ಅನುಭಾವವೆಂದರೇನು ? ಓದಿರಿ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ವಚನದ ವಿಶ್ಲೇಶಣೆಯಲ್ಲಿ.
ಓಂ ಶ್ರೀಗುರುಬಸವಲಿಂಗಾಯ ನಮಃ
ಅನುಭಾವ ಅನುಭಾವವೆಂದೆಂಬರು
ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿರೋ.
ಅನುಭಾವವೆಂಬುದು ಅಂತರಂಗ ಶುದ್ಧಿ ಕಾಣಿರೋ,
ಅನುಭಾವವೆಂಬುದು ರಚ್ಚೆಯ ಮಾತೆ ?
ಅನುಭಾವವೆಂಬುದು ಸಂತೆಯ ಸುದ್ದಿಯೆ ?
ಅನುಭಾವವೆಂಬುದೇನು ಬೀದಿಯ ಪಸರವೆ ?
ಏನೆಂಬೆ ಹೇಳಾ ಮಹಾಘನವ !
ಆನೆಯ ಮಾನದೊಳಗಿಕ್ಕಿದರಡಗೂದೆ ದರ್ಪಣದೊಳಗಡಗೂದಲ್ಲದೆ ?
ಕಂಡ ಕಂಡಲ್ಲಿ ಗೋಷ್ಠಿ, ನಿಂದ ನಿಂದಲ್ಲಿ ಅನುಭಾವ,
ಬಂದ ಬಂದಲ್ಲಿ ಪ್ರಸಂಗವ ಮಾಡುವ
ನಿರ್ಬುದ್ಧಿ ನೀಚರ ಮೆಚ್ಚ *#ಕೂಡಲಚೆನ್ನಸಂಗಮದೇವ.*
•ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು•
#ಭಾವಾರ್ಥ-:
#ಅನುಭಾವ ಅನುಭಾವವೆಂದೆಂಬರು
ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿರೋ,
ಅನುಭಾವ ಎಂಬುದು ತೋರಿಕೆಯ ಹಿರಿತನವರಲ್ಲ,
ಅನುಭಾವವೆಂಬುದು, ಭೂಗರ್ಭದಲ್ಲಡಗಿದ ಖನಿಜ ಸಂಪತ್ತಿದ್ದಂತೆ,
ಚಿನ್ನ-ಮುತ್ತು-ರತ್ನ-ವಜ್ರಗಳ ನಿಕ್ಷೇಪವೇ ಭೂಮಿಯ ಅಂತರಾಳದಲ್ಲಡಗಿರುವಂತೆ,
ತನ್ನೊಳಗೆ ಅನುಭಾವವೆಂಬ ರತ್ನವು ಅಡಗಿದೆ,.
#ಅನುಭಾವವೆಂಬುದು ಅಂತರಂಗ ಶುದ್ಧಿ ಕಾಣಿರೋ,
ಬಹಿರಂಗದಲ್ಲಿ ಆಕರ್ಷಕವಾಗಿ, ವಿಭೂತಿ ಗಂಧ ರುದ್ರಾಕ್ಷಿ, ಹಲವು ಮಣಿಗಳ ಧರಿಸಿ, ತೋರಿಕೆಗೆ ಮಾಗಿದ ಹಣ್ಣಿನಂತೆ ಕಂಡರೂ, ಕೂಡ ಅಂತರಂಗದಲ್ಲಿ ಕೊಳೆತುನಾರುವ ವಿಕಾರತೆ, ಹಿರಿತನದ ಅಹಂ ತುಂಬಿದ್ದರೆ, ಆತ ಅನುಭಾವಿಯಲ್ಲ, ಬರಿಯ ಭವಿ ಮಾತ್ರ, ಅನುಭಾವಿ ಎಂದರೆ' ಯಾರು,?
ಹಿರಿತನ-ಸಿರಿತನದಲ್ಲಿ ಅಹಂಕಾರ ರಹಿತನು, ವಿಷಯವಾಸನೆಯಿಲ್ಲದ, ನಿಷ್ಕಲ್ಮಶ ಮನಸ್ಸುಳ್ಳವ, ಅರಿವೇ ಗುರುವೆಂದು ನಂಬಿ, ಸತ್ಯದ ನುಡಿಗಳನ್ನಾಡುವವ, ಕ್ರಿಯೆಯಲ್ಲಿ ಅದರಂತೆ ನಡೆದುಕೊಂಡು, ಸದಾಚಾರದಲ್ಲಿ ತಲ್ಲೀನವಾದವ ಅನುಭಾವಿ,
#ಅನುಭಾವವೆಂಬುದು ರಚ್ಚೆಯ ಮಾತೆ ?
#ಅನುಭಾವವೆಂಬುದು ಸಂತೆಯ ಸುದ್ದಿಯೆ ?
#ಅನುಭಾವವೆಂಬುದೇನು ಬೀದಿಯ ಪಸರವೆ ?
ಅನುಭಾವವೆಂಬುದು, ಕೋಪದಿಂದಾಡುವ ಹಠವಾದಿಗಳ ಮಾತಲ್ಲ, ಅನುಭಾವೆಂಬುದು, ಸಂತೆಯಲ್ಲಿ ಜನರು ಸೇರಿದಾಗ ಹೇಳುವ ಗಜಿಬಿಜಿಯ ಊರ ಸುದ್ದಿಯೂ ಅಲ್ಲ, ಅನುಭಾವೆಂಬುದು, ಬೀದಿಯಲ್ಲಿ ಸಿಗುವ ಸರಕು, ಸಾಮಗ್ರಿಯೂ ಅಲ್ಲ,
#ಏನೆಂಬೆ ಹೇಳಾ ಮಹಾಘನವ !
ಆನೆಯ ಮಾನದೊಳಗಿಕ್ಕಿದರಡಗೂದೆ ದರ್ಪಣದೊಳಗಡಗೂದಲ್ಲದೆ ?
ಕಂಡ ಕಂಡಲ್ಲಿ ಗೋಷ್ಠಿ, ನಿಂದ ನಿಂದಲ್ಲಿ ಅನುಭಾವ,
ಬಂದ ಬಂದಲ್ಲಿ ಪ್ರಸಂಗವ ಮಾಡುವ ನಿರ್ಬುದ್ಧಿ ನೀಚರ ಮೆಚ್ಚ #ಕೂಡಲಚೆನ್ನಸಂಗಮದೇವ.
ಅನುಭಾವೆಂಬುದು ಅಂತರಂಗದ ಮಹಾ ಬೆಳಗು,
ಅನುಭಾವೆಂಬುದು ಬಹಿರಂಗದ ಕ್ರಿಯೆ,
ಅನುಭಾವವೆಂಬುದು ಆತ್ಮದ ಅರಿವು,
ಅನುಭಾವವೆಂಬುದು ಸತ್ಯದ ಅಗಮ್ಯ ಅನುಭೂತಿ, ಅನುಭಾವವೆಂಬ ಆನೆಯದು ಅಜ್ಞಾನಿಗಳ ಅಳತೆಗೆ ಸಿಗದು, ತನ್ನ ತಾನರಿದ ಸಂಯಮ ಜ್ಞಾನಿಗೆ ದರ್ಪಣದಲ್ಲಿ ಪ್ರತಿಬಿಂಬದಲ್ಲಿ ಗೋಚರಿಸುವುದು,
ಅಂತಲ್ಲದೆ, ಕಂಡ ಕಂಡಲ್ಲಿ ಗುಂಪುಗೂಡಿ ಗೋಷ್ಠಿಗಳನ್ನು ಮಾಡಿ, ಹಣದಾಸೆಗೆ ನಿಂದ ನಿಂದಲ್ಲಿ ಅನುಭಾವವ ನೀಡಿ, ಹೋದಲ್ಲಿ ಬಂದಲ್ಲಿ, ಕೊಟ್ಟವರನ್ನು ಹೊಗಳಿ ಅಟ್ಟಕೇರಿಸಿ, ದುರ್ಬುದ್ಧಿಯಿಂದ ಪೊಳ್ಳು ಮಾತುಗಳನ್ನಾಡುವವರು ಅನುಭಾವಿಗಳಲ್ಲ, ಅದರದ್ದು ಅನುಭಾವವೂ ಅಲ್ಲ,
ಅದು ಬರಿಯ ವ್ಯಾಪಾರ ಮಾತ್ರ, ತನ್ನ ಸ್ವಹಿತಾಸಕ್ತಿಗೆ ಮತ್ತೊಬ್ಬರ ಓಲೈಸುವಂಥಹಾ, ನೀಚ ಮನುಜರನ್ನು
ನನ್ನ ಆತ್ಮಸಾಕ್ಷಿಯು ಮೆಚ್ಚದು, ಭಂಗವಂತನೂ ಮೆಚ್ಚಲಾರ, ಎನ್ನುತ್ತಾರೆ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು,..👏🏻👏🏻
•ವಿಶ್ಲೇಷಣೆ•
ಶರಣು ಶರಣಾರ್ಥಿಗಳೊಂದಿಗೆ
#ಲೋಕೇಶ್_ಎನ್_ಮಾನ್ವಿ.
Comments
Post a Comment