ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-
ಶ್ರೀಗುರುಬಸವಲಿಂಗಾಯ ನಮಃ
ಏನಿ ಬಂದಿರಿ
ಹದುಳಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ, ಕುಳ್ಳಿರೆಂದಡೆ ನೆಲ ಕುಳಿಹೋಹುದೆ, ಒಡನೆ ನುಡಿದಡೆ ಸಿರ ಹೊಟ್ಟೆಯೊಡೆವುದೆ, ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ .
✍🏾-; ವಿಶ್ವಗುರು_ಬಸವಣ್ಣನವರು.
ಭಾವಾರ್ಥ-
ಏನಿ ಬಂದಿರಿ
ಹದುಳಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ,
ಏನ್ರಿ ಬಂದಿರಿ, ಆರಾಮ ಇದ್ದೀರಾ ಮತ್ತೇನು ಸಮಾಚಾರ ಮನೆ ಕಡೆ ಎಲ್ಲರೂ ಹೇಗಿದ್ದಾರೆ, ಎಂದು ಕೇಳಿ ವಿಚಾರಿಸಿದರೇನು ನಿಮ್ಮ ಮನೆಯ ಐಶ್ವರ್ಯ ಸಂಪತ್ತು ಹಾರಿ ಹೋಗುವುದೇ?
ಕುಳ್ಳಿರೆಂದಡೆ ನೆಲ ಕುಳಿಹೋಹುದೆ,
ಬಂದವರಿಗೆ ಕಳಿತುಕೊಳ್ಳಿ ಎಂದು ಉಪಚರಿಸಿದರೇನು
ನೆಲ ತೆಗ್ಗು ಗುಂಡಿ ಬೀಳುವುದೆ,. ?
ಒಡನೆ ನುಡಿದಡೆ ಸಿರ
ಹೊಟ್ಟೆಯೊಡೆವುದೆ, ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ .
ಶರಣು ಬನ್ನಿ, ಕುಳಿತುಕೊಳ್ಳಿ, ಹೇಗಿತ್ತು ಪ್ರಯಾಣ ಮನೆಯಲ್ಲಿ ಎಲ್ಲರೂ ಸೌಕ್ಯವೇ ಎಂದು ವಿಚಾರಿಸಿದರೇನು ನಿಮ್ಮ ತಲೆ ಒಡೆದು ಹೋಗುತ್ತದೆಯೇ.? ಅಥವಾ ನಿಮ್ಮ ಹೊಟ್ಟೆ ಸೀಳಿ ಕರುಳು ಕಿತ್ತು ಬರುತ್ತದೆಯೇ.? ಬಂದ ಅತಿಥಿಗಳನ್ನು ಕೂಡಿಸದೇ, ಸರಿಯಾಗಿ ಮಾತಾಡಿಸದೇ, ನಿಮ್ಮ ಒಣ ಪ್ರತಿಷ್ಠೆಯನ್ನು ತೋರಿಸಿದರೆ ಏನು ಫಲ, ಅದು ವ್ಯರ್ಥ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಬಂದ ಅತಿಥಿಗಳಿಗೆ ಏನನ್ನು ಕೊಡಲಾಗದಿದ್ದರೂ ಇಲ್ಲ, ಕನಿಷ್ಠ ಗೌರವವನ್ನೂ ಕೊಡದಿದ್ದರೆ, ಮೂಗ ಕ್ವೊಯ್ವುದ ಮಾಬನೆ ಕೂಡಲಸಂಗಮದೇವಯ್ಯ, ಸಮಾಜಕ್ಕೆ ನಿನ್ನ ನಿಜ ಮುಖವನ್ನು ತೋರಿಸಿ ಅವಮಾನಿಸದೇ ಬಿಡಲಾರನು ಭಗವಂತ ಎಂದು ಎಚ್ಚರಿಸುತ್ತಾರೆ ವಿಶ್ವಗುರು_ಬಸವಣ್ಣನವರು,.
ಎಲ್ಲರಿಗೂ ಶರಣು ಶರಣಾರ್ಥಿಗಳೊಂದಿಗೆ,
✍🏾ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ,.
Beautiful explanation
ReplyDeleteIf you have any translation copies of basava vachanas please contact me i wish to purchase.
ReplyDeleteDr B T Lawani
9370969607
b.t.lawani@gmail.com