ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ
ಇಷ್ಟಲಿಂಗ ಪೂಜಕರೆಲ್ಲ ದೃಷ್ಟಲಿಂಗವನೆತ್ತ ಬಲ್ಲರೊ ?
ಜಂಗಮವೆ ಲಿಂಗವೆಂಬುದನು ಭವಭಾರಿಗಳೆತ್ತ ಬಲ್ಲರೊ ?
ಕೂಡಲಚೆನ್ನಸಂಗಯ್ಯನಲ್ಲಿ, ಮಹಾಪ್ರಸಾದಿ ಬಸವಣ್ಣನೆ ಬಲ್ಲ.
ವಚನ-:ಚಿನ್ಮಯಜ್ಞಾನಿ_ಚೆನ್ನಬಸವಣ್ಣನವರು.
ಭಾವಾರ್ಥ-:
ಇಷ್ಟಲಿಂಗ ಪೂಜಕರೆಲ್ಲ, ದೃಷ್ಟಿಲಿಂಗವನೆತ್ತ ಬಲ್ಲರೊ ?
ಅಂಗೈಯೊಳಗಿನ ಇಷ್ಟಲಿಂಗಕ್ಕೆ,
ಬಲು ಕಷ್ಟದಿಂದ ಅಭಿಷೇಕವನ್ನು ಮಾಡಿ.ಳ ತರತರದ ಪತ್ರೆಪುಷ್ಪಗಳಿದ ಪೂಜಿಸಿ. ಭಕ್ಷ್ಯಭೋಜನಗಳನಿಟ್ಟು ನೈವೇದ್ಯ ಮಾಡಿದ ಮಾತ್ರಕ್ಕೆ ನಿಮ್ಮ ಪೂಜೆ ಫಲಪ್ರದವಾಗುವುದಿಲ್ಲ..
ಎರೆದರೆ ನೆನೆಯದು. ಮೆರೆದರೆ ಬಾಡದು.,
ಇಂಥಹಾ ಅದ್ಭುತ
'ಇಷ್ಟಲಿಂಗಕ್ಕೆ"
ನಿಮ್ಮ 'ನಿರ್ಮಲ ಮನಸ್ಸೆ', ಮಹಾಮಜ್ಜನ'ಜಳಕ'
ನಿಮ್ಮ 'ನಿಷ್ಕಲ್ಮಶ ಭಕ್ತಿಯೆ ಪುಷ್ಪ,'
ನಿಮ್ಮ ದೃಷ್ಟಿಯು ಅತ್ತಲಿತ್ತ ಸುತ್ತದೆ.
ಇಷ್ಟಲಿಂಗದ ಮಧ್ಯೆ ಕೇಂದ್ರೀಕೃತವಾಗಿ
ತದೇಕಚಿತ್ತದಿಂದ ನೋಡುತ್ತ. ನೋಡುತ್ತಾ..
ಮೈಮನ ಮರೆದು, ಲಿಂಗಯೋಗದಿ ಬೆರೆದು.
ಲಿಂಗಾಂಗ ಸಾಮರಸ್ಯದ ಸಂತಸವನ್ನು ಅನುಭವಿಸಬೇಕು..
ಇದು ಬರಿಯ ಇಷ್ಟಲಿಂಗದ ಬಾಹ್ಯ ಪೂಜಕರಿಗೆ ತಿಳಿಯುವುದಿಲ್ಲ..
#ಜಂಗಮವೆ ಲಿಂಗವೆಂಬುದನು ಭವಭಾರಿಗಳೆತ್ತ ಬಲ್ಲರೊ..?
ಜಂಗಮಕ್ಕೆರೆದರೆ ಸ್ಥಾವರ ನೆನೆದಿತ್ತು
ಎಂಬಂತೆ
(ಜಂಗಮ) ಎಂದರೆ ಜಾತಿಯಲ್ಲ.,
ತಮ್ಮೊಳಗಿನ. ಆತ್ಮದ ಪರಮ ಸತ್ಯವನರಿತ ಜ್ಞಾನಿ.
ಸರ್ವರೊಳು ದೇವರನ್ನೇ ಕಾಣುವ ಜೀವಿಯೆ ಜಂಗಮ.
ಶರಣರ ದೃಷ್ಟಿಯಲ್ಲಿ ಜಂಗಮ ಎಂದರೆ ಜಾತಿ, ಧರ್ಮ, ವರ್ಗ, ವರ್ಣ,
ರಹಿತ ಇಡೀ ಸಮಾಜವೇ ಜಂಗಮ.
ಈ ಸಮಾಜಕ್ಕೆ ಸೇವೆ ಸಲ್ಲಿಸಿ ಅರ್ಪಿಸಿದರೆ
ಲಿಂಗಕ್ಕೆ ಅರ್ಪಿಸಿದಂತೆ..
ಹಸಿದ ಜೀವಿಗೆ ತುತ್ತು ಅನ್ನವ ನೀಡಿದರೆ ಲಿಂಗ ಸಂತೃಪ್ತಿಯಾದಂತೆ,
ಇದನ್ನು ಬಿಟ್ಟು ಎಷ್ಟೇ ಖರ್ಚು ಮಾಡಿ ಪೂಜೆ ಪುನಸ್ಕಾರ ಅಲಂಕಾರ ಮಾಡಿ
ಬರಿ ಲಿಂಗದ ಕಡೆ ಕೈ ನೈವೇದ್ಯ ಮಾಡಿದರೆ ದೇವರು ಮೆಚ್ಚಲಾರ..
ಕೂಡಲ ಚೆನ್ನಸಂಗಯ್ಯನಲ್ಲಿ ಮಹಾಪ್ರಸಾದಿ ಬಸವಣ್ಣನೆ ಬಲ್ಲ.
ಇದನ್ನು ಮಹಾಪ್ರಸಾದಿ. ಸಮಾಜ ಪ್ರೇಮಿ. ಬಸವಣ್ಣನವರು ಬಲ್ಲರು.
ಆದ ಕಾರಣ ಪೂಜೆಗಿಂತ ಹೆಚ್ಚು ಪ್ರಾಧಾನ್ಯತೆ
ದಾಸೋಹಕ್ಕೆ ಮತ್ತು ಸಮಾಜ ಸೇವೆಗೆ ನೀಡಿದ್ದರು.
ನಮ್ಮ ಬಸವಾದಿ ಶಿವಶರಣರು ಎನ್ನುತ್ತಾರೆ.
ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು..👏🏻👏🏻
ಅರ್ಥಸಹಿತ ವಿಶ್ಲೇಷಣೆ-: ಲೋಕೇಶ್ ಎನ್ ಮಾನ್ವಿ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ReplyDeletejayakumarcsj@gmail.com