ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ ! ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ ! ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಶಣೆ-; ಲೋಕೇಶ್ ಎನ್ ಮಾನ್ವಿಯವರು.
ಓಂ ಶ್ರೀಗುರು ಬಸವಲಿಂಗಾಯ ನಮಃ
ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ !
ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ !
#ಕೂಡಲಸಂಗಮದೇವನಲ್ಲದೆ ತಲೆದೋರುವ ದೈವಂಗಳನಂದೂ ಕಾಣೆನಿಂದೂ ಕಾಣೆ.
✍🏾-:ವಿಶ್ವಗುರು ಬಸವಣ್ಣನವರು.👏🏻
#ಭಾವಾರ್ಥ-:
ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ !
ಯುಗ ಯುಗಗಳೇ ಲಯವಾದ ಕಾಲದಲ್ಲೂ,
ರಾಜಾದಿ ರಾಜರೂ ಮಡಿದರು, ಕೋಟೆಕಟ್ಟಿ ಮೆರೆದವರು ಅಳಿದರು,
ಕಾಲಕಾಲದಿಂದಲೂ ಅವರವರ ಸಂಸ್ಕೃತಿಗಳು ಬದಲಾದುತ್ತಾ ಬಂದಿವೆ,
ಒಬ್ಬರು ಮತ್ತೊಬ್ಬರ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ,
ಮನುಷ್ಯನು ತನ್ನ ಕಲ್ಪನೆಗೆ ಅನುಗುಣವಾಗಿ
ದೇವರನ್ನು ಭಿನ್ನ-ವಿಭಿನ್ನವಾಗಿ ಚಿತ್ರಿಸುತ್ತಿದ್ದಾನೆ,
ಮತ್ತೊಬ್ಬ ರಾಜ, ಇನ್ನೊಂದು ದೇಶ ಪ್ರದೇಶಗಳನ್ನು ಯುದ್ದ ಮಾಡಿ ಆಕ್ರಮಿಸಿಕೊಂಡಾಗ, ತನ್ನ ಚಿಂತನೆಯಂತೆ ದೇಶ ನಗರ ಮತ್ತು ಆಕಾರದ ದೇವರ ರೂಪವನ್ನೇ ಬದಲಾಯಿಸುತ್ತಾ ಬಂದಿದ್ದಾರೆ,
ಆದರೆ ಪ್ರಕೃತಿ ವಿಕೋಪವಾಗಿ ದೇಗುಲವೇ ಮುಳುಗಿದರೂ ಮನುಜ ಕಲ್ಪಿತ ರೂಪಗಳಿಗೆ ಜೀವ ಬರಲಿಲ್ಲ, ರಾಜ್ಯಗಳು ಅಳಿದರೂ ಸಾವಿರಾರು ಜನರು ಮಡಿದರೂ ಮನುಜ ಕಲ್ಪಿತ ರೂಪಗಳು ಕಣ್ಣು ಬಿಡಲಿಲ್ಲ,
#ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ !
ಮನುಷ್ಯನು ಏನು ತೋಚದಂತೆ, ಧಿಗಿಲು ಬಡಿದು ಸ್ಥಬ್ದವಾಗಿ ನಿಂತಾಗಲು,
ಭುಗಿಲು ಬಡಿದು ಆತಂಕ ಮುಗಿಲು ಮುಟ್ಟಿದರೂ ನಾವು ಮಾಡಿದ ದೇವರ ರೂಪಗಳು ಕಣ್ಣು ಬಿಡಲಿಲ್ಲ, ಎದ್ದು ಬರಲಿಲ್ಲ,
ತುಟಿಕ್ ಪಿಟಿಕ್ ಎನಲಿಲ್ಲ ಕಾರಣ ಅದನ್ನು ನಿರ್ಮಿಸಿದ್ದು ಮಾನವನೇ ಹೊರತು ಅದು ಮೂಲ ಸೃಷ್ಠಿಯಲ್ಲ,
ವಾಸ್ತವವಾಗಿ ಅದೊಂದು ಬರಿಯ ಮನುಜ ಕಲ್ಪಿಸಿದ ಸುಂದರ ಚಿತ್ರದ ಮೂರ್ತಿ ಅಷ್ಟೇ,
ಆದರೆ ಸೃಷ್ಟಿಯ ಮೂಲವೇ ಬೇರಿದೆ, ಅದರ ಮೂಲ ರೂಪವು ನಿರೂಪ.
ಅದರ ಆಕಾರವೇ ನಿರಾಕಾರ, ಅದರ ಗೋಚರತೆ ಅಗಮ್ಯ ಮತ್ತು ಅಗೋಚರ,
ಅದರ ವ್ಯಾಪ್ತಿಯ ಶಕ್ತಿ ಅಪ್ರತಿಮ ಅಪ್ರಮಾಣ,
ಅದನ್ನು ಕೇವಲ ಒಂದು ನಿರ್ದಿಷ್ಟ ಸ್ಥಳದಲ್ಲಿ ಹಿಡಿದಿಡಲಾಗದು,
ಅದನ್ನು ಕಲ್ಪಿಸಿಕೊಳ್ಳಲೂ ಆಗದ,
ಅಗಮ್ಯ ಅಗೋಚರ ಅಪ್ರತಿಮ ಅಪ್ರಮಾಣ ಸ್ವಯಂ ಚೈತನ್ಯವದು.
ಸೃಷ್ಟಿ ಸಮಷ್ಟಿಯ ಕಣಕಣದಲ್ಲೂ ತುಂಬಿದ ನಿಸ್ಸೀಮ ಚೆಲುವದು,
ಅಂಗದೊಳಗೆ ಸ್ವಯಂ ಆತ್ಮಜ್ಯೋತಿಯದು,
ಬಯಲ ಮಹಾ ಬಯಲದು, ಜಗವೆಲ್ಲದರ ಸಕಲ ವಿಸ್ತಾರದ ರುಹದು,
#ಕೂಡಲಸಂಗಮದೇವನಲ್ಲದೆ ತಲೆದೋರುವ ದೈವಂಗಳನಂದೂ ಕಾಣೆನಿಂದೂ ಕಾಣೆ.
ಸೃಷ್ಠಿ-ಸ್ಥಿತಿ-ಲಯ ಕಾರಣದ ಪ್ರಕೃತಿಯ ಸಂಗಮವದು, ಬಯಲ ಆ ಮಹಾನ್ ಶಕ್ತಿ, ನಿರಾಕಾರ ಚೈತನ್ಯವಲ್ಲದೇ ಇಲ್ಲಿ ಮನುಜ ಕಲ್ಪಿತ ವಸ್ತು ವಿಷಯಂಗಳ್ಯಾವೂ, ಕೂಡ ಈ ಪ್ರಕೃತಿಯ ಸೃಷ್ಟಿಯಲ್ಲಿ ಸ್ಥಿರವಲ್ಲ, ಶಾಶ್ವತವೂ ಅಲ್ಲ, ಎಂಬುದಾಗಿ ಮೇಲಿನ ವಚನದ ಮೂಲಕ ವಿಶ್ವಗುರು ಬಸವಣ್ಣನವರು ತಿಳಿಸುತ್ತಾರೆ..👏🏻👏🏻👏🏻
ಶರಣು ಶರಣಾರ್ಥಿಗಳೊಂದಿಗೆ
ವಿಶ್ಲೇಷಣೆ-;
✍🏾#ಲೋಕೇಶ್_ಎನ್_ಮಾನ್ವಿ
-/ 9972536176
Comments
Post a Comment