ಸಿದ್ಧಿಪುರುಷ ಸದ್ಗುರು ಯಲ್ಲಾಲಿಂಗಪ್ರಭು ಮಹಾರಾಜರು,
ಪರಮತ್ಯಾಗಿ ಘನವೈರಾಗಿ, ಅಲ್ಲಮನಂತೆ ಬದುಕಿದ ಯೋಗಿ, ಸಿದ್ಧಿಪುರುಷ ಸದ್ಗುರು ಯಲ್ಲಾಲಿಂಗಪ್ರಭು ಮಹಾರಾಜರು,
ಮುಗಳಖೋಡ ಗ್ರಾಮದ ಸ್ಮಶಾನ ಭೂಮಿಯನ್ನೇ ಮುಕ್ತಿ ಮಂದಿರವಾಗಿದ ಯೋಗಿ,
ಇಂದಿಗೆ 138 ವರ್ಷಗಳ ಹಿಂದೆ
ಶರಣರ ನಾಡು ವಿಜಯಪುರದ ಇಂಡಿ ತಾಲೂಕಿನ ಮಿರಗಿ ಎಂಬ ಪುಟ್ಟ ಗ್ರಾಮದಲ್ಲಿ
ಶಿವಪ್ಪ ಕಾಶಿಬಾಯಿ ಎಂಬ ಪುಣ್ಯ ದಂಪತಿಗಳ ಮಗನಾಗಿ ಜನಿಸಿ ಬಂದ ಮಗುವೇ ಯಲ್ಲಪ್ಪ
ಎಂಟು ವರ್ಷ ಪ್ರಾಯದಲ್ಲೇ ಶಿವ ಧ್ಯಾನ ನಿರತನಾಗಿ ಕುರಿ ಕಾಯುವ ಕಾಯಕ ಮಾಡುತ್ತಿದ್ದರು, ಇಪ್ಪತ್ತು ವರ್ಷ ತುಂಬುವಷ್ಟರಲ್ಲಿ ಗರಡಿ ಮನೆಯಲ್ಲಿ ಪಳಗಿ ಕುಸ್ತಿ ಪಟುವಾಗಿದ್ದ ಯಲ್ಲಪ್ಪ ,
ಮನೆಯವರ ಬಲವಂತಕ್ಕೆ ಒಲ್ಲದ ಮನಸ್ಸಿನಿಂದಲೇ ಹೊನ್ನಮ್ಮ ಎಂಬವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು,
ಸಂಸಾರವೂ ಅನ್ಯೂನ್ಯವಾಗಿ ಸಾಗಿತ್ತು ಮಡದಿ ಗರ್ಭವತಿಯಾದಳು, ನವಮಾಸಗಳು ತುಂಬುವಷ್ಟರಲ್ಲೇ ತಾಯಗರ್ಭದಲ್ಲೇ ಶಿಶು ಸತ್ತಿತು ಅದರೊಂದಿಗೆ ಯಲ್ಲಪ್ಪನ ಮಡದಿ ಹೊನ್ನಮ್ಮಳು ಕೂಡ ಕೊನೆಉಸಿರೆಳೆದು ಬಾರದ ಲೋಕಕ್ಕೆ ಹೊರಟಳು, ಸುತ್ತಮುತ್ತಲ ಗ್ರಾಮಗಳಲ್ಲಿ ಕುಸ್ತಿ ಪಂದ್ಯಾವಳಿಗಳನ್ನು ಗೆದ್ದು ಜಗಜಟ್ಟಿಯಾಗಿ ಖುಷಿಯಿಂದ ಬಂದ ಯಲ್ಲಪ್ಪ, ಗರ್ಭಿಣಿಯಾದ ತನ್ನ ಮಡದಿ ಹಾಗೂ ಮಗುವನ್ನು ಕಳೆದು ಕೊಂಡ ಯಲ್ಲಪ್ಪ, ಅದೇ ಚಿತೆಯಲ್ಲಿ ಸಂಸಾರ ಮಾಯಾ ಮೋಹಗಳನ್ನು ಸುಟ್ಟು, ಮೈ ತುಂಬ ಭಸ್ಮ ಧರಿಸಿ ವಿರಾಗಿಯಾಗಿ ಲಚ್ಯಾಣದೆಡೆಗೆ ಬಂದ,
ಅಲ್ಲಿ ಸಿದ್ಧಲಿಂಗ ಮಹಾರಾಜರ ದರುಶನಕ್ಕೆ ಕಾದು ಕುಳಿತರು ಪಾಳೆ ಸಿಗದೇ ಹೋಗಿದ್ದರಿಂದ ಊರ ಹೊರಗಿನ ಗಿಡದ ಕೆಳಗೆ ಕುಳಿತು ಧ್ಯಾನಾಸ್ಥನಾದ ಯಲ್ಲಪ್ಪನ ಶರೀರವು ಗಾಳಿಯಲ್ಲಿ ತೇಲಿದಂತೆ ಕಾಣುತಿತ್ತು ಅಷ್ಟರಲ್ಲೇ ಮೂರು ದಿನ ಕಳೆಯಿತು, ಸುದ್ದಿ ತಿಳಿದ ಸಿದ್ಧಲಿಂಗರೇ ಯಲ್ಲಪ್ಪನನ್ನು ಹುಡುಕಿಕೊಂಡು ಬಂದರು, ಇವನೇ ನನ್ನ ಪರಮ ಶಿಷ್ಯ ಎಂದು ಮನಸ್ಸಿನಲ್ಲಿ ನಿರ್ಧರಿಸಿ, ‘ಇದೋ ಯಲ್ಲಪ್ಪ ನಿನ್ನ ಮೂರು ದಿನ ಮಣ್ಣಾಗ ಮಲಗಸ್ತೀನಿ, ನೀ ಎದ್ದು ಬಂದ್ರ ನನ್ನ ಶಿಷ್ಯ ಮಾಡ್ಕೊಂತೀನಿ, ಸತ್ತಿಯಂದ್ರ ಇಲ್ಲೇ ಮಣ್ಣ ಮಾಡ್ತೀನಿ’ ಎಂದು ಯಲ್ಲಪ್ಪನಿಗೆ ಪರೀಕ್ಷೆಯನೊಡ್ಡಿದರು ಮೂರು ದಿನ ಸಮಾದಿಯಲ್ಲೇ ಧ್ಯಾನಸ್ಥನಾದ ಯಲ್ಲಪ್ಪ ನಾಲ್ಕನೇ ದಿನ ಸಮಾದಿ ಅಗೆದು ನೋಡಿದರೆ ಜೀವಂತವಾಗಿ ಧ್ಯಾನಸ್ಥ ಸ್ಥಿತಿಯಲ್ಲೇ ತಪೋ ನಿರತನಾಗಿದ್ದ, ಇದನ್ನು ಕಂಡ ಸಿದ್ಧಲಿಂಗ ಮಹಾರಾಜರು ಇದೋ ಇವನೇ ನನ್ನ ಪ್ರಿಯ ಶಿಷ್ಯನು ಎಂದು ಜಗತ್ತಿಗೆ ಸಾರಿ ಸಾರಿ ಹೇಳಿ,
ದೀಕ್ಷೆ ನೀಡಿ ಬೆತ್ತ ಜೋಳಿಗೆ ಕೊಟ್ಟು ಯಲ್ಲಪ್ಪ ಇಂದಿನಿಂದ ಯಲ್ಲಾಲಿಂಗ ಮಹಾರಾಜನಾಗಿ ದೇಶದಲ್ಲಿ ಮೆರೆ ಎಂದು ಆಶೀರ್ವದಿಸಿ, ಇಲ್ಲಿಂದ ಮಶ್ಚಿಮಕ್ಕೆ ಪ್ರಯಣ ಬೆಳೆಸು ‘ಏಳು ಹಗಲು, ಏಳು ರಾತ್ರಿ’ ಮುಗಿದ ದಿನದಂದು ಅಲ್ಲೇ ನಿಂತ ಜಾಗದಲ್ಲೇ ನಿನ್ನ ಮಠ ಕಟ್ಟಿಕೊ ಎಂದು ಹರಸಿ ಕಳುಹಿಸಿ ಕೊಟ್ಟರು,
ಯಲ್ಲಾಲಿಂಗರು ಪ್ರಯಣ ಆರಂಭಿಸಿ ಬೆಳಗಾವಿ, ರಾಯಭಾಗ ತಾಲೂಕಿನ ಮುಗಳಖೋಡ ಗ್ರಾಮದ ಸ್ಮಶಾನದಲ್ಲಿ
ಅವರ ಪ್ರಯಣ ಕೊನೆಗೊಂಡಿತು, ಅಲ್ಲೇ ನಿಂತು ಸಿದ್ಧಲಿಂಗರ ಸ್ಮರಿಸಿ ಅಲ್ಲೇ ಗುಡಿಸಲು ಹಾಕಿಕೊಂಡು, ಬೀಕ್ಷಾಟನೆ ಮಾಡಿಕೊಂಡು ದಿನನಿತ್ಯದ ಆಹಾರ ಸಂಪಾದನೆ ಮಾಡಿಕೊಳ್ಳುತ್ತಿದ್ದರು, ಇವರಿಗೆ ಊರಿನ ಕೆಲ ಜನರು ತೊಂದರೆ ಮಾಡಿದರು, ಯಲ್ಲಾಲಿಂಗರು ಅವರಿಗೆ ತಕ್ಕ ಉತ್ತರವನ್ನು ನೀಡಿದರು, ಹೀಗೆ ದಿನ ಕೆಳೆದಂತೆ ಯಲ್ಲಾಲಿಂಗರ ಮಾತುಗಳು ಸತ್ಯವಾಗ ತೊಡಗಿದವು ಸುತ್ತಮುತ್ತಲ ಗ್ರಾಮದ ಜನರೆಲ್ಲ ಇವರನ್ನು ಕಾಣಲು ಬರ ತೊಡಗಿದರು,
ಹಲವು ಕಷ್ಟಗಳ ಮಧ್ಯೆ ಯಲ್ಲಾಲಿಂಗ ಪ್ರಭುಗಳು ಸ್ಮಶಾನ ಭೂಮಿಯನ್ನೇ ಮುಕ್ತಿ ಮಂದಿರವಾಗಿಸಿ ಭವ್ಯ ಮಠವನ್ನು ಕಟ್ಟಿದರು,
ಪ್ರಭುಗಳ ದರುಶನಕ್ಕೆ ಜನ ತಂಡೋಪ ತಂಡವಾಗಿ ಬರತೊಡಗಿದರು, ಇವರು ನುಡಿದ ವಾಕ್ಯಗಳೆಲ್ಲ ಸತ್ಯವಾದವು, ಇವರು ಕಾಲಿಟ್ಟ ಸ್ಥಳವೆಲ್ಲ ಪಾವನ ಸಾನಿಧ್ಯವಾಯಿತು, ರೈತಾಪಿ ಜನರೆಲ್ಲ ಉತ್ತಮ ಮಳೆ ಬೆಳೆ ಕಂಡು, ಭಕ್ತಿಯಿಂದ ಪ್ರಭುಗಳ ಮಠಕ್ಕೆ ತಮ್ಮ ಹೊಲದ ಧವಸಧಾನ್ಯಗಳನ್ನು ಸಮರ್ಪಿಸಿದರು, ಇದರಿಂದ ಮಹಾಮಠದಲ್ಲಿ ನಿತ್ಯವೂ ಶಿವನ ಅಂಬಲಿ ಪ್ರಸಾದ, ಬಂದ ಎಲ್ಲಾ ಭಕ್ತರ ಹೊಟ್ಟೆ ತುಂಬಿಸಿದು, ಹಗಲು ರಾತ್ರಿಯನ್ನದೇ ಶ್ರೀಮಠದಲ್ಲಿ ದಾಸೋಹ ನೆಡೆಯುತ್ತಿರುತ್ತದೇ ಇಲ್ಲಿ ಯಾವುದೇ ಜಾತಿ ಧರ್ಮದ ಸಂಕೋಲೆಗಳಿಲ್ಲ, ಬಂದ ಭಕ್ತರೆಲ್ಲರೂ ರುಚಿಯಾದ ಅಂಬಲಿ ಪ್ರಸಾದ ಉಂಡು ಆನಂದದಿಂದ ತೇಲಾಡಿದರು, ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ಎಲ್ಲೆಡೆಯೂ ಯಲ್ಲಾಲಿಂಗರ ಕೀರ್ತಿ ಹೆಚ್ಚಾಯಿತು,
ನುಡಿದ ವಾಕ್ಯವು ತಪ್ಪದೇ ನಡೆದು ಪವಾಡ ಪುರುಷರೆಸಿದರು, ತಮ್ಮ ಗುರುವನ್ನೇ ಶಿಷ್ಯರಾಗಿ ಪಡೆದು ಶಿವಯೋಗಿ ಸಿದ್ಧರಾಮೇಶ್ವರ ಎಂದು ಕರೆದರು,
ಶತಮಾನಕ್ಕೂ ಹೆಚ್ಚುಕಾಲ ಬದುಕಿ ಬಾಳಿ ಭಕ್ತರ ಸೇವೆ ಮಾಡಿದ ಯಲ್ಲಾಲಿಂಗ ಪ್ರಭುಗಳ ದೇಹವು ದಣಿವಾಯಿತು ವಿಶ್ರಾಂತಿ ಬಯಸಿತು, 05/೦2/1986ರ ಬೆಳಗ್ಗೆ 09:೦೦ ಕ್ಕೆ ದೇಹತ್ಯಾಗ ಮಾಡಿ ಕೊನೆ ಉಸಿರೆಳೆದು ,ಅಸಂಖ್ಯಾತ ಭಕ್ತರ ಹೃದಯದಲ್ಲಿ ಅಚ್ಚಳಿಯದೇ ಉಳಿದರು,
ಅಂದು ಯಲ್ಲಾಲಿಂಗ ಪ್ರಭುಗಳು ಹಚ್ಚಿದ ಒಲೆ ಆರದೇ ದಾಸೋಹ ಕಾರ್ಯದಲ್ಲಿ ನಿತ್ಯನಿರಂತರವಾಗಿ, ಭಕ್ತರ ಬರುವಿಕೆಗೆ ಕಾದಿದೆ…
ಶ್ರೀ ಯಲ್ಲಾಲಿಂಗ ಪ್ರಭುಗಳ ದಾಸೋಹದಲ್ಲಿ ಉಂಡವರು ಜಟ್ಟಿಗಳಂತೆ, ಗಡ್ಡಿಯಾಗುತ್ತಾರೆ,
ಯಲ್ಲಾಲಿಂಗರ ಅಂಗಾರವು, ನಂಬಿ ಬಂದ ಭಕ್ತರ ಬಾಳಿಗೆ ಬಂಗಾರವಾಗಿದೆ,
ಅಂದಿನ ಸ್ಮಶಾನ ಭೂಮಿಯೇ ಇಂದು ಭೂ ಕೈಲಾಸವಾಗಿ ಮಿಂಚುತ್ತಿದೆ,…
ಈ ನೆಲದ ಪ್ರತಿ ಕಣದಲ್ಲೂ,
ಯಲ್ಲಾಲಿಂಗರು ಜಪಿಸಿದ ಶಿವನ ನಾಮ ಸ್ಮರಣೆ ತುಂಬಿ ತುಳುಕುತ್ತಿದೆ…
ಈ ಪುಣ್ಯ ಭೂಮಿಯೇ ಪರುಷ,
ಯಲ್ಲಾಲಿಂಗರ ನೆನೆದರೆ ಹರುಷ…
‘ಶ್ರೀಶ್ರೀಶ್ರೀ ಯಲ್ಲಾಲಿಂಗಪ್ರಭು ಮಹಾರಾಜ್ ಕೀ ಜೈ’🙏🏻
✍🏾ಲೇಖನ-; ಲೋಕೇಶ್_ಎನ್_ಮಾನ್ವಿ.
-/ 9972536176
mugulakod yallaling maharaj ra history enu bek ri
ReplyDelete