ರಾಷ್ಟ್ರವಾದಿ ಶರಣ ಹರ್ಡೇಕರ್ ಮಂಜಪ್ಪನವರು.

 #ಹರ್ಡೇಕರ್_ಮಂಜಪ್ಪನವರ

#ಜಯಂತಿಯ_ಹಾರ್ದಿಕ_ಶುಭಾಶಯಗಳು .💐💐


ರಾಷ್ಟ್ರವಾದಿ ಶರಣ
ಹರ್ಡೇಕರ್ ಮಂಜಪ್ಪನವರು.



ಸಮಸಮಾಜದ ಕನಸು ಕಂಡ ಧೀಮಂತರು, ಮಾನವತಾವಾದಿ ಮಂಜಪ್ಪನವರು.


ಕಷ್ಟದಲ್ಲೂ, ಹಸಿವಿನಲ್ಲೂ, 

ಊಟವಿಲ್ಲದೆಯೂ, ರಾಷ್ಟ್ರೀಯತೆಯನ್ನೇ, ಉಸಿರಾಗಿಸಿಕೊಂಡು ಬದುಕಿದವರು.


ಶಿಕ್ಷಕರಾಗಿ ಮಕ್ಕಳ ಮನಗೆದ್ದು,

ಅಕ್ಷರ ಕಲಿಸಿದವರು,

ಹರ್ಡೇಕರ್ ಮಂಜಪ್ಪನವರು.



ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಲು,

ಧನುರ್ದಾರಿ ಪತ್ರಿಕೆ ಹೊರತಂದು,

ಪ್ರಖ್ಯಾತರಾದವರು ಶರಣ ಮಂಜಪ್ಪನವರು.



ರಾಷ್ಟ್ರವಾದಿ ಶರಣ, ಹರ್ಡೇಕರ್ ಮಂಜಪ್ಪನವರು.


ಜಗತ್ತಿನಲ್ಲೇ ಮೊಟ್ಟಮೊದಲು ಬಸವ ಜಯಂತಿಯನ್ನು ಆಚರಿಸಲು ಕರೆ ಕೊಟ್ಟವರು, 

ಬಸವಪ್ರಿಯ ಮಂಜಪ್ಪನವರು.


ಬಸವಣ್ಣನನ್ನು ಗಾಂಧೀಜಿಗೆ,

ಗಾಂಧೀಜಿಯನ್ನು ಕರುನಾಡಿಗೆ ಪರಿಚಯಿಸಿದವರು.

ಹರ್ಡೇಕರ್ ಮಂಜಪ್ಪನವರು.


ಗಾಂಧಿವಾದದ ಖಾದಿ,

ಬಸವ ತತ್ವದ ವಿಭೂತಿಯನ್ನು ಧರಿಸಿ,

ಶಿಸ್ತಿನ ಜೀವನ ನಡೆಸಿದವರು ಶರಣ ಮಂಜಪ್ಪನವರು.


ಅಥಣಿ ಶಿವಯೋಗಿಗಳಿಂದ ಲಿಂಗ ದೀಕ್ಷೆ ಪಡೆದು,

ನಿಜಾಚರಣೆಯ ಪ್ರತಿಪಾದಿಸಿದವರು ಹರ್ಡೇಕರ್ ಮಂಜಪ್ಪನವರು.


ದಾವಣಗೆರೆಯಲ್ಲಿ ಸತ್ಯಾಗ್ರಹ ಆಶ್ರಮ ಸ್ಥಾಪಿಸಿ,

ಜನಾಂದೋಲನ ರೂಪಿಸಿದ ಹೆಮ್ಮೆಯ ಕನ್ನಡಿಗ ಮಂಜಪ್ಪನವರು.


ಸ್ತ್ರೀ ಸಮಾಜದ ಜಾಗೃತಿಗಾಗಿ 

ಅಕ್ಕಮಹಾದೇವಿ ಜಯಂತಿಯನ್ನು ಆರಂಭಿಸಿದ ಮಹಾತ್ಮರು ಮಂಜಪ್ಪನವರು.



ಪ್ರಥಮವಾಗಿ ಗಾಂಧೀಜಿಯ ಚರಿತ್ರೆ ರಚಿಸಿದವರು ಮಂಜಪ್ಪನವರು.


ಬಂಥನಾಳ ಶಿವಯೋಗಿಗಳ ಜೊತೆಗೂಡಿ,

ಬಸವ ತತ್ವವನ್ನು ಹಳ್ಳಿ ಹಳ್ಳಿಗೂ,

ಗಲ್ಲಿ ಗಲ್ಲಿಗೂ, ತಲುಪಿಸಿದವರು ಹರ್ಡೇಕರ್ ಮಂಜಪ್ಪನವರು.


ಕನ್ನಡದಲ್ಲಿ ಮೊಟ್ಟಮೊದಲ ಆತ್ಮಚರಿತ್ರೆ ರಚಿಸಿದ ಮಹಾತ್ಮ ಮಂಜಪ್ಪನವರು.


ಜೀವನದ ಕೊನೆಯ ಕ್ಷಣದಲ್ಲೂ...

ಭಾರತೀಯತನ್ನೇ ಉಸಿರಾಗಿಸಿಕೊಂಡವರು ಶರಣ ಹರ್ಡೇಕರ್ ಮಂಜಪ್ಪನವರು.


ಧೀರರಾಗಿರಿ, ಪವಿತ್ರರಾಗಿರಿ, ಸ್ವತಂತ್ರ್ಯ ರಾಷ್ಟ್ರ

ವೀರರಾಗಿರಿ, ಎಂಬ ಸಂದೇಶವನ್ನು ಕೊಟ್ಟ

ಬಸವ ಬಯಲಿನಲ್ಲಿ ಬಯಲಾದವರು, ಕರುನಾಡ ಗಾಂಧಿ, ಹರ್ಡೇಕರ್ ಮಂಜಪ್ಪನವರು...


ರಚನೆ~ ಲೋಕೇಶ್ ಎನ್ ಮಾನ್ವಿ.

Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

ಆರು ಮುನಿದು ನಮ್ಮನೇನ ಮಾಡುವರು, ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ ಲೋಕೇಶ್ ಎನ್ ಮಾನ್ವಿ.

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’