‘ಪರಮದಾಸೋಹಿ ಶರಣಬಸವರು’
‘ಪರಮದಾಸೋಹಿ ಶರಣಬಸವರು’
ಪರಮದಾಸೋಹಿ ಶರಣಬಸವರು,
ಊರ ಜನರೆಲ್ಲ ಜೋಳವನ್ನು ಬಿಟ್ಟು ಬೇರೆ ಬೆಳೆ ಆಶ್ರಯಿಸಿದಾಗ ತಾವು ಒಬ್ಬರೇ ಜೋಳವನ್ನು ಬಿತ್ತಿದ್ದರು, ಊರ ಜನರೆಲ್ಲ ನಿನ್ನ ಬೆಳೆ ಪಕ್ಷಿಗಳಿಗೆ ಆಹಾರವಾಗುತ್ತೆ ಎಂದು ನಗುತ್ತಿರುವಾಗ…
ಪಾಪ ಜೋಳ ತಿಂದಾಗ ನೀರು ಬೇಕಲ್ಲ ಪಕ್ಷಿಗಳಿಗೆ ಎಂದು ಶರಣಬಸವರು ನೀರನ್ನು ಇಟ್ಟಾಗ ಊರ ಜನರೆಲ್ಲ ಶರಣನಿಗೆ ತಲೆ ಕೆಟ್ಟಿದೆ ಎಂದು ಮಾತಾಡಿದರು. ಜನರ ಬೆಳೆಗಳು ಕಣಕ್ಕೆ ಬರುವಷ್ಟರಲ್ಲಿಊರಿಗೆ ಊರೇ ಬರ ಬಿದ್ದು ಎಲ್ಲರ ಬೆಳೆ ಕೈಕೊಟ್ಟಿದ್ದವು, ಆದರೆ ಶರಣಬಸವರ ಜೋಳ ಬೆಳೆ ಎಂದಿಗಿಂತ ಹೆಚ್ಚಾಗಿ ದಾಖಲೆ ಪ್ರಮಾಣದಲ್ಲಿ ಬೆಳೆದಿತ್ತು ನಂತರ ಟೀಕೆ ಮಾಡಿದವರು ಶರಣಬಸವರಿಗೆ ಶರಣು ಎಂದರು, ಆಗ ಶರಣಬಸವರು ತಾವು ಬೆಳೆದ ಜೋಳವನ್ನೆಲ್ಲ ಊರ ಜನರಿಗೆ ಹಂಚಿ ಪರಮದಾಸೋಹಿ ಎನಿಸಿಕೊಂಡರು…
ಇಂದು ಮಹಾದಾಸೋಹಿ ಶರಣಬಸವರ ೨೦೦ನೇ ಪುಣ್ಯದಿನ ಜಾತ್ರಮಹೋತ್ಸವದ ಭಕ್ತಿಪ್ರೇಮದ ಶರಣು ಶರಣಾರ್ಥಿಗಳು..🙏🏻💕🙏🏻
✍🏾-ಲೋಕೇಶ್ ಎನ್ ಮಾನ್ವಿ.
Comments
Post a Comment