ಬಸವಣ್ಣರೆ ಎನ್ನಪ್ಪನೆಂದಿರಿ, ಶರಣರ ವಚನಂಗಳೆ ಎನ್ನುಸಿರೆಂದಿರಿ, ಅಥಣಿ ಶಿವಯೋಗಿಗಳಿಗೆ ಅರ್ಪಣೆ;

 ಓಂ ಶ್ರೀಗುರುಬಸವಲಿಂಗಾಯ ನಮಃ



ಬಸವಣ್ಣರೆ ಎನ್ನಪ್ಪನೆಂದಿರಿ, ಶರಣರ ವಚನಂಗಳೆ ಎನ್ನುಸಿರೆಂದಿರಿ, ಅವ್ವನೀಲವ್ವೆಗಳೆ ತಾಯೆಂದುಶರಣಸಂಕುಲಕೆ ಶರಣೆಂದಿರಿ,. 

ಶಿವಯೋಗಿ ಹೊರಟಿರಿ ದಟ್ಟಾರಣ್ಯದೊಳ್ 

ಶರಣ ರೇಚಯ್ಯಗಳ ದರುಶನಕೆ ಹುಲಿಯುಕಂಡಿವರ 

ಸಾತ್ವಿಕತೆಗೆ ಶಿರಬಾಗಿ ಶರಣೆನ್ನುತಿರಲು ಪ್ರಸನ್ನ ಶಿವಯೋಗಿ ತಾವಾದಿರಿ,



ಜಾತಿ ವಿಜಾತಿ ಎಂಬ ಕಾಲದಿ ಮುಂಜಾನೆ ಮಂಜಿನಲೆ ಮಂಜಪ್ಪಗೆ 

ಕರೆದು ಲಿಂಗದೀಕ್ಷೆಯನಿತ್ತು ಹರಸಿದಿರಿ,.

ಕಾರುಣ್ಯ ರೂಪದಿಂ ಬಂದ ಭಕ್ತರ ಸಂತೈಪ ನಿಜಶರಣ ಶಿವಯೋಗಿವರ್ಯರೆ ತಾವಾದಿರಿ,.

ತಮಗೆ ಶರಣೆಂದು ಬಂದ ಬಾಲಗಂಗಾಧರ ತಿಲಕರಿಗೆ ಕರೆದುದೇಶಕೆ ಸ್ವಾತಂತ್ರ್ಯ ಸಿಗುವುದೆಂದು ಅಭಯವನಿಟ್ಟು ಕಳುಹಿದಿರಿ,

ಅಪ್ಪಬಸವನನ್ನು ತತ್ವದಿ ಅಪ್ಪಿಕೊಂಡಿರಿ,

ಪ್ರಭು ಅಲ್ಲಮನನ್ನು ಬೆರಗಿನ ಕಣ್ಣಲೆ ಕೂಡಿಕೊಂಡಿರಿ.

ಚೆನ್ನಬಸವಣ್ಣನ ಚಿನ್ಮಯತವನಿಧಿಯಾಗಿ ತಾವು ಆಚಾರಲಿಂಗಿಯಾದಿರಿ.

ಸೊಲ್ಲಾಪುರ ಸಿದ್ಧರಾಮನ ಯೋಗ ದೃಷ್ಟಿಯಲೆ ಕಂಡಿರಿ,

ವೀರಮಾಚಯ್ಯಗಳ ದಿಟ್ಟನಿಲುವು ತಾವಾದಿರಿ,

ಹಡಪದಪ್ಪಣ್ಣಗಳ ಕರುಣೆಗೆ ಕಣ್ಮಣಿಯಾದಿರಿ,.

ಚೆನ್ನಯ್ಯನ ಮನೆಯ ಅಂಬಲಿಗರು ತಾವೆಂದಿರಿ

ನಂಬಿ ಬಂದವರ ಭವ ದಾಟಿಪ ಅಂಬಿಗರು ತಾವಾದಿರಿ,

ದಿವ್ಯಪುರುಷರು ತಾವು ಭವ್ಯದೃಷ್ಟಿಯ ಹರೆಸಿ ಪರುಷ ಹಸ್ತರಾಗಿ ಅನಂತರಿಗೆ

ಲಿಂಗದೀಕ್ಷೆಯನಿತ್ತಿರಿ.

ಜಗವೆಲ್ಲ ಜಂಗಮ ನಾನೊಬ್ಬನೆ ಸೇವಕನೆಂದು,

ಬಸವಣ್ಣನನ್ನೇ ನೆನೆ ನೆನದು,

ಬಸವಣ್ಣನನ್ನೇ ಸ್ಮರಿಸಿ ಸ್ಮರಿಸಿ,  ಬಸವಣ್ಣನನ್ನೇ ಧ್ಯಾನಿಸಿ ಜ್ಞಾನಿಸಿ,

ಬಸವಣ್ಣನನ್ನೇ ಅರಿದರಿದು ಅನುಸರಿಸಿ,  ಬಸವಣ್ಣನಲ್ಲೇ ಕಳೆದು ಹೋಗಿ,

ಬಸವಣ್ಣನಲ್ಲೇ ಹುದುಗಿ ಹೋಗಿ ,.

ಬಸವಣ್ಣನಲ್ಲೇ ಮುಳುಗಿ ಹೋಗಿ,.

ಬಸವಣ್ಣ ಬಸವಣ್ಣ ಬಸವಣ್ಣನೆಂದು

ಬಸವಣ್ಣನೊಳಗೆ ಬೆರೆತು ಬಯಲಾಗಿ 

ಅಪ್ರಮಾಣ ಚಿನ್ಮಯ ಲಿಂಗದ ಸಾಕ್ಷಿಗೂ

ಜಗಕೆ ಮತ್ತೊಬ್ಬ ಬಸವಣ್ಣರೆ ನೀವಾದಿರಿ,.🙏🏻🙏🏻



        ಅರ್ಪಣೆ-; ✍🏻ಲೋಕೇಶ್ ಎನ್ ಮಾನ್ವಿ.



Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.