Posts

Showing posts from March, 2026

ರಾಯಚೂರು ಜಿಲ್ಲೆಯ ಶರಣರು -4 ಮಹಾಶರಣೆ ಮುಕ್ತಾಯಕ್ಕ.

Image
  🌼ರಾಯಚೂರು ಜಿಲ್ಲೆಯ ಶರಣರು- 4 🔶 ಮಹಾಜ್ಞಾನಿ ಶರಣೆ ಮುಕ್ತಾಯಕ್ಕ. ಅನುಭಾವದ ನೆಲೆಯಲ್ಲಿ ಅತ್ಯಂತ ಉನ್ನತ ಮಟ್ಟಕ್ಕೆ ತಲುಪಿದ ಶರಣೆ, ಇವರ ತವರೂರು ಗದಗ ಜಿಲ್ಲೆಯ ಲಕ್ಕುಂಡಿ, ಗಂಡನ ಊರು ಹಾಗೂ ಇವರು ಐಕ್ಯವಾದ ಸ್ಥಳ : ಇಂದಿನ ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಮೊಸುಳೆಕಲ್ಲು ( ಮೊಸರುಕಲ್ಲು) ಗ್ರಾಮ ಇವರ ಕಾಲ -1160 ಅಂಕಿತನಾಮ - ಅಜಗಣ್ಣತಂದೆ, ಪ್ರಸ್ತುತ ಲಭ್ಯವಿರುವ ವಚನಗಳು - 37 ಕಾಯಕ - ಹೈನುಗಾರಿಕೆ. ಆದ್ಯರ ಅರವತ್ತು ವಚನಕ್ಕೆ  ದಣ್ಣಾಯಕರಿಪ್ಪತ್ತು ವಚನ, ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತುವಚನ, ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ, ಅಜಗಣ್ಣನ ಐದು ವಚನಕ್ಕೆ ಕೂಡಲಚೆನ್ನಸಂಗಮದೇವಾ, ಮಹಾದೇವಿಯಕ್ಕಗಳದೊಂದೆ ವಚನ ನಿರ್ವಚನ. ಅಜಗಣ್ಣನ ವಚನವೆಂದರೆ ಅದು ಅತ್ಯಂತ ಅರ್ಥಪೂರ್ಣ, ಉತ್ಕೃಷ್ಟ ಆಧ್ಯಾತ್ಮಿಕ ನೆಲೆಯ ವಚನಗಳಾಗಿವೆ ಎಂಬುದನ್ನು ಮೇಲಿನ ವಚನದಲ್ಲಿ ಚೆನ್ನಬಸವಣ್ಣನವರು ತಿಳಿಸುತ್ತಾರೆ. ಅಜಗಣ್ಣ ಮುಕ್ತಾಯಕ್ಕನಿಗೆ ಬರಿ ಅಣ್ಣ ಮಾತ್ರವಲ್ಲ, ಆಕೆಯ ಗುರುವಾಗಿ ನಿಂತವನು, ಐಕ್ಯಸ್ಥಲದ ಶರಣ ಅಜಗಣ್ಣ. ಅಜ, ಎಂದರೆ ಜ್ಞಾನ, ಗಣ್ಣ, ಎಂದರೆ ಕಣ್ಣು, ಅಜಗಣ್ಣ ಅದ್ವಿತೀಯ ಜ್ಞಾನ ಸಾಧಕನಾಗಿದ್ದು ಅಷ್ಟೇ ತನ್ನ ಭಕ್ತಿಯನ್ನು ಹೊರಗಡೆತೋರುಗೊಡದೆ, ನಿರಾಡಂಬರ ಭಾವಲಿಂಗ ಪೂಜಕನಾಗಿ, ಗುಪ್ತಭಕ್ತನಾಗಿದ್ದ, ಆತನ ಅಂತರಂಗವು ಸದಾ ಲಿಂಗಧ್ಯಾನದಲ್ಲೇ ಇರುತ್ತಿತ್ತು ಅಂಕಿತನಾಮ : ಮಹಾಘನಸೋಮೇಶ್ವರ...

ರಾಯಚೂರು ಜಿಲ್ಲೆಯ ಶರಣರು -3 ವಿಶೇಷ ಲೇಖನ ಲೋಕೇಶ್ ಎನ್ ಮಾನ್ವಿ.

Image
  ರಾಯಚೂರು ಜಿಲ್ಲೆಯ ಶರಣರು- ೦3 ಮಹಾಪ್ರಸಾದಿ ಶರಣ ಬಿಬ್ಬಿಬಾಚಯ್ಯನವರು. ರಾಯಚೂರು ಜಿಲ್ಲೆ ಬಿಸಿಲನಾಡು ಎಂದೇ ಹೆಸರುವಾಸಿ‌, ಅದರಷ್ಟೇ ಸಾಹಿತ್ಯದಿಂದ ನೆತ್ತಿಯನ್ನು ತಂಪಾಗಿಸಬಲ್ಲ, ಶರಣರು,  ದಾಸರು, ಸಂತರು, ಮಹಾಂತರ, ಸಾಹಿತಿಗಳ, ನಾಡು ರಾಯಚೂರು. ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ, ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಜಿಲ್ಲೆ ಇದಾಗಿದೆ. ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಾಲಿನಲ್ಲಿ ಕಾಣಸಿಗುವ ಪ್ರಮುಖ ಶರಣರಾದ, ಬಿಬ್ಬಿಬಾಚಯ್ಯನವರು ಕೂಡ  ರಾಯಚೂರು ಜಿಲ್ಲೆಯ ಶರಣರೇ ಆಗಿದ್ದಾರೆ. ಇವರು ಮೂಲತಃ ರಾಯಚೂರು ಜಿಲ್ಲೆಯ ಗಬ್ಬೂರಿನವರಾಗಿದ್ದು, ಪೂರ್ವಾಶ್ರಮದಲ್ಲಿ ಬ್ರಾಹ್ಮಣರಾದರೂ, ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ತೆರಳಿ ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದವರು, ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು, 77೦ ಅಮರ ಗಣಂಗಳಲ್ಲಿ ಇವರೂ ಒಬ್ಬರು.  ಅಂಕಿತನಾಮ : ಏಣಾಂಕಧರ ಸೋಮೇಶ್ವರಾ.  ಲಭ್ಯವಿರುವ ವಚನಗಳು : ಪ್ರಸ್ತುತ ಇವರ 102 ವಚನಗಳು ಲಭ್ಯವಿದ್ದು,  ಅವುಗಳು ಪ್ರಸಾದ ಮಹತ್ವವನ್ನು ಸಾರುವ ವಚನಗಳಾಗಿವೆ, ಇನ್ನೂ ಕೆಲವು ಬೆಡಗಿನ ವಚನಗಳಾಗಿವೆ.  ಕಾಯಕ : ಶರಣರು ಕಾಯಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ, ಅದು ಯಾವುದಾದರೂ ಸರಿ, ಮೇಲು ಕೀಳು ಎಂಬುದಿಲ್ಲ, ಬಿಬ್ಬಿಬಾಚಯ್ಯ ಶರಣರ ಕಾಯಕ ಮಹಾಮನೆಯಲ್ಲಿ ಅಡುಗೆ  ವ್ಯರ್ಥ...