Posts

ಇತ್ತೀಚಿನ ಲೇಖನಗಳು..

ವೀರವಿರಾಗಿಣಿ ಅಕ್ಕಮಹಾದೇವಿಯವರ ಯೋಗಾಂಗ ತ್ರಿವಿಧಿ.

Image
  ವೀರವಿರಾಗಿಣಿ ಅಕ್ಕಮಹಾದೇವಿಯವರ ಯೋಗಾಂಗ ತ್ರಿವಿಧಿ. ಶ್ರೀ ಮಹಾಮಹಿಮನೆ ಸೋಮಶೇಖರ ಗುರುವೆ, ಕಾಮಿತ ಫಲವ ಕೊಡು ಕಂಡಾ ಎನ್ನ| ಹೃ ದ್ವಾಮದೊಳ್ ನಿಂದು ಮೆರೆ ಕಂಡಾ || 1 || ಮೊದಲು ಮಾಡುವೆ ನಾನು ಸದಮಲ ಗುರುವಿನ ಚದುರ ಮತಿಗಳನು ಬಲಗೊಂಡು | ತತ್ವದ ಪದಗಳನಾಂತು ಮುದದಿಂದ || 2 || ಜೀವ ಪರಮರ ಭೇದಭಾವವನರಿವಡೆ ಆವಾವಮುಖದೊಳಿರುತಿಹುದೊ| ಎನ್ನಯನು ಭಾವಕ್ಕೆ ಬಂದುದನೊರೆವೆನು || 3 || ಶರಣರ ನೆಲೆಗಳನ್ನು ಅರಿವಡೆ ಅಗಣಿತವು ಹರಿಯಜ ಸುರರಿಗಳವಲ್ಲ | ವೆಂದೆನಲು ಒರೆದೆನು ಅವರ ಕೃಪೆಯಿಂದ || 4 || ಎಲ್ಲ ದೇವರ ದೇವ ವಲ್ಲಭನೆ ಗುರು ಚನ್ನ ಮಲ್ಲಿಕಾರ್ಜುನನೆ ಮನದೊಳಗೆ| ಇರು ಕಂಡಾ ಬಲ್ಲಂತೆ ನಿಮ್ಮ ಸ್ತುತಿಸುವೆನು || 5 || ಆರು ಭೂತಂಗಳಲಿ ಆರಾರು ತತ್ವದಲ್ಲಿ ಪೂರೈಸಿ ಇಪ್ಪ ಘನವನ್ನು | ಮನದಲ್ಲಿ ಆರೈದು ತಿಳಿದಡವ ಮುಕ್ತ || 6 || ಮಾಘಮಾಸವುಪೋಗೆ ಮೇಗೆ ಬಂದಿತು ಚೈತ್ರ ಬೇಗ ಮಾಮರನು ತಣ್ಣೀರೆರೆ | ಅದ ಕಂಡು ಕೂಗಿ ಕರೆಯಿತ್ತು ಕಳಕಂಠ || 7 || ಆಕಾಶದೊಳಗಣ ಜ್ಯೋತಿಯ ಪ್ರಭೆ ಬಂದು ಲೋಕಂಗಳೊಳಗೆ ಮುಸುಕಲು | ಅದರೊಳಗೆ ಏಕಾಂಗಿಯಾದಡವ ಯೋಗಿ || 8 || ಒಂಬತ್ತು ವೆಜ್ಜದ ತುಂಬಿದ ಕೊಡನೊಳಗೆ ಸಂಭ್ರಮದ ಮುತ್ತು ಇರುತಿಹುದು | ಅದರನುವ ನಂಬಿಕಂಡವನೆ ಕಡು ಜಾಣ || 9 || ಅಷ್ಟದಳಕಮಲದ ಬಟ್ಟಬಯಲೊಳಗೊಂದು ಮುಟ್ಟಬಾರದ ಘನವಿಹುದು | ಅದರೊಳಗೆ ದೃಷ್ಟಿ ಇಟ್ಟವನೆ ನಿಜಮುಕ್ತ || 10 || ಕೋಡಗದ ಒಡಗೂಡಿ ಆಡುವ ನರಿನಾಯಿ ಗೀಡಾದ ಮನೆಯ ಮುರಿದೆನು| ಮತ್ತೊಂದು ಗೂ...

ರಾಯಚೂರು ಜಿಲ್ಲೆಯ ಶರಣರು -4 ಮಹಾಶರಣೆ ಮುಕ್ತಾಯಕ್ಕ.

Image
  🌼ರಾಯಚೂರು ಜಿಲ್ಲೆಯ ಶರಣರು- 4 🔶 ಮಹಾಜ್ಞಾನಿ ಶರಣೆ ಮುಕ್ತಾಯಕ್ಕ. ಅನುಭಾವದ ನೆಲೆಯಲ್ಲಿ ಅತ್ಯಂತ ಉನ್ನತ ಮಟ್ಟಕ್ಕೆ ತಲುಪಿದ ಶರಣೆ, ಇವರ ತವರೂರು ಗದಗ ಜಿಲ್ಲೆಯ ಲಕ್ಕುಂಡಿ, ಗಂಡನ ಊರು ಹಾಗೂ ಇವರು ಐಕ್ಯವಾದ ಸ್ಥಳ : ಇಂದಿನ ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಮೊಸುಳೆಕಲ್ಲು ( ಮೊಸರುಕಲ್ಲು) ಗ್ರಾಮ ಇವರ ಕಾಲ -1160 ಅಂಕಿತನಾಮ - ಅಜಗಣ್ಣತಂದೆ, ಪ್ರಸ್ತುತ ಲಭ್ಯವಿರುವ ವಚನಗಳು - 37 ಕಾಯಕ - ಹೈನುಗಾರಿಕೆ. ಆದ್ಯರ ಅರವತ್ತು ವಚನಕ್ಕೆ  ದಣ್ಣಾಯಕರಿಪ್ಪತ್ತು ವಚನ, ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತುವಚನ, ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ, ಅಜಗಣ್ಣನ ಐದು ವಚನಕ್ಕೆ ಕೂಡಲಚೆನ್ನಸಂಗಮದೇವಾ, ಮಹಾದೇವಿಯಕ್ಕಗಳದೊಂದೆ ವಚನ ನಿರ್ವಚನ. ಅಜಗಣ್ಣನ ವಚನವೆಂದರೆ ಅದು ಅತ್ಯಂತ ಅರ್ಥಪೂರ್ಣ, ಉತ್ಕೃಷ್ಟ ಆಧ್ಯಾತ್ಮಿಕ ನೆಲೆಯ ವಚನಗಳಾಗಿವೆ ಎಂಬುದನ್ನು ಮೇಲಿನ ವಚನದಲ್ಲಿ ಚೆನ್ನಬಸವಣ್ಣನವರು ತಿಳಿಸುತ್ತಾರೆ. ಅಜಗಣ್ಣ ಮುಕ್ತಾಯಕ್ಕನಿಗೆ ಬರಿ ಅಣ್ಣ ಮಾತ್ರವಲ್ಲ, ಆಕೆಯ ಗುರುವಾಗಿ ನಿಂತವನು, ಐಕ್ಯಸ್ಥಲದ ಶರಣ ಅಜಗಣ್ಣ. ಅಜ, ಎಂದರೆ ಜ್ಞಾನ, ಗಣ್ಣ, ಎಂದರೆ ಕಣ್ಣು, ಅಜಗಣ್ಣ ಅದ್ವಿತೀಯ ಜ್ಞಾನ ಸಾಧಕನಾಗಿದ್ದು ಅಷ್ಟೇ ತನ್ನ ಭಕ್ತಿಯನ್ನು ಹೊರಗಡೆತೋರುಗೊಡದೆ, ನಿರಾಡಂಬರ ಭಾವಲಿಂಗ ಪೂಜಕನಾಗಿ, ಗುಪ್ತಭಕ್ತನಾಗಿದ್ದ, ಆತನ ಅಂತರಂಗವು ಸದಾ ಲಿಂಗಧ್ಯಾನದಲ್ಲೇ ಇರುತ್ತಿತ್ತು ಅಂಕಿತನಾಮ : ಮಹಾಘನಸೋಮೇಶ್ವರ...

ರಾಯಚೂರು ಜಿಲ್ಲೆಯ ಶರಣರು -3 ವಿಶೇಷ ಲೇಖನ ಲೋಕೇಶ್ ಎನ್ ಮಾನ್ವಿ.

Image
  ರಾಯಚೂರು ಜಿಲ್ಲೆಯ ಶರಣರು- ೦3 ಮಹಾಪ್ರಸಾದಿ ಶರಣ ಬಿಬ್ಬಿಬಾಚಯ್ಯನವರು. ರಾಯಚೂರು ಜಿಲ್ಲೆ ಬಿಸಿಲನಾಡು ಎಂದೇ ಹೆಸರುವಾಸಿ‌, ಅದರಷ್ಟೇ ಸಾಹಿತ್ಯದಿಂದ ನೆತ್ತಿಯನ್ನು ತಂಪಾಗಿಸಬಲ್ಲ, ಶರಣರು,  ದಾಸರು, ಸಂತರು, ಮಹಾಂತರ, ಸಾಹಿತಿಗಳ, ನಾಡು ರಾಯಚೂರು. ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ, ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಜಿಲ್ಲೆ ಇದಾಗಿದೆ. ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಾಲಿನಲ್ಲಿ ಕಾಣಸಿಗುವ ಪ್ರಮುಖ ಶರಣರಾದ, ಬಿಬ್ಬಿಬಾಚಯ್ಯನವರು ಕೂಡ  ರಾಯಚೂರು ಜಿಲ್ಲೆಯ ಶರಣರೇ ಆಗಿದ್ದಾರೆ. ಇವರು ಮೂಲತಃ ರಾಯಚೂರು ಜಿಲ್ಲೆಯ ಗಬ್ಬೂರಿನವರಾಗಿದ್ದು, ಪೂರ್ವಾಶ್ರಮದಲ್ಲಿ ಬ್ರಾಹ್ಮಣರಾದರೂ, ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ತೆರಳಿ ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದವರು, ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು, 77೦ ಅಮರ ಗಣಂಗಳಲ್ಲಿ ಇವರೂ ಒಬ್ಬರು.  ಅಂಕಿತನಾಮ : ಏಣಾಂಕಧರ ಸೋಮೇಶ್ವರಾ.  ಲಭ್ಯವಿರುವ ವಚನಗಳು : ಪ್ರಸ್ತುತ ಇವರ 102 ವಚನಗಳು ಲಭ್ಯವಿದ್ದು,  ಅವುಗಳು ಪ್ರಸಾದ ಮಹತ್ವವನ್ನು ಸಾರುವ ವಚನಗಳಾಗಿವೆ, ಇನ್ನೂ ಕೆಲವು ಬೆಡಗಿನ ವಚನಗಳಾಗಿವೆ.  ಕಾಯಕ : ಶರಣರು ಕಾಯಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ, ಅದು ಯಾವುದಾದರೂ ಸರಿ, ಮೇಲು ಕೀಳು ಎಂಬುದಿಲ್ಲ, ಬಿಬ್ಬಿಬಾಚಯ್ಯ ಶರಣರ ಕಾಯಕ ಮಹಾಮನೆಯಲ್ಲಿ ಅಡುಗೆ  ವ್ಯರ್ಥ...

ರಾಷ್ಟ್ರವಾದಿ ಶರಣ ಹರ್ಡೇಕರ್ ಮಂಜಪ್ಪನವರು.

Image
  #ಹರ್ಡೇಕರ್_ಮಂಜಪ್ಪನವರ #ಜಯಂತಿಯ_ಹಾರ್ದಿಕ_ಶುಭಾಶಯಗಳು .💐💐 ರಾಷ್ಟ್ರವಾದಿ ಶರಣ ಹರ್ಡೇಕರ್ ಮಂಜಪ್ಪನವರು. ಸಮಸಮಾಜದ ಕನಸು ಕಂಡ ಧೀಮಂತರು, ಮಾನವತಾವಾದಿ ಮಂಜಪ್ಪನವರು. ಕಷ್ಟದಲ್ಲೂ, ಹಸಿವಿನಲ್ಲೂ,  ಊಟವಿಲ್ಲದೆಯೂ, ರಾಷ್ಟ್ರೀಯತೆಯನ್ನೇ, ಉಸಿರಾಗಿಸಿಕೊಂಡು ಬದುಕಿದವರು. ಶಿಕ್ಷಕರಾಗಿ ಮಕ್ಕಳ ಮನಗೆದ್ದು, ಅಕ್ಷರ ಕಲಿಸಿದವರು, ಹರ್ಡೇಕರ್ ಮಂಜಪ್ಪನವರು. ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಲು, ಧನುರ್ದಾರಿ ಪತ್ರಿಕೆ ಹೊರತಂದು, ಪ್ರಖ್ಯಾತರಾದವರು ಶರಣ ಮಂಜಪ್ಪನವರು. ರಾಷ್ಟ್ರವಾದಿ ಶರಣ, ಹರ್ಡೇಕರ್ ಮಂಜಪ್ಪನವರು. ಜಗತ್ತಿನಲ್ಲೇ ಮೊಟ್ಟಮೊದಲು ಬಸವ ಜಯಂತಿಯನ್ನು ಆಚರಿಸಲು ಕರೆ ಕೊಟ್ಟವರು,  ಬಸವಪ್ರಿಯ ಮಂಜಪ್ಪನವರು. ಬಸವಣ್ಣನನ್ನು ಗಾಂಧೀಜಿಗೆ, ಗಾಂಧೀಜಿಯನ್ನು ಕರುನಾಡಿಗೆ ಪರಿಚಯಿಸಿದವರು. ಹರ್ಡೇಕರ್ ಮಂಜಪ್ಪನವರು. ಗಾಂಧಿವಾದದ ಖಾದಿ, ಬಸವ ತತ್ವದ ವಿಭೂತಿಯನ್ನು ಧರಿಸಿ, ಶಿಸ್ತಿನ ಜೀವನ ನಡೆಸಿದವರು ಶರಣ ಮಂಜಪ್ಪನವರು. ಅಥಣಿ ಶಿವಯೋಗಿಗಳಿಂದ ಲಿಂಗ ದೀಕ್ಷೆ ಪಡೆದು, ನಿಜಾಚರಣೆಯ ಪ್ರತಿಪಾದಿಸಿದವರು ಹರ್ಡೇಕರ್ ಮಂಜಪ್ಪನವರು. ದಾವಣಗೆರೆಯಲ್ಲಿ ಸತ್ಯಾಗ್ರಹ ಆಶ್ರಮ ಸ್ಥಾಪಿಸಿ, ಜನಾಂದೋಲನ ರೂಪಿಸಿದ ಹೆಮ್ಮೆಯ ಕನ್ನಡಿಗ ಮಂಜಪ್ಪನವರು. ಸ್ತ್ರೀ ಸಮಾಜದ ಜಾಗೃತಿಗಾಗಿ  ಅಕ್ಕಮಹಾದೇವಿ ಜಯಂತಿಯನ್ನು ಆರಂಭಿಸಿದ ಮಹಾತ್ಮರು ಮಂಜಪ್ಪನವರು. ಪ್ರಥಮವಾಗಿ ಗಾಂಧೀಜಿಯ ಚರಿತ್ರೆ ರಚಿಸಿದವರು ಮಂಜಪ್ಪನವರು. ಬಂಥನಾಳ ಶಿವಯೋಗಿಗಳ ಜೊತೆಗೂಡಿ...

ರಾಯಚೂರು ಜಿಲ್ಲೆಯ ಶರಣರು ಸರಣಿ -೦2, ಶರಣ ದಂಪತಿಗಳಾದ ಆಯ್ದಕ್ಕಿ ಲಕ್ಕಮ್ಮ ಮಾರಯ್ಯನವರು. ವಿಶೇಷ ಲೇಖನ -: ಲೋಕೇಶ್ ಎನ್ ಮಾನ್ವಿ

Image
 🌼#ರಾಯಚೂರು ಜಿಲ್ಲೆಯ ಶರಣರು ಸರಣಿ- 02🌼 ━━━━━━━━━━━━━━━━━━━━━━━━ ಶರಣ ದಂಪತಿಗಳಾದ ಆಯ್ದಕ್ಕಿ ಲಕ್ಕಮ್ಮ ಮಾರಯ್ಯನವರು 🔹ಶರಣ ದಂಪತಿಗಳಾದ, 🔶ಆಯ್ದಕ್ಕಿ ಲಕ್ಕಮ್ಮ ಮಾರಯ್ಯನವರು. ಹನ್ನೆರಡನೇ ಶತಮಾನದ ಬಸವಾದಿ ಶರಣರ, ಸಾಲಿನಲ್ಲಿ ಕಾಯಕ ನಿಷ್ಠೆ , ದಾಸೋಹ ಭಾವ, ಲಿಂಗ ಸಮಾನತೆಗೆ,   ಹೆಸರಾದ  ಮಹತ್ವದ  ಶರಣರೇ, ಆಯ್ದಕ್ಕಿ ಲಕ್ಕಮ್ಮ ಹಾಗೂ ಮಾರಯ್ಯ ದಂಪತಿಗಳು, ಇವರು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ, ಅಮರೇಶ್ವರ ಗ್ರಾಮದವರು . 🔹ಆಯ್ದಕ್ಕಿ ಮಾರಯ್ಯನವರ ಅಂಕಿತನಾಮ-: " ಅಮರೇಶ್ವರಲಿಂಗ " ಲಭ್ಯವಿರುವ ವಚನಗಳು- 31 🔸ಆಯ್ದಕ್ಕಿ ಲಕ್ಕಮ್ಮನವರ ಅಂಕಿತನಾಮ -: ' ಮಾರಯ್ಯಪ್ರಿಯ ಅಮರೇಶ್ವರಲಿಂಗ " ಲಭ್ಯವಿರುವ ವಚನಗಳು- 25 ಲಿಂಗಸೂಗೂರಿನ ಅಮರೇಶ್ವರ ಗ್ರಾಮದವರಾದ ಶರಣ ದಂಪತಿಗಳು, ಶುದ್ಧ ಭಕ್ತಿ, ಹಾಗೂ ಕಾಯಕ ನಿಷ್ಠರಾಗಿದ್ದು, ಅಣ್ಣ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ಬಂದರು. ಕಲ್ಯಾಣ ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು‌. ೭೭೦ ಅಮರ ಗಣಂಗಳಲ್ಲಿ, ಇವರೂ ಪ್ರಮುಖರು. "ಮಹಾಮನೆ" ಎಂದರೆ ಇದು ಬರಿ ಕಲ್ಲುಗಳಿಂದ ಕಟ್ಟಿದ ಕಟ್ಟಡವಲ್ಲ, ಸಾವಿರಾರು ಜನರು, ಇಷ್ಟಲಿಂಗ ಪೂಜೆ, ಚಿಂತನ ಮಂಥನ, ಹಾಗೂ ಪ್ರಸಾದಕ್ಕೆ, ಒಟ್ಟುಗೂಡುವ ಸ್ಥಳವೇ ಅಣ್ಣ ಬಸವಣ್ಣನವರ ಪರಿಕಲ್ಪನೆಯ "ಮಹಾಮನೆ" ಬೇರೆ ಬೇರೆ ಊರುಗಳಿಂದ, ಬೇರೆ ಬೇರೆ ರಾಜ್ಯಗಳಿಂದ, ಬೇರೆ ಬೇರೆ ದೇಶಗ...

ರಾಯಚೂರಿನ ಶರಣರು. 01. ಉಳಿಯುಮೇಶ್ವರದ ಚಿಕ್ಕಯ್ಯ ಶರಣರು, ವಿಶೇಷ ಲೇಖನ -: ಲೋಕೇಶ್ ಎನ್ ಮಾನ್ವಿ.

Image
  # ರಾಯಚೂರಿನ_ಶರಣರು. ೦1 ಉಳಿಯುಮೇಶ್ವರ ಚಿಕ್ಕಯ್ಯ ಶರಣರು. ಹನ್ನೆರಡನೇ ಶತಮಾನದ ಬಸವಯುಗದ   ಧೃವತಾರೆ,  ಕಾಯಕಯೋಗಿ ಶರಣ ಉಳಿಯುಮೇಶ್ವರ ಚಿಕ್ಕಯ್ಯನವರು. ಇವರು ಪೂರ್ವಾಶ್ರಮದಲ್ಲಿ ಕಾಳಾಮುಖ ಆಚಾರ್ಯರಾಗಿದ್ದು , ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಶಿವಯೋಗಿಯಾಗಿ ,  ಕಲ್ಯಾಣದಲ್ಲಿ ಕಾಯಕದ ಜೊತೆಜೊತೆಗೆ,  ಶಿವಯೋಗದ ಕುರಿತು ಭೋದಿಸುತ್ತಿದ್ದರು , ಅಂಕಿತನಾಮ: ಉಳಿಯುಮೇಶ್ವರ ಕಾಯಕ:   ಕಮ್ಮಾರಿಕೆ, ಮಂಚ, ಬಾಗಿಲು,  ಇತರೆ ಕಟ್ಟಿಗೆಯ ಶಿಲ್ಪಿಕಲೆಗಳನ್ನು ಮಾಡುವುದು , ತಮ್ಮ ಒಂದು ವಚನದಲ್ಲಿ ಈ ರೀತಿಯಾಗಿ ಉಲ್ಲೇಖಿಸಿದ್ದಾರೆ,  ಎನ್ನ ಮನವ ಮಂಚವ ಮಾಡಿ, ತನುವ ಪಚ್ಚಡಿಸುವೆ ಬಾರಯ್ಯಾ! ಎನ್ನ ಅಂತರಂಗದಲ್ಲಿಪ್ಪೆ ಬಾರಯ್ಯ! ಎನ್ನ ಬಹಿರಂಗದಲ್ಲಿಪ್ಪೆ ಬಾರಯ್ಯ! ಎನ್ನ ಶಿವಲಿಂಗದೇವನೆ ಬಾರಯ್ಯ! ಎನ್ನ ಭಕ್ತವತ್ಸಲನೆ ಬಾರಯ್ಯ! `ಓಂ ನಮಃ ಶಿವಾಯ' ಎಂದು ಕರೆವೆನು ಉಳಿಯುಮೇಶ್ವರಲಿಂಗವೆ ಬಾರಯ್ಯ! ಎಂದು ಕಾಯಕದಲ್ಲೇ ಕೈಲಾಸ ಕಂಡವರು ಚಿಕ್ಕಯ್ಯ ಶರಣರು, ಬಸವಣ್ಣನೆ ಎನಗೆ ಗುರುಸ್ವರೂಪನಯ್ಯಾ, ಚೆನ್ನಬಸವಣ್ಣನೆ ಎನಗೆ ಲಿಂಗಸ್ವರೂಪನಯ್ಯಾ, ಸಿದ್ಧರಾಮಯ್ಯನೆ ಎನಗೆ ಜಂಗಮಸ್ವರೂಪನಯ್ಯಾ, ಮರುಳಶಂಕರದೇವರೆ ಎನಗೆ ಪ್ರಸಾದಸ್ವರೂಪನಯ್ಯಾ, ಪ್ರಭುದೇವರೆ ಎನಗೆ ಜ್ಞಾನಸ್ವರೂಪನಯ್ಯಾ. ಇಂತಿವರ ಶ್ರೀಪಾದದಲ್ಲಿ ಉರಿಯುಂಡ ಕರ್ಪುರದಂತಡಗಿದೆನಯ್ಯಾ ಉಳಿಯುಮೇಶ್ವರಾ. ಮೇಲಿನ ವಚನದಲ್ಲಿ ತಮ್ಮ ಸಮಕಾಲೀನ ಶರಣರಾದ, ಬಸವಣ್ಣ,...