‘ದೇವರಿಗೂ ಕಾಯಕ ತತ್ವ ತಿಳಿಸಿದ ಶರಣ ದಂಪತಿಗಳು ‘ಆಯ್ದಕ್ಕಿ ಲಕ್ಕಮ್ಮ ಆಯ್ದಕ್ಕಿ ಮಾರಯ್ಯನವರು’ ವಿಶೇಷ ಲೇಖನ-; ಲೋಕೇಶ್ ಎನ್ ಮಾನ್ವಿ.

ಶ್ರೀಗುರು ಬಸವಲಿಂಗಾಯ ನಮಃ ‘ ದೇವರಿಗೂ ಕಾಯಕ ತತ್ವ ತಿಳಿಸಿದ ಶರಣ ದಂಪತಿಗಳು ‘ ಆಯ್ದಕ್ಕಿ ಲಕ್ಕಮ್ಮ ಆಯ್ದಕ್ಕಿ ಮಾರಯ್ಯನವರು ’ ಇಡೀ ಜಗತ್ತಿಗೆ ‘ ಕಾಯಕವೇ ಕೈಲಾಸ ’ ವೆಂಬ ಅದ್ವಿತೀಯ ತತ್ವವನ್ನು ತಿಳಿಸಿದ ಮೊದಲಿಗರು ಶರಣೆ ಆಯ್ದಕ್ಕಿ ಲಕ್ಕಮ್ಮನವರು , ಇವರು ಶರಣ ಆಯ್ದಕ್ಕಿ ಮಾರಯ್ಯನವರ ಧರ್ಮಪತ್ನಿಯಾಗಿದ್ದರು , ಶರಣ ಸತಿಪತಿಗಳಿಬ್ಬರೂ ಮೂಲತಃ ರಾಯಚೂರು ಜಿಲ್ಲೆ , ಲಿಂಗಸೂಗೂರು ತಾಲೂಕಿನ ಅಮರೇಶ್ವರ ಗ್ರಾಮದವರಾಗಿದ್ದರೂ ಕಲ್ಯಾಣದಲ್ಲಿ ಜಗಜ್ಯೋತಿ ಬಸವಣ್ಣನವರ ತತ್ವಾದರ್ಶಗಳಿಗೆ ಮಾರು ಹೋಗಿ ಕಲ್ಯಾಣಕ್ಕೆ ಬರುತ್ತಾರೆ , ಕಲ್ಯಾಣಕ್ಕೆ ಬಂದ ನಂತರ ಅನುಭವ ಮಂಟಪದಲ್ಲಿ ಇಬ್ಬರಿಗೂ ಆತ್ಮೀಯ ಸ್ವಾಗತ ಕೋರಲಾಗುತ್ತದೆ , ಆದರೆ ಲಕ್ಕಮ್ಮನವರು ಹೆಚ್ಚಾಗಿ ಕಾಯಕ ದಾಸೋಹದಲ್ಲೇ ತೊಡಗುತ್ತಾರೆ , ಕಲ್ಯಾಣದಲ್ಲಿ ಇವರ ಕಾಯಕ ಹೊಲಗಳಲ್ಲಿ ಕೆಲಸ ಮಾಡುವುದು , ಭತ್ತದ ಕಣವಾದ ನಂತರ ಮಾಲಿಕರು ಮನೆಗೆ ಭತ್ತ ಒಯ್ಯುವಾಗ ಅಳಿದುಳಿದು ಬಿದ್ದ ಭತ್ತವನ್ನೇ ಕೂಲಿಯಾಗಿ ಆಯ್ದು ತಂದು ಅದರಲ್ಲೇ ದಾಸೋಹ ಮಾಡಿ ಮಿಕ್ಕಿದ್ದನ್ನು ಸೇವಿಸಿ ಸಂತೃಪ್ತರಾಗುತ್ತಿದ್ದರು , ಹೀಗಿರುವಾಗ ಪತಿ ಮಾರಯ್ಯ ಕೂಲಿಗೆಂದು ಹೊಲದಲ್ಲಿ ದುಡಿದು ಬರುವಾಗ ದಿನಕ್ಕಿಂತ ಹೆಚ್ಚಿನ ಅಕ್ಕಿಯನ್ನು ಆಯ್ದು ತರುತ್ತಾನೆ , ಇದನ್ನು ಗಮನಿಸಿದ ಪತ್ನಿ ...