುದು ವಿಶೇಷ , ಉರಿಲಿಂಗದೇವ ಭಕ್ತಜನಕ್ಕೆ ಉಪದೇಶ ಮಾಡುತ್ತಿದ್ದ ಗುರು . ಅವನು ಇಪ್ಪತ್ತೊಂದು ಗುರುಸಂಪ್ರದಾಯಕ್ಕೆ ಗುರುವೆಂದು ಕರೆಸಿಕೊಂಡವ , ಒಮ್ಮೆ ನಂದ್ಯವಾಡದಲ್ಲಿ ಸೂರಯ್ಯ ಎಂಬ ಭಕ್ತನಿಗೆ ಅವನ ಮನೆಯಲ್ಲಿ ಉಪದೇಶವನ್ನು ಮಾಡುತ್ತಿದ್ದ . ಅದಕ್ಕೆ ಬೇಕಾದ ಬೆಲೆ ಬಾಳುವ ಪೂಜಾ ಸಮಗ್ರಿಗಳನ್ನು ತಂದಿದ್ದ , ಈ ವಿಷಯ ತಿಳಿದಿದ್ದ ಪೆದ್ದಣ್ಣ ಅದೇ ದಿನ ರಾತ್ರಿ ಸೂರಯ್ಯನ ಮನೆಗೆ ಕಳ್ಳತನ ಮಾಡಲು ಹೊರಟ . ಆದರೆ ನಾನಾ ಕಾರಣಗಳಿಂದ ಹ...