ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, -: ಅಲ್ಲಮಪ್ರಭುದೇವರ ವಚನ. ✍🏾-;ವಿಶ್ಲೇಷಣೆ- ಲೋಕೇಶ್_ಎನ್_ಮಾನ್ವಿ.
ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ,ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ.ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ.ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ.
ವಚನ-;ಅಲ್ಲಮಪ್ರಭುದೇವರು.
ಅಲ್ಲಮರ ಈ ವಚನ ಲಿಂಗಾನುಸಂಧಾನದ ನಂತರ ಅದಕ್ಕೂ ಮೀರಿದ ಪರಿಪೂರ್ಣ ನಿಜ ಸುಖದ ಬಯಲ ಬಿಡಾಡಿಗಳಿಗೆ ಲಭಿಸುವ ಅನಂತತೆಯ ಆನಂದವಾಗಿದೆ.
ಕಣ್ಣಿಂಗೆ ಕಣ್ಣು, ಕಣ್ಮುಚ್ಚಿ ಮಲಗಿದರೂ ಇಡೀ ಜಗತ್ತನ್ನೇ ತಂದು ತೋರುವ ಮನಸ್ಸು, ನೋಡದ ವಸ್ತುವನ್ನು, ಕಲ್ಪಿಸುವಷ್ಟರಲ್ಲಿ ಅದರ ಚಿತ್ರವನ್ನೇ ತಂದಿಡಬಲ್ಲ ಮನಸ್ಸು,
ಕಣ್ಣೊಳು ಕಣ್ಣು, ಕಣ್ಣೇ ನೇತ್ರ, ಅದು ಮನಸ್ಸಿಗೇ ಮನಸ್ಸು ಅರಿವೆಂಬ ಕಣ್ಣು, ಕಂಡಿದ್ದನ್ನು
ಪ್ರಮಾಣಿಸಿ ನೋಡುವ ಅರಿವಿನ ಕಣ್ಣು , ಅದೇ ನೇತ್ರ. ಆ ನೇತ್ರವೇ (ಅರಿವಿನ ದೃಷ್ಠಿಯೇ) ಲಿಂಗವನ್ನು ಅನುಸಂಧಾನಿಸುವ ಸೂತ್ರ, ಆ ಸೂತ್ರವಿಡಿದು ಜ್ಯೋತಿವಿಡಿದು ಜ್ಯೋತಿಯಾದಂತೆ ಸೂತ್ರವೇ ಲಿಂಗ,
ಲಿಂಗವೆ ಗುಹ್ಯ, ಹಿಡಿದ ಸೂತ್ರ ಕಾಣಲಾರದ ಪಟ, ಅದುವೇ ಪ್ರಕೃತಿಯ ಅಗೋಚರ ಸತ್ಯ ಗುಹ್ಯ.
ಗುಹ್ಯಕ್ಕೆ ಗುಹ್ಯ, ಅಗೋಚರಕ್ಕೂ ಅಗೋಚರ ಪರಮ ವಿಸ್ತ್ರುತ ವಿಸ್ತಾರ ಸತ್ಯವದು,
ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೂ ರಹಸ್ಯ ಸೃಷ್ಠಿಯ ಪ್ರತಿ ಚಲನೆಯೂ ಕ್ಷಣಕ್ಷಣಕ್ಕೂ ಅತೀ ವೇಗ ಅತೀ ರಹಸ್ಯ , ಜಗದಲ್ಲಾಗುವ ಬದಲಾವಣೆಯೂ ರಹಸ್ಯ, ನಮ್ಮ ಈ ಇಡೀ ದೇಹದಲ್ಲಾಗುವ ಬದಲಾವಣೆ, ಭಾವನೆಗಳು ಕೂಡ ರಹಸ್ಯ ನಮಗೂ ತಿಳಿಯದಂತೆ ಕಣ್ಮುಚ್ಚಿದಾಗ ನಿಸರ್ಗದ ಒಂದು ಚಿತ್ರಣವೇ ಎದುರು ಬಂದು ಹೋದಂತೆ ಆಗಬಹುದು ಕಂಡೆನೆಂದರೆ ಕಣ್ಮುಚ್ಚಿದೆ, ಮತ್ತಾವ ಕಣ್ಣು ಕಂಡಿದೆ, ದೇಹ ವಿಶ್ರಾಂತಿ ಪಡೆಯಲು ಸೂಚಿಸುವುದು ಕೂಡ ಮೆದುಳೇ ಪ್ರತಿ ಕಾರ್ಯಕ್ಕೂ ಪ್ರಚೋದಿಸುವುದು ಕೂಡ ಮೆದುಳೇ ಆ ಮೆದುಳಿಗೂ ಮಿಗಿಲಾದ ಮತ್ತೊಂದು ಅಗೋಚರ ಶಕ್ತಿಯೇ ರಹಸ್ಯಕ್ಕೆ ರಹಸ್ಯ ಆತ್ಮ.
ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ.
ಇಂತಪ್ಪ ಸದಾ ಜಾಗ್ರತ ಪ್ರಜ್ಞೆಯಲ್ಲಿರುವ ಆತ್ಮದ ಚಿದ್ಬೆಳಕಿನ ಅರಿವನ್ನು, ಕಣ್ಣುಗೆಟ್ಟ (ಅರಿವುಗೆಟ್ಟ)ಅಣ್ಣಗಳೆತ್ತ ಬಲ್ಲರು ನೋಡಯ್ಯ, ಎಂದು ದೇಹಕ್ಕೆ ಆತ್ಮವಿರುವ ತನಕವೂ ಅದರ ಅರಿವನ್ನು ಅರಿಯದೇ ಹೋಗುವ ಅವಿವೇಕಿಗಳಿಗೆ ಅಲ್ಲಮಪ್ರಭುದೇವರು ಈ ವಚನದ ಮುಖೇನ ಎಚ್ಚರಿಸಿ ತಿಳಿ ಹೇಳುತ್ತಾರೆ.🙏🏻
ವಿಶ್ಲೇಷಣೆ-;
ಲೋಕೇಶ್_ಎನ್_ಮಾನ್ವಿ.
-/9972536176
Comments
Post a Comment