‘ಸ್ತ್ರೀಕುಲೋದ್ಧಾರಕ ಬಸವಣ್ಣ’ ವಿಶೇಷ ಲೇಖನ -; ಚಿನ್ಮಯಿ ಲೋಕೇಶ್ ಮಾನವಿ.

 ‘ಸ್ತ್ರೀಕುಲೋದ್ಧಾರಕ ಬಸವಣ್ಣ’



ಬಸವಣ್ಣ  ಎಂಬ ಜಗತ್ತಿನ ಮೊಟ್ಟಮೊದಲ ಸ್ವಾತಂತ್ರ್ಯ ವಿಚಾರವಾದಿ. ೯೦೦-ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವದ ಕನಸು ಕಂಡು ಅದನ್ನು  ಅನುಷ್ಠಾನಗೈದು, ಜಾತ್ಯಾತೀತ, ಧರ್ಮಾತೀತ, ವರ್ಗ ವರ್ಣಾತೀತ, ಲಿಂಗ ತಾರತಮ್ಯ ರಹಿತ, ಸರ್ವ ಸಮಾನತೆಯ ಕಲ್ಯಾಣ ರಾಜ್ಯ ಕಟ್ಟಿ, ಜಾತಿ ಶ್ರೇಣೀಕೃತ ಸಮಾಜದಲ್ಲಿ  ಜಾತ್ಯಾತೀತ ನಿಲುವು ತಾಳಿ, ತಳ ಸಮುದಾಯಗಳ ಮೇಲೆತ್ತುವ ಕಾರ್ಯ ಮಾಡಿ, ವರ್ಣಾಶ್ರಮ ಪದ್ದತಿಯಲ್ಲಿ  ತಳ ಸಮುದಾಯದವರು ಓದಲು ಅವಕಾಶವಿರಲಿಲ್ಲ. ಒಂದೊಮ್ಮೆ ಕದ್ದು ಕೇಳಿದರೂ ಕಿವಿಗೆ  ಸುಡುವ ಎಣ್ಣೆ ಸುರಿದು ಕಿವಿ ಕೀಳುತಿದ್ದರು. ಮತ್ತು ಊರೊಳಗೆ ತಿರುಗಾಡುವ ಹಾಗಿಲ್ಲ ಒಂದೊಮ್ಮೆ ಊರೊಳಗೆ ಕಾಲಿಡಬೇಕಾದರೆ ಚಪ್ಪಲಿ ಧರಿಸದೆ ಬರಬೇಕು, ತಮ್ಮ  ಹೆಜ್ಜೆ ಗುರುತುಗಳು ಉಳಿಯದಂತೆ ಮಾಡಲು ಬೆನ್ನಿಗೆ ಪೊರಕೆ, ಮತ್ತು ಉಗುಳಲು  ಕೊರಳಲ್ಲಿ  ಬಿದಿರು ಪುಟ್ಟಿ ಕಟ್ಟಿಕೊಂಡು ಊರೊಳಗೆ ಪ್ರವೇಶಿಸಬೇಕು. ಇಂಥ ಕೆಟ್ಟ ದಿನಮಾನಗಳಲ್ಲಿ ಮಹಿಳಾ ಸಮಾನತೆಯಂತೂ ಕೇಳಲೇ ಬಾರದಾಗಿತ್ತು. 

ಅಸ್ಪುರ್ಶ್ಯ ಮಹಿಳೆಯರು ಮೇಲುಡುಗೆ ತೊಡುವಂತಿರಲಿಲ್ಲ. ಸ್ಪರ್ಶ್ಯ ಮೇಲ್ವರ್ಗದ ಮಹಿಳೆಯು ಮಾತ್ರ ಮೇಲುಡುಗೆ ಉಡಬಹುದು, ಎಂಬುದು ವರ್ಣಾಶ್ರಮದ ನಿಯಮವಾಗಿತ್ತು. ಇನ್ನು ಶಿಕ್ಷಣದ ವಿಚಾರಕ್ಕೆ ಬಂದರೆ ಅದು ಎಲ್ಲಾ ಸ್ತ್ರೀಯರಿಗೂ ಅಲಭ್ಯವಾಗಿತ್ತು, ಅಂದು ಸ್ತ್ರೀಕುಲವು ಶಿಕ್ಷಣ ಮತ್ತು ದಾರ್ಮಿಕ  ಸಮಾನ ಹಕ್ಕುಗಳಿಂದ ವಂಚಿತವಾಗಿತ್ತು. ಹೆಣ್ಣೆಂದರೆ ದಾಸಿಯಾಗಿ, ಭೋಗದ ವಸ್ತುವಾಗಿ, ಮಕ್ಕಳನ್ನು ಹೆರುವ ಯಂತ್ರವಾಗಿ ಮಾತ್ರ ಉಳಿದ ದಿನಮಾನವದು,

ಆ ಕೆಟ್ಟ ವ್ಯವಸ್ತೆಯ ಅಂಧಕಾರದಲ್ಲಿದ ಜಗತ್ತನ್ನು ಸಮಾನತೆಯ ಬೆಳಕಿನಡೆಗೆ ತರಲು ಬಂದವರೇ ವಿಶ್ವಗುರು ಬಸವಣ್ಣನವರು. ಶಿಕ್ಷಣವನ್ನು ನೀಡಿ. ವಯಸ್ಸಿನ ಬೇಧವಿಲ್ಲದೆ ಎಲ್ಲರಿಗೂ ಅಕ್ಷರದ ಅರಿವನ್ನು  ನೀಡಿ ಸುಶಿಕ್ಷಿತರನ್ನಾಗಿ ಮಾಡಿ ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದೀತು’ ಎಂಬಂತೆ ಶರಣೆ ಆಯ್ದಕ್ಕಿ ಲಕ್ಕಮ್ಮನವರು ಕಲ್ಯಾಣಕ್ಕೆ ಬಂದು ಹೊಲಗಳಲ್ಲಿ ಕೂಲಿ ಮಾಡಿ ನಂತರ ಗದ್ದೆಯ ಭತ್ತವನ್ನು ಸಂಸ್ಕರಿಸಿ ಅಕ್ಕಿ ಮಾಡುವ ಕಾಯಕ ಮಾಡುತ್ತಿದ್ದರು ಅವರ ಆದಾಯ ಸಂಸ್ಕರಿಸಿದ ನಂತರ ಮಾಲಿಕರು ಚೀಲ ತುಂಬಿಕೊಂಡು ಹೋಗುತ್ತಿದ್ದರು, ತುಂಬುವಾಗ ಕೆಳಗಡೆ ಬಿದ್ದ ಅಕ್ಕಿಯನ್ನೇ ಆಯ್ದುಕೊಂಡು ಬಂದು ಮನೆಯಲ್ಲಿ ದಾಸೋಹ ಮಾಡಿ ನಂತರ ಮಿಕ್ಕ ಪ್ರಸಾದವನ್ನೇ ಸೇವಿಸುವ ಕಾಯಕ ತತ್ವ ನಿಷ್ಠ ಮಹಿಳೆ ಕಾಯಕವೇ ಕೈಲಾಸ ಎಂದು ಮೊದಲು ಪ್ರತಿಪಾದಿಸಿದ ಶರಣೆ ಕೂಡ ಇದೇ ಆಯ್ದಕ್ಕಿ ಲಕ್ಕಮ್ಮನವರು. ಒಂದು ದಿನ ಕಾಯಕ ಮುಗಿಸಿಕೊಂಡು ಬರುವಾಗ ಗಂಡ ಹೆಚ್ಚು ಅಕ್ಕಿ ತಂದಿರುವುದನ್ನು ಗಮನಿಸಿ ಆಸೆ ಅರಸನಿಗೆ ಇರಬೇಕು ಶರಣರಾದ ನಿಮಗೇಕೆ? ಎಂದು ಗಂಡನಿಗೆ ಬುದ್ದಿವಾದ ಹೇಳಿ ಕಾಯಕದ ತತ್ವ



ಶರಣೆ ಆಯ್ದಕ್ಕಿ ಲಕ್ಕಮ್ಮನವರು ಕಾಯಕರತ್ನವೇ ಆದರು, ಇನ್ನೊ ಕ್ರಾಂತಿಗಂಗೋತ್ರಿ ಅಕ್ಕನಾಗಮ್ಮ  ಕ್ರಾಂತಿ ಎಂದರೆ ಬದಲಾವಣೆ ಗಂಗೋತ್ರಿ ಎಂದರೆ ಉದ್ಭವಿಸುವ ಮೂಲಸ್ಥಾನ ಇನ್ನು ಜಗಜ್ಯೋತಿ ಬಸವಣ್ಣನವರಲ್ಲಿ ಕ್ರಾಂತಿಕಾರದ ವಿಚಾರಗಳನ್ನು ತುಂಬಿ, ತಾಯಂತೆ ಪೋಷಿಸಿ ಬಸವಣ್ಣನವರಂಥ ವಿಶ್ವಮಾನವನನ್ನು ಪುಟಿದೇಳುವಂತೆ ಮಾಡಿದ್ದೇ 



ಅಕ್ಕನಾಗಮ್ಮನೆಂಬ ಕ್ರಾಂತಿಕಾರಿ ಶರಣೆ, ಇನ್ನು ಈ ಜಗವು ಕಂಡ ಮೊಟ್ಟಮೊದಲ ಕವಿಯಿತ್ರಿ ಉಡುತಡಿಯ ಕ್ರಾಂತಿಕಿಡಿ 

ಅಕ್ಕಮಹಾದೇವಿಯವರು ಪುರುಷಪ್ರಧಾನ ಸಮಾಜದಲ್ಲಿ ರಾಜಶಾಹಿತ್ವವನ್ನು ದಿಕ್ಕರಿಸಿ ನಿಂತ ದಿಟ್ಟ ಮಹಿಳಾ ಸಿಂಹಿಣಿ ಅಕ್ಕಮಹಾದೇವಿಯವರು , ಕಲ್ಯಾಣದಲ್ಲಿ ಕಸ ಗುಡಿಸುವ ಕಾಯಕ ಮಾಡಿಕೊಂಡಿದ್ದಾಗ  ಕಾಲಲ್ಲಿ ಚಿನ್ನದ ಗಂಟು ಬಿದ್ದಿದ್ದಾರೂ ಮುಟ್ಟದ ದಿಟ್ಟ  

ನಿಜಶರಣೆ ಸತ್ಯಕ್ಕ  ಲಂಚ ವಂಚಕರಿಗೆ ತನ್ನ ವಚನಗಳ ಮೂಲಕ ಚಾಟಿ ಬೀಸುತ್ತಾಳೆ, ಶರಣೆ ನೀಲಾಂಬಿಕೆ, ಶರಣೆ ಗಂಗಾಂಬಿಕೆಯವರು, ಶರಣೆ ಮೋಳಿಗೆ ಮಹಾದೇವಿ ,ಶರಣೆ  ಬೋಂತಾದೇವಿ, ಶರಣೆ ದುಗ್ಗಳೆ, ಶರಣೆ ದಾನಮ್ಮ, ಶರಣೆ ಸಂಕವ್ವೆ, ಶರಣೆ ಅಮ್ಮುಗೆರಾಯಮ್ಮ, ಕನ್ನಡಿ ಕಾಯಕದ ಶರಣೆ ರೇವಮ್ಮ, ಕಾಟಕೂಟಯ್ಯಗಳ ಪುಣ್ಯಸ್ಥ್ರೀ ಶರಣೆ ರೇಚವ್ವೆ, ಕೊಂಡೆ ಮಂಚಣ್ಣನಗಳ ಪುಣ್ಯಸ್ತ್ರೀ ಶರಣೆ  ಲಕ್ಷ್ಮಮ್ಮ, ಶರಣೆ  ಮುಕ್ತಾಯಕ್ಕ, ಶರಣೆ ಹಡಪದ ಲಿಂಗಮ್ಮ, ಶರಣೆ ಕಲ್ಯಾಣಮ್ಮ, ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಶರಣೆ ಕಾಳವ್ವೆ, ಶರಣೆ ಮಸಣಮ್ಮ, ಕದಿರೆ ರೆಮ್ಮವ್ವೆ, ಕುಟ್ಟಣದ ಸೋಮಮ್ಮ, ಶರಣೆ ಕೇತಲಾದೇವಿ, ಶರಣೆ ಗೊಗ್ಗವ್ವೆ, ಶರಣೆ ಗುಡ್ಡವ್ವೆ,  ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ಶರಣೆ ರಾಯಮ್ಮ, ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ  ಶರಣೆ ಕಾಳವ್ವೆ, ರೇವಣಸಿದ್ಧಯ್ಯಗಳ ಪುಣ್ಯಸ್ತ್ರೀ ಶರಣೆ ರೇಕಮ್ಮ, ಇನ್ನೂ ಅನೇಕನೇಕ ಶರಣೆಯರು ಕಾಯಕ ನಿಷ್ಠರಾಗಿ, ದಾಸೋಹ ಬದ್ದರಾಗಿ, ಸುಶಿಕ್ಷಿತರಾಗಿ ವಚನಕಾರ್ತಿಯರಾದರು, ಬದುಕಿನುದ್ದಕ್ಕೂ ಯಶಸ್ವಿ ಜೀವನ ಸಾಗಿಸಿ ದೇಶ ಭಾಷೆಗಳ ಗಡಿಯನ್ನು ಮೀರಿ ಕಿರ್ತಿಗಳಿಸಿದ್ದಾರೆ, ಇನ್ನು ತದನಂತರ ಬಂದು ಸಾಧನೆಗೈದ ಭಾರತದ ಮಾತೃ ಹೃದಯಿಗಳು ಸಿಂಹಿಣಿಯರಾದ ಮಹಿಳಾ ಮಣಿಗಳು ಹೀಗಿದ್ದಾರೆ… 

ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಝಾನ್ಸಿರಾಣಿಲಕ್ಷ್ಮೀಬಾಯಿ, ಬೆಳವಾಡಿ ಮಲ್ಲಮ್ಮ, ಒನಕೆ ಓಬವ್ವ, ಮದರ್ ತೆರೇಸಾ, ಅರುಣಾ ಆಸಿಫ್ ಅಲಿ, ಅಕ್ಷರದವ್ವ ಸಾವಿತ್ರಿಬಾಯಿ ಪೂಲೆ,ಸರ್ವೋಚ್ಚ ನ್ಯಾಯಾಲಯದಲ್ಲಿ ಮೊದಲ ಮಹಿಳಾ ನ್ಯಾಯಾಧೀಶರು – ಶ್ರೀಮತಿ ಮೀರಾ ಸಾಹಿಬ್ ಫಾತಿಮಾ ಬೀಬಿ, ಮೊದಲ ಮಹಿಳಾ ರಾಯಭಾರಿ – ಮಿಸ್ ಸಿ ಬಿ ಮುಥಮ್ಮಾ, ಮುಕ್ತ ಭಾರತದ ರಾಜ್ಯ ಮಹಿಳಾ ಗವರ್ನರ್ – ಶ್ರೀಮತಿ ಸರೋಜಿನಿ ನಾಯ್ಡು, ರಾಜ್ಯ ವಿಧಾನಸಭೆಯ ಮೊದಲ ಮಹಿಳೆ ಸ್ಪೀಕರ್ –ಶಾನೋ ದೇವಿ,ಮೊದಲ ಮಹಿಳೆ ಪ್ರಧಾನಿ – ಶ್ರೀಮತಿ ಇಂದಿರಾ ಗಾಂಧಿ, ಸರ್ಕಾರದ ಪ್ರಥಮ ಮಹಿಳಾ ಮಂತ್ರಿ – ರಾಜ್ಕುಮಾರಿ ಅಮೃತ್ ಕೌರ್, ಮೌಂಟ್ ಎವರೆಸ್ಟ್ ಏರಲು ಮೊದಲ ಮಹಿಳೆ –ಬಚೇಂದ್ರಿ ಪಾಲ್, ಮೌಂಟ್ ಎವರೆಸ್ಟ್ಗೆ ಎರಡು ಬಾರಿ ಏರುವ ಮೊದಲ ಮಹಿಳೆ –ಸಂತೋಷ್ ಯಾದವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮೊದಲ ಮಹಿಳಾ ಅಧ್ಯಕ್ಷ – ಶ್ರೀಮತಿ ಅನ್ನಿ ಬೆಸೆಂಟ್, ಭಾರತೀಯ ವಾಯುಪಡೆಯ ಮೊದಲ ಮಹಿಳೆ ಪೈಲಟ್ – ಹರಿತಾ ಕೌರ್ ದಯಾಳ್, ಪ್ರಥಮ ಮಹಿಳಾ ಪದವೀಧರರು – ಕದಂಬಿಣಿ ಗಂಗೂಲಿ ಮತ್ತು ಚಂದ್ರಮುಖಿ ಬಸು, 1883, ಮೊದಲ ಮಹಿಳೆ ಏರ್ಲೈನ್ ಪೈಲಟ್ – ಡರ್ಬಾ ಬ್ಯಾನರ್ಜಿ, ಮೊದಲ ಮಹಿಳಾ ಗೌರವ ಪದವಿ – ಕಾಮಿನಿ ರಾಯ್, 1886, ಮೊದಲ ಮಹಿಳೆ ಒಲಿಂಪಿಕ್ ಪದಕ ವಿಜೇತ –ಕರ್ಣಮ್ ಮಲೇಶ್ವರಿ, 2000, ಮೊದಲ ಮಹಿಳೆ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ – ಕಾಮ್ಲಿಜಿತ್ ಸಂಧು, ಮೊದಲ ಮಹಿಳಾ ವಕೀಲ – ಕಾರ್ನೆಲಿಯಾ ಸೊರಾಬ್ಜೀ,ವಿಶ್ವಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷರು ಸಾಮಾನ್ಯ ಸಭೆ – ಶ್ರೀಮತಿ ವಿಜಯ ಲಕ್ಷ್ಮೀ ಪಂಡಿತ್, ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ – ಶ್ರೀಮತಿ ಸುಖೇತಾ ಕೃಪಾಲಾನಿ, ಯುನಿಯನ್ ಪಬ್ಲಿಕ್ ಸರ್ವಿಸ್ ಆಯೋಗದ ಮೊದಲ ಮಹಿಳೆ – ರೋಜ್ ಮಿಲಿಯನ್ ಬೆಥ್ಯೂ, ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕ -ಕಾಂಚನ್ ಚೌಧರಿ ಭಟ್ಟಾಚಾರ್ಯ
20) ಮೊದಲ ಮಹಿಳಾ ನ್ಯಾಯಾಧೀಶ – ಅಣ್ಣಾ ಚಾಂಡಿ (ಅವಳು 1937 ರಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದರು)

ಮುಖ್ಯ ನ್ಯಾಯಾಲಯದ ಚೈಫ್ ಜಸ್ಟೀಸ್ ಮೊದಲ ಮಹಿಳೆ – ಶ್ರೀಮತಿ ಲೀಲಾ ಸೇಥ್ (ಹಿಮಾಚಲ ಪ್ರದೇಶ ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲಿ ಮೊದಲ ಮಹಿಳೆ ನ್ಯಾಯಾಧೀಶರು ಭಾರತ – ಕುಮಾರಿ ನ್ಯಾಯಮೂರ್ತಿ ಎಂ ಫಾತಿಮಾ ಬೀವಿ, ಮೊದಲ ಮಹಿಳೆ ಲೆಫ್ಟಿನೆಂಟ್ ಜನರಲ್ – ಪುನೀತಾ ಅರೋರಾ,
ಮೊದಲ ಮಹಿಳೆ ಏರ್ ವೈಸ್ ಮಾರ್ಷಲ್ – ಪಿ ಬಂಡೋಪಾಧ್ಯಾಯ,
ಇಂಡಿಯನ್ ಏರ್ಲೈನ್ಸ್ನ ಮೊದಲ ಮಹಿಳಾ ಅಧ್ಯಕ್ಷೆ –ಸುಷ್ಮಾ ಚಾವ್ಲಾ, ಮೊದಲ ಮಹಿಳಾ ಐಪಿಎಸ್ ಅಧಿಕಾರಿ – ಶ್ರೀಮತಿ ಕಿರಣ್ ಬೇಡಿ, ಮದೀನ ಮತ್ತು ಮುಸ್ಲಿಂ ಮಹಿಳಾ ಆಡಳಿತಗಾರ್ತಿ –ರಝಿಯಾ ಸುಲ್ತಾನ್,
ಅಶೋಕ ಚಕ್ರವನ್ನು ಸ್ವೀಕರಿಸಿದ ಮೊದಲ ಮಹಿಳೆ –ನಿರ್ಜಾ ಭಾನೋಟ್,
ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ – ಅಶುಪುರ್ನಾ ದೇವಿ,
ಇಂಗ್ಲೀಷ್ ಚಾನೆಲ್ ಮೊದಲ ಮಹಿಳೆ – ಆರತಿ ಸಹಾ, ನೊಬೆಲ್ ಪ್ರಶಸ್ತಿ ಪಡೆದ ಮಹಿಳೆ – ಮದರ್ ತೆರೇಸಾ,
ಭಾರತ ರತ್ನವನ್ನು ಸ್ವೀಕರಿದ ಮೊದಲ ಮಹಿಳೆ  ಶ್ರೀಮತಿ ಇಂದಿರಾ ಗಾಂಧಿ, ಭಾರತದ ಮೊದಲ ಮಹಿಳಾ ಅಧ್ಯಕ್ಷೆ ಪ್ರತಿಭಾ ದೇವಿಸಿಂಗ್ ಪಾಟೀಲ್, ಹೀಗೇ ಕಾಲಾಂತರದಲ್ಲಿ ಭಾರತದ ಮಹಿಳಾ ಮಣಿಗಳು ವಿಶ್ವ ಭೂಪಟದಲ್ಲಿ ಮಿಂಚಿದ್ದಾರೆ, ಇಂದಿನ ಶಿಕ್ಷಣ ವ್ಯೆವಸ್ತೆಯು ಬಲಿಷ್ಠವಾಗಿದೆ ಸ್ತ್ರೀಯರಿಗೆ ಕಾನೂನಿನ ರಕ್ಷೆಯಿದೆ , ಸಂವಿಧಾನದ ಧ್ವನಿಯಿದೆ, ಮುಖ್ಯವಾಗಿ ಅವರಲ್ಲಿ ಜಾಗ್ರತವಾದ ಅರಿವಿದೆ, ಅದು ಈ ನೆಲದ ಧ್ವನಿಯಾಗಿತ್ತು ಬಸವಣ್ಣನವರ ಸದಾಶಯವಾಗಿತ್ತು, ಮಹಿಳಾ ಹಕ್ಕುಗಳಿಗಾಗಿಯೇ ಬಸವಣ್ಣ ಮನೆ ಬಿಟ್ಟು ಬಂದರು, ಇಂದು ಅವರ ಆಶಯಗಳನ್ನು ಈಡೇರಿಸಿದ ಮತ್ತು ಈಡೇರಿಸುತ್ತಿರುವ ಈಡೇರಿಸಲಿರುವ ಮಾತೃ ಹೃದಯಿ ಮಹಿಳಾ ಸಾಧಕಿಯರೆಲ್ಲರಿಗೂ ಅಂತಃಕರಣ ಪೂರ್ವಕ ಅಂತರಾಷ್ಟ್ರೀಯ ಮಹಿಳಾ ದಿನದ ಗೌರವದ ಶುಭಾಶಯಗಳು…


✍🏾ವಿಶೇಷ ಲೇಖನ-; 

ಚಿನ್ಮಯಿ ಲೋಕೇಶ್ ಮಾನವಿ.

-9972536176




Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.