ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ ? ಚಿನ್ಮಯಜ್ಞಾನಿ_ಚೆನ್ನಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ- ಲೋಕೇಶ್_ಎನ್_ಮಾನ್ವಿ.
ಓಂ ಶ್ರೀಗುರುಬಸವಲಿಂಗಾಯ ನಮಃ
ಕಾಯ ಬ್ರಹ್ಮಚಾರಿಯಾದಡೇನಯ್ಯಾ
ಆಸೆ ಬ್ರಹ್ಮಚಾರಿಯಾಗದನ್ನಕ್ಕರ ?
ಶಬ್ದ ಮೌನಿಯಾದಡೇನಯ್ಯಾ
ನೆನಹು ಮೌನಿಯಾಗದನ್ನಕ್ಕರ ?
ತನು ಬೋಳಾದಡೇನಯ್ಯಾ
ಮನ ಬೋಳಾಗದನ್ನಕ್ಕರ ?
ಇದು ಕಾರಣ_ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಸ್ಥಲವಾರಿಗೆಯೂ ಅಳವಡದು,.
ವಚನ-; #ಚಿನ್ಮಯಜ್ಞಾನಿ _ಚೆನ್ನಬಸವಣ್ಣನವರು,
ಭಾವಾರ್ಥ-;
ಬ್ರಹ್ಮ+ಚಾರಿ =ಬ್ರಹ್ಮಚಾರಿ, ನಾನು ನನ್ನದೆಂಬ ಆಸೆ_ಆಮಿಷ_ರೋಷ_ವಿಷಯಾದಿಗಳನ್ನು ಬಿಟ್ಟು, ಶ್ರೇಷ್ಠ ಸತ್ ಚಿಂತನೆಗಳನ್ನು ಆಚರಣೆಯಲ್ಲಿ ಮೈಗೂಡಿಸಿಕೊಂಡವನು ಎಂದರ್ಥ,.
ಹೀಗಿರುವಾಗ ನಾನು ಬ್ರಹ್ಮಚಾರಿ ಶ್ರೇಷ್ಠ ಚಿಂತನೆಗಳನ್ನು ಮೈಗೂಡಿಸಿಕೊಂವನೆಂದು ಲೋಕದ ಜನರೆದುರು ಬಿಂಬಿಸಿಕೊಂಡು, ಅಂತರಂಗದಲ್ಲಿ ಆಸೆ_ಆಮಿಷ_ರೋಷ_ವಿಷಯಾದಿಗಳನ್ನು ಬಿಡದೆ, ಉದಾ- ಮಾವಿನ ಹಣ್ಣನ್ನು ಬಿಟ್ಟೆನೆಂದರೂ ಅದರ ಸವಿರುಚಿ ಮತ್ತು ರೂಪಕವನ್ನು ಮನದಲ್ಲಿ ತುಂಬಿಕೊಂಡ ಆಸೆಯಳಿಯದ ಕಪಟಿ ಎಂದೂ ಬ್ರಹ್ಮಚಾರಿಯಾಗಲಾರ..
ಶಬ್ದ ಮೌನಿಯಾದಡೇನಯ್ಯಾ
ನೆನಹು ಮೌನಿಯಾಗದನ್ನಕ್ಕರ ?
ಇನ್ನು ಲೋಕದ ಗೊಡವೆಯೇ ನನಗೆ ಬೇಡೆಂದು, ಮಾತು ಬಿಟ್ಟು ಮೌನಾಚರಣೆ ಮಾಡುವೆನೆಂದರೆ, ಮಾತಿನ ಶಬ್ಧ ನುಡಿಯದೇ ಮೌನಿಯಾಗಬಹುದು,
ಆದರೆ ಮನದ ನೆನಹಿನಲ್ಲಿ ಯಾರನ್ನೂ, ಏನನ್ನೂ, ನೆನೆಯದೆ, ಮನಸ್ಸಿನ ನೆನಪುಗಳಲ್ಲಿ ಮೌನಿಯಾಗಿರಲಾರದು,.
ತನು ಬೋಳಾದಡೇನಯ್ಯಾ
ಮನ ಬೋಳಾಗದನ್ನಕ್ಕರ ?
ತಲೆ ಬೋಳಿಸಿಕೊಂಡರೆ ನಿನ್ನ ತಲೆಯ ತಿಂಡಿ ಹೋಗುವುದಲ್ಲದೆ, ನಿನ್ನ ತಲೆಯಲ್ಲಿರುವ ಕೆಟ್ಟ ಆಲೋಚನೆಗಳು ಹೋಗುವುದಿಲ್ಲ,.. ದೇಹದ ವಸ್ತ್ರಗಳನ್ನು ಬಿಟ್ಟಿರಬಹುದಲ್ಲದೇ, ಮನಸ್ಸಿನ ಕೆಟ್ಟ ಆಲೋಚನೆಗಳನ್ನು ಬಿಟ್ಟು, ಮನಸ್ಸು ನಿರಾಬಾರಿಯಾಗದಿದ್ದರೆ ಅದು ವ್ಯರ್ಥ ಸಾಧನೆ,…
ಇದು ಕಾರಣ_ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಸ್ಥಲವಾರಿಗೆಯೂ ಅಳವಡದು,.
ಇದೇನು ಕಾರಣವೆಂದರೆ, ನಾನು ಭಕ್ತ, ನಾನು ಶರಣ ಎಂದು ಹೆಸರಿಟ್ಟು ಕೊಳ್ಳಬಹುದು, ಆದರೆ ಆಚರಣೆಯಿಂದ ಸಾತ್ವಿಕನಾಗಿ ಶರಣನೆನಿಸಿಕೊಳ್ಳುವುದು ಬಲು ಕಷ್ಟ, ಏಕೆಂದರೆ- ಆಸೆ ಅಳಿದು, ರೋಷವನ್ನು ಬಿಟ್ಟು, ಅಂಗೇಂದ್ರಿಯಗಳನ್ನು ಲಿಂಗೇಂದ್ರಿಯಗಳನ್ನಾಗಿ ಪರಿವರ್ತಿಸಿಕೊಂಡು, ಅಂಗದ ಕ್ರಿಯೆಗಳೆಲ್ಲ ಲಿಂಗದ ಕ್ರಿಯೆಗಳಾಗಿ, ಕೊಂಬುವ ಜಲವೆಲ್ಲ ಪಾದೋದಕವಾಗಬೇಕು, ಜೀವನವು ಜಂಜಡವೆನ್ನದೇ ಕಷ್ಟ ನಷ್ಟಗಳೆಲ್ಲ, ಏಕರೂಪವಾಗಿ ತಗೆದುಕೊಂಡು ತನ್ನ ಬದುಕನ್ನೇ ಲಿಂಗಾರ್ಪಿತವಾಗಿಸಿ, ಉರಿಯೇ ಬರಲಿ ಸಿರಿಯೋ ಬರಲಿ ಏನೇ ಬಂದರೂ ಪ್ರಸಾದೀಕರಣಗೊಳಿಸಿ ಬದುಕನ್ನೇ ಲಿಂಗದಿಚ್ಚೆ ಎಂದು ಸ್ವೀಕರಿಸಬೇಕು ಆದಲೇ ಶರಣ ಸ್ಥಲ ಸಾಧ್ಯವಾಗುವುದು,. ಅದಲ್ಲದೇ ನಾನು ಶರಣನೆಂದು ನಾನೇ ಹೆಸರಿಟ್ಟುಕೊಂಡು ಕರೆಸಿಕೊಂಡರೆ ಅಗ್ನಿಯ ಕೂಡಾಗಿ ಕಾಷ್ಟಂಗಳು ಸುಟ್ಟಂತೆ ಸುಟ್ಟು ಹೋಗುವರು,.. ಹುಲಿಯ ಮೀಸೆಯಲ್ಲಿ ಉಯ್ಯಾಲೆಯಾಡಲು ಹೋಗಿ ಹುಲಿಗೆ ಆಹಾರವಾದಂತೆ, ಆಸೆ_ಆಮಿಷ_ರೋಷ_ವಿಷಯಾದಿಗಳನ್ನು ಬಿಡದೇ, ಕೂಡಲಚೆನ್ನಸಂಗನ ನಿಮ್ಮ ಶರಣನೆನಿಸಿಕೊಳ್ಳಲು ಹೋದ ಹುಲುಮಾನವರು ಸಮಾಜದ ಜನರ ನಾಲಿಗೆ ಆಹಾರವಾಗುವರು, ಎಂಬುದಾಗಿದೆ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ವಚನದ ಭಾವಾರ್ಥ,..
ಶರಣು ಶರಣಾರ್ಥಿಗಳೊಂದಿಗೆ…
ವಿಶ್ಲೇಷಣೆ-; #ಲೋಕೇಶ್_ಎನ್_ಮಾನ್ವಿ.
Comments
Post a Comment