‘ರಾಜ_ಬಿಜ್ಜಳನ_ಸೊಕ್ಕು_ಮುರಿದ_ಶರಣ_ಮಾಚಯ್ಯ’👍🏻👌 ✍🏾ವಿಶೇಷ ಲೇಖನ-;#ಲೋಕೇಶ್_ಎನ್_ಮಾನ್ವಿ.
ಈ ಭಾವಚಿತ್ರವನ್ನು ಬಹುತೇಕರು ನೋಡಿರುತ್ತೀರಿ ಇದರ ಹಿಂದಿನ ರೋಚಕವಾದ ನೈಜ ಕಥೆನ್ನು ತಿಳಿಯೋಣ ಬನ್ನಿ,
೧೨ನೇ ಶತಮಾನದಲ್ಲಿ ಮಹಾಮಾನತಾವಾದಿ, ವಿಶ್ವಗುರು ಬಸವಣ್ಣನವರು ಕಲ್ಯಾಣ ರಾಜ್ಯದ ಪ್ರಧಾನಮಂತ್ರಿಯಾಗಿರುತ್ತಾರೆ,
ಪ್ರತಿದಿನ ಬಸವಣ್ಣನವರು ರಾಜ ಬಿಜ್ಜಳನ ಸಭೆಗೆ ಹೋಗುತ್ತಿರುತ್ತಾರೆ ಪ್ರತಿಬಾರಿ ಹೋದಾಗಲೂ ಅವರ ವಸ್ತ್ರಗಳು ಪಳಪಳನೆ ಹೊಳೆಯುತ್ತಿರುತ್ತವೆ, ಇದನ್ನು ಕಂಡ ಕೊಂಡೆ ಮಂಚಣ್ಣ ರಾಜ ಬಿಜ್ಜಳನಿಗೆ ಕಿವಿ ಊದುತ್ತಾನೆ, ಪ್ರಧಾನಿ ಬಸವರಸರ ವಸ್ತ್ರಗಳು ಎಷ್ಟು ಶುಭ್ರವಾಗಿವೆ ಪಳಪಳನೇ ಮಿಂಚುತ್ತಿವೆ, ಇದನ್ನು ಒಗೆಯುವಾತ ಮಾಡಿವಾಳ ಮಾಚಿದೇವ ಅವನಿಗೆ ನಿಮ್ಮ ವಸ್ತ್ರವನ್ನು ಒಗೆಯಲು ಕಳಿಸಿದರೆ ನಿಮ್ಮ ವಸ್ತ್ರವೂ ಸುಂದರವಾಗಿ ಕಾಣುತ್ತವೆ ಎಂದಾಗ,
ಬಿಜ್ಜಳ ತನ್ನ ಬಟ್ಟೆಯನ್ನು ಮಡಿ ಮಾಡಿಸಿಕೊಡಲು ಬಸವಣ್ಣನಿಗೆ ದುಂಬಾಲು ಬಿದ್ದ, ಮಡಿವಾಳಯ್ಯ ಪರಮ ಭಕ್ತ , ಅವನನ್ನು ಅಗಸನೆಂದು ಭಾವಿಸದಿರಲು ಬಸವಣ್ಣ ತಿಳಿ ಹೇಳಿದ , ಅದನ್ನು ರಾಜ ಲೆಕ್ಕಿಸದೆ ಮಾಸಿದ ತನ್ನ ಬಟ್ಟೆಗಳ ಗಂಟನ್ನು ಮಡಿ ಮಾಡಲು ಕಳಿಸಿದ ,
ಮಾಚಯ್ಯ ಶರಣರ ಬಟ್ಟೆ ಮಡಿಮಾಡುವಾಗ ಒಂದು ಕೈಯಲ್ಲು ಘಂಟೆ ಇನ್ನೊಂದು ಕೈಯಲ್ಲು ಖಡ್ಗ ವಿರುತ್ತಿತ್ತು, ಭವಿಗಳು ಶರಣರ ಬಟ್ಟೆ ಮುಟ್ಟಲು ಬರಬಾರದು ಎಂದು ಬರುವಾಗಲೇ ಘಂಟೆಯ ನಾದ ಮಾಡುತ್ತಿದ್ದರು ಮಾಚಯ್ಯ.
ಬಸವಣ್ಣನ ಬಟ್ಟೆ ಮಡಿಮಾಡುತ್ತಿರುವಾಗ
ಭವಿ ಬಿಜ್ಜಳನ ಮೈಲಿಗೆ ಬಟ್ಟೆಯ ಗಂಟನ್ನು ಕಂಡ ಮಡಿವಾಳ ಮಾಚಯ್ಯ ಕೋಪಗೊಂಡು ಸಿಟ್ಟಿನಿಂದ ನೋಡಲು ಆ ಕ್ಷಣದಲ್ಲಿ ಗಂಟು ಉರಿದು ಹೋಯ್ತು.
ಇದು ಮಡಿವಾಳಯ್ಯನ 'ಅಹಂಕಾರವೆಂದು' ಭಾವಿಸಿದ ಬಿಜ್ಜಳ ಅವರನ್ನು ಸೆರೆ ಹಿಡಿದು ತರಲು ಕುಂಟ -ಕುರುಡರ ಪಡೆಯೊಂದನ್ನು ಕಳುಹಿಸಿದ. ಮಡಿವಾಳಯ್ಯ ತನ್ನ ಶಕ್ತಿಯಿಂದ ಕುರುಡರಿಗೆ ಕಣ್ಣು ಕಾಣುವಂತೆ ಮತ್ತು ಕುಂಟರಿಗೆ ಕಾಲು ಬರುವಂತೆ ಮಾಡಿ ಅಂಗ ಸೌಷ್ಟ ವರನ್ನಾಗಿ ಮಾಡಿ ಕಳುಹಿಸಿದ. ಇದರಿಂದ ಉರಿದೆದ್ದು ಬಿಜ್ಜಳ 'ಮದೋನ್ಮತ್ತ' ಆನೆಯನ್ನ ಮಾಚಯ್ಯನ ಮೇಲೆ ಹರಿ ಹಾಯಲು ಬಿಟ್ಟ. ಸೈನಿಕರ ತುಕಡಿಯೊಂದನ್ನೂ ಕಳುಹಿಸಿದ. ಆನೆ ಹಾಗೂ ಅವರನ್ನೆಲ್ಲ ಸದೆ ಬಡಿದು ಜಯ ಶಾಲಿಯಾದ ಮಾಚಯ್ಯ, ಅತ್ಯಂತ ರೋಷಾವೇಶದಿಂದ ಬಿಜ್ಜಳನ ಕಡೆಗೆ ಬರುತ್ತಿರಲು ಇದನ್ನು ಕಂಡ ಬಸವಣ್ಣನವರು ಬಿಜ್ಜಳ ರಾಜನಿಗೆ ಎಚ್ಚರಿಸಿ ವೀರಗಣಾಚಾರಿ ಮಾಚಯ್ಯ ಅತ್ಯಂತ ಪರಾಕ್ರಮಿ ಮಿಗಿಲಾಗಿ ದಿಟ್ಟಶರಣ ಇವರ ಮುಂದೆ ನಿಮ್ಮ ಇಡೀ ಸೈನ್ಯವೇ ನಾಶವಾಗುತ್ತದೆಯೇ ಹೊರತು ಶರಣರ ಸ್ವಾಭಿಮಾನ ಗೆಲ್ಲುತ್ತತೆ , ನೀವೇ ಹೋಗಿ ಮಾಚಯ್ಯನ ಪಾಪವಿಡಿದು ಶರಣಾಗಿ ಎಂದು ಹೇಳಲು,
ರಾಜ ಬಿಜ್ಜಳನಿಗೆ ಮಾಚಿದೇವರ ಉನ್ನತ ಮಹಿಮೆ ತಿಳಿದು ತನ್ನ ತಪ್ಪಿನ ಅರಿವಾಗಿ ಬಿಜ್ಜಳ ತನ್ನ ರಾಜಬೀದಿಗೆ ಬರಲು ಅಲ್ಲೇ ಮಾಚಯ್ಯ ರೋಷಾಗ್ನಿಯಿಂದ ಎದುರಾದ ತಕ್ಷಣವೇ ತನ್ನ ರಾಜಬೀದಿಯಲ್ಲೇ ಪ್ರಜೆಗಳ ಮುಂದೆ ಮಂಡಿಯೂರಿದ ರಾಜ ಬಿಜ್ಜಳ, ಮಡಿವಾಳ ಮಾಚಯ್ಯನ ಪಾದವಿಡಿದು ಕ್ಷಮೆ ಕೋರಿದ ಶರಣಾಗತನಾಗುವನು…
ಕಾಯಕ ನಿಷ್ಠರಾದ ಶರಣರು ರಾಜನನ್ನೇ ಎದುರಿಸಬಲ್ಲರಲ್ಲದೇ ಸ್ವಾಭಿಮಾನದ ಕಾಯಕ ಬಿಡರು,
ಇದು ಬಹುತೇಕರ ಮನೆಯಲ್ಲಿ ಕಾಣಸಿಗುವ ಭಾವಚಿತ್ರ ಇದರ ಹಿಂದಿನ ಸನ್ನಿವೇಶ ಅತ್ಯಂತ ರೋಮಾಂಚಕವಾಗಿದೆ ಅಲ್ಲವೇ,…
ಓದಿದ ನಂತರ ಇತರರಿಗೂ ಶೇರ್ ಮಾಡಿ…
✍🏾ಲೇಖನ-#ಲೋಕೇಶ್_ಎನ್_ಮಾನ್ವಿ.
Comments
Post a Comment