Posts

ಇತ್ತೀಚಿನ ಲೇಖನಗಳು..

'ಬಸವ ಸಂಸ್ಕೃತಿ' ಮಾನವೀಯತೆಯ ಮೇರು ಸಂಸ್ಕೃತಿ. ಲೇಖನ: #ಲೋಕೇಶ್_ಎನ್_ಮಾನವಿ.

Image
 •ಮಾನವೀಯತೆಯ ಮೇರು ಸಂಸ್ಕೃತಿ• •ಬಸವ ಸಂಸ್ಕೃತಿ• ದುಡಿಮೆಯನ್ನು ದೈವತ್ವಕ್ಕೇರಿಸಿ ಕಾಯಕದಲ್ಲೇ ಕೈಲಾಸ ತೋರಿದ ಸಂಸ್ಕೃತಿ. •ಬಸವ ಸಂಸ್ಕೃತಿ• ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಎಂಬ ಸಮಾನತೆಯ ಸಂಸ್ಕೃತಿ, •ಬಸವ ಸಂಸ್ಕೃತಿ• ಅನ್ನ_ಅರಿವು_ಅಕ್ಷರ ದಾಸೋಹದ ಸಂಸ್ಕೃತಿ  •ಬಸವ ಸಂಸ್ಕೃತಿ• ಎನ್ನಗಿಂತ ಕಿರಿಯರಿಲ್ಲ, ಎಂಬ ಸರಳ ಸುಂದರ ಸಂಸ್ಕೃತಿ. •ಬಸವ ಸಂಸ್ಕೃತಿ• ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್ ಶಿವನೆಂದ ಸಂಸ್ಕೃತಿ.  •ಬಸವ ಸಂಸ್ಕೃತಿ• ನುಡಿದಂತೆ, ನಡೆದು ತೋರಿದ ಸಂಸ್ಕೃತಿ. •ಬಸವ ಸಂಸ್ಕೃತಿ• ವಿಭೂತಿಯ ಧರಿಸಿ ಹಣೆಯ ಬರಹವನ್ನು ನೆಚ್ಚದೇ ಮುನ್ನುಗ್ಗಿ ಸಾಧಿಸುವ ಸಂಸ್ಕೃತಿ, •ಬಸವ ಸಂಸ್ಕೃತಿ• ಅಂಗೈಯಲ್ಲಿ ಲಿಂಗವ ಹಿಡಿದು,  ಹಸ್ತ ರೇಖೆಯ ನೆಚ್ಚದೇ ತೋಳ್ ಬಲದಿಂದ ದುಡಿದು ತಿನ್ನುವ ಸ್ವಾಭಿಮಾನದ ಸಂಸ್ಕೃತಿ. •ಬಸವ ಸಂಸ್ಕೃತಿ• ಸ್ವರ್ಗ ನರಕಗಳ ಹಂಗಿಲ್ಲದೇ ಆಚಾರವೇ ಸ್ವರ್ಗ, ಅನಾಚಾರವೇ ನರಕವೆಂದ  ಸಂಸ್ಕೃತಿ. •ಬಸವ ಸಂಸ್ಕೃತಿ• ಕಳ್ಳನನ್ನೂ ಕಾಯಕ ಜೀವಿಯಾಗಿಸಿ ಶರಣತ್ವಕ್ಕೇರಿಸಿದ ಸಂಸ್ಕೃತಿ. •ಬಸವ ಸಂಸ್ಕೃತಿ• ಹನ್ನೆರಡು ಸಾವಿರ ಪನ್ನಾಂಗಿನಿಯರನ್ನು ಪುಣ್ಯಾಂಗಿನಿಯರನ್ನಾಗಿಸಿದ ದಿವ್ಯ ಸಂಸ್ಕೃತಿ.  •ಬಸವ ಸಂಸ್ಕೃತಿ• ಎಲ್ಲರಿಗೂ ಕನ್ನಡ ಕಲಿಸಿ, ಕನ್ನಡ ಭಾಷೆಯನ್ನು, ದೇವ ಭಾಷೆಯಾಗಿಸಿದ ಮೇರು ಸಂಸ್ಕೃತಿ. •ಬಸವ ಸಂಸ್ಕೃತಿ• ನುಡಿಯು ಮುತ್ತಿನ ಹಾರ, ನಡೆದು ಸದ್ಗುಣ ಸ...

ಬುದ್ದಿ ಮಾತಿಗೆ ಮುನಿಯಬೇಡ ಎನ್ನುತ್ತಾರೆ ವಿಶ್ವಗುರು ಅಪ್ಪ ಬಸವಣ್ಣನವರು.👌 ವಿಶ್ಲೇಷಣೆ: #ಲೋಕೇಶ್_ಎನ್_ಮಾನವಿ.

Image
ಶ್ರೀಗುರುಬಸವಲಿಂಗಾಯ ನಮ:   ಬುದ್ದಿ ಮಾತಿಗೆ ಮುನಿಯಬೇಡ ಎನ್ನುತ್ತಾರೆ ವಿಶ್ವಗುರು ಅಪ್ಪ ಬಸವಣ್ಣನವರು.👌   ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ. ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.  ಲಿಂಗಭಕ್ತನು ಲಿಂಗಪಥವ ಹೇಳಿದಡೆ ಮಚ್ಚರಿಸುವರ ಮೆಚ್ಚ ಕೂಡಲಸಂಗಮದೇವ . •ವಿಶ್ವಗುರು ಬಸವಣ್ಣನವರು• ಭಾವಾರ್ಥ - •ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ• ಹೌದು ಸ್ನೇಹಿತರೇ ಇಲ್ಲಿ ಒಬ್ಬ ತಂದೆ ಆದವನಿಗೆ  ಜೀವನದ ಅನುಭವ, ಜವಾಬ್ದಾರಿ, ಕಷ್ಟ ನಷ್ಟಗಳು ಕಲಿಸಿದ ಬದುಕಿನ ಪಾಠವನ್ನು ತನ್ನ ಮಕ್ಕಳಿಗೆ ಹೇಳುತ್ತಾನೆ, ತಿಳಿಸುತ್ತಾನೆ, ಎಚ್ಚರಿಸುತ್ತಾನೆ, ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗೆ ಬೈದು ಕೋಪದಿಂದ ಗದುರಿಸಿ ಬುದ್ಧಿ ಹೇಳಬಹುದು, ಆದರೆ ಆತನ ಕಾಳಜಿಯ ಹಿಂದಿರುವ ಕೋಪ ಸಾತ್ವಿಕವಾದದ್ದೇ ವಿನಃ ತಾಮಸವಾದದ್ದಲ್ಲ.  ಅಂದರೆ, ಆತನ ಮುನಿಸು ಕೋಪ ಸಿಟ್ಟೆಲ್ಲವು ಮಕ್ಕಳ ಮೇಲಲ್ಲ, ಬದಲಾಗಿ ಮಕ್ಕಳು ಮಾಡಿದ ತಪ್ಪಿನ ಮೇಲೆ ಆತನ ಕೋಪ, ಮತ್ತೊಮ್ಮೆ ತನ್ನ ಮಕ್ಕಳು ತಪ್ಪು ಮಾಡದಿರಲಿ ಎಂಬ ಕಾಳಜಿಯೇ ಆ ಸಾತ್ವಿಕ ಕೋಪದ ಹಿಂದಿರುವ ಸದುದ್ದೇಶವಾಗಿದೆ. ಅದರಂತೆಯೇ •ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ•  •ಲಿಂಗಭಕ್ತನು...

ವಿಶ್ವಗುರು ಬಸವಣ್ಣನವರ ವಚನದಲ್ಲಿ ಆರ್ಥಿಕತೆ ವಿಶ್ಲೇಷಣೆ - #ಲೋಕೇಶ್_ಎನ್_ಮಾನ್ವಿ.

Image
ಶ್ರಿಗುರುಬಸವಲಿಂಗಾಯ ನಮಃ  •ವಿಶ್ವಗುರು ಬಸವಣ್ಣನವರ ವಚನದಲ್ಲಿ ಆರ್ಥಿಕತೆ.• ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು. ಕಳ್ಳನಾಣ್ಯ ಸಲುಗೆಗೆ ಸಲ್ಲದು, ಕಳ್ಳನಾಣ್ಯವ ಸಲ್ಲಲೀಯರಯ್ಯಾ. ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ ಕೂಡಲಸಂಗಮದೇವಾ. ಭಾವಾರ್ಥ- ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು. ಬಸವಾದಿ ಶರಣರದ್ದು   ಕಾಯಕ ಮತ್ತು ದಾಸೋಹ ಪ್ರಧಾನವಾದ ಜೀವನ, ಉತ್ಪಾದನೆ ಮತ್ತು ವಿತರಣೆ  ದೇಶದ ಅರ್ಥಿಕತೆಯ ಬಹುದೊಡ್ಡ ಮೂಲ, ಇಲ್ಲಿ ದುಡಿತ ಕೇವಲ ತಮಗಾಗಿ ಮಾತ್ರವಲ್ಲ, ಲೋಕ ಹಿತಕ್ಕಾಗಿ, ತನ್ನೊಂದಿಗೆ ಸಮಾಜದ ಏಳಿಗೆಗಾಗಿ ಶ್ರಮಿಸುವುದೆ ಕಾಯಕ ತತ್ವ, ಭಂಡವ (ತ್ರಿಜೋರಿ)  ತುಂಬಿದ ಬಳಿಕ ಅದಕ್ಕೆ ಸುಂಕ (ತೆರಿಗೆ) ಕಟ್ಟಲೇ ಬೇಕು‌. ಇಲ್ಲದಿದ್ದರೆ. ಅದು ಕಪ್ಪುಹಣವಾಗುತ್ತದೆ ಅದು ಹೋಗಲು ಬಾರದು ಚಲಾವಣೆಗೆ ನಿಷಿದ್ಧವೆನ್ನುತ್ತಾರೆ ಬಸವಣ್ಣನವರು, ಕಳ್ಳನಾಣ್ಯ ಸಲುಗೆಗೆ ಸಲ್ಲದು, ಕಳ್ಳನಾಣ್ಯವ ಸಲ್ಲಲೀಯರಯ್ಯಾ. ತನಗಾಗಿ ತನ್ನ ಹೆಂಡಿರು ಮಕ್ಕಳಿಗಾಗಿ ಎಂದು ತೆರಿಗೆ ಕಟ್ಟದೆ, ಆದಾಯವನ್ನು  ನಾಳೆಗೆಂದು ಕೂಡಿಟ್ಟು, ನಾಳಿನ ದಿನ ದುಡಿಯದೆಯೆ ಕುಳಿದು ತಿನ್ನುವುದು, ದೇಶದ ಅರ್ಥಿಕ ವ್ಯವಸ್ಥೆಗೆ ಅದು ಮಾರಕವಾಗುತ್ತದೆ, ಅಂದರೆ ಹಣ ತ್ರಿಜೋರಿ (ಲಾಕರ್) ಸೇರದೇ ಸಮಾಜದಲ್ಲಿ ಚಲಾವಣೆಯಲ್ಲಿರಬೇಕು. ನಿತ್ಯ ನಿರಂತರ ಕಾಯಕ, ದೇಶದ ಅಭಿವೃದ್ಧಿಗೆ ಪೂರಕ, ಒಂದು ದಿನವೂ ಒಬ್ಬ ವ್ಯಕ್ತಿಯೂ ಕಾಯಕ ಮಾಡದೇ ಉಣ...

‘ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ’ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ವಚನದ ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ ಇವರಿಂದ.

Image
‘ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ’ ಬಟ್ಟಬಯಲೆಲ್ಲ ಗಟ್ಟಿಗೊಂಡಡೆ ಸ್ವರ್ಗ ಮತ್ರ್ಯ ಪಾತಾಳಕ್ಕೆ ಠಾವೆಲ್ಲಿಯದೊ ? ಮೇಘನಿರ್ಮಳಜಲವೆಲ್ಲ ಮುತ್ತಾದಡೆ ಸಪ್ತಸಾಗರಂಗಳಿಗೆ ಉದಕವೆಲ್ಲಿಯದೊ ? ಕಷ್ಟಜೀವಿ ಮನುಜರೆಲ್ಲ ನೆಟ್ಟನೆ ಶಿವಜ್ಞಾನಿಗಳಾದಡೆ ಮುಂದೆ ಭವದ ಬಳ್ಳಿ ಬೆಳೆಯಲಿನ್ನೆಲ್ಲಿಯದೊ ,?   ಇದು ಕಾರಣ ಕೂಡಲಚೆನ್ನಸಂಗಯ್ಯಾ ಲಕ್ಷಕ್ಕೊಬ್ಬ ಭಕ್ತ  ಕೋಟಿಗೊಬ್ಬ ಶರಣ,.                                   ಭಾವಾರ್ಥ- ಬಟ್ಟಬಯಲೆಲ್ಲ ಗಟ್ಟಿಗೊಂಡಡೆ ಸ್ವರ್ಗ ಮತ್ರ್ಯ ಪಾತಾಳಕ್ಕೆ ಠಾವೆಲ್ಲಿಯದೊ ? ಎಡೆಯಿಲ್ಲದ ಕಡೆಯಿಲ್ಲದ, ಆರಂಭವೂ ಇಲ್ಲದ, ಅಂತ್ಯವೂ ಇಲ್ಲದ, ಕಾಲಕಲ್ಪನೆಗಳಿಗೆ ಗೋಚರಿಸದ ಖಗೋಳ ವಿಜ್ಞಾನಕ್ಕೂ ನಿಲುಕದ ವಿಸ್ಮಯ ಕೌತುಕ, ಸೂರ್ಯ_ಚಂದ್ರ_ಭೂಮಿಗಳಂಥಹ ಸಹಸ್ರ ಸಹಸ್ರ ಗ್ರಹಗಳನ್ನೊಳಗೊಂಡಿರುವ ಬ್ರಹ್ಮಾಂಡ (Galaxy), ಅಂತಪ್ಪ  ಸಹಸ್ರ ಸಹಸ್ರ (Galaxy) ಬ್ರಹ್ಮಾಂಡಗಳನ್ನೇ ತನ್ನೊಳು ಕಿಂಚಿತ್ತಾಗಿ ಇಟ್ಟುಕೊಂಡದ್ದೇ ಶರಣರು ಹೇಳುವ   ಬಯಲು_ಬಟ್ಟಬಯಲು, ಅಂತಹ ಬಟ್ಟಬಯಲು ಭೂಮಿ,ನೀರು,ಅಗ್ನಿ,ವಾಯು,ಆಕಾಶವನ್ನೊಳಗೊಂಡ ಬಟ್ಟಬಯಲು ಪ್ರಕೃತಿಯೇ ಹೆಪ್ಪಾಗಿ ಗಟ್ಟಿಕೊಂಡರೆ, ಉಸಿರಾಟಕ್ಕೆ ಆಮ್ಲಜನಕವಿಲ್ಲ, ಕುಡಿಯಲು ನೀರಿಲ್ಲ, ಚಲನೆಯಿಲ್ಲದ ಆಕಾಶ, ಹೆಪ್ಪುಗಟ್ಟಿದ ಅಂತರ್ಜಲದಿಂದ   ಜಲಚರ_ಕ್ರಿಮಿಕೀಟ_ಪಶುಪಕ...

ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ? ಹಡಪದ ಅಪ್ಪಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ? ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ ? ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ ? ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ, ಲೋಕದ ಮಾನವರಿಗುಂಟೆ? ನಿಮ್ಮ ನೆಲೆಯನರಿವುದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ. ✍🏾-; ನಿಜಸುಖಿ ಹಡಪದ ಅಪ್ಪಣ್ಣನವರು. ಭಾವಾರ್ಥ - ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ? ಈ ಭೂಮಿಯ ಮೇಲಿಹ ಕೆರೆ, ಹೊಳೆ, ನದಿ ದಾಂಟಲು ಅರಗೋಲುಗಳ ಅವಶ್ಯಕತೆ ಇದೆಯೇ ಹೊರತು, ಆಕಾಶದ ಮೋಡದಲ್ಲಿಹ ಮೇಘಜಲವನ್ನು ದಾಂಟಲು ಯಾವ ಅರಗೋಲಿನ ಅವಶ್ಯಕತೆಯ ಹಂಗಿಲ್ಲ. ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ ? ಮರೆವು ಅಳಿದು, ಅರಿವಿನ ಕಣ್ತೆರೆದು, ಪಂಚೇಂದ್ರಿಯಗಳೆಲ್ಲ ಜ್ಞಾನೇಂದ್ರಿಯಗಳಾಗಿ ತನ್ನ ಮನಸ್ಸನ್ನು  ನಿರಾಕಾರ ಸೃಷ್ಟಿಕರ್ತನ ಬಯಲಲ್ಲಿರಿಸಿದ  ಶಿವಶರಣರಿಗೆ ಯಾವುದೇ (ಮನುಜ ಕಲ್ಪಿತ) ಸಾಕಾರದ ಹಂಗಿಲ್ಲ ಅವಶ್ಯಕತೆಯೂ ಇಲ್ಲ. ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ ? ಬೇಕು ಬೇಡಗಳಿಂದಾಚೆ, ಆಸೆ ಆಮಿಷಗಳಿಂದಾಚೆ, ನಾನು ನನ್ನದೆಂಬ ಭ್ರಮೆಯಿಂದಾಚೆ,  ನನ್ನದು ತನ್ನದೆಂಬ ಮೋಹದಿಂದಾಚೆಗೆ  ಇರುವ ಶಿವಶರಣರಿಗೆ ಯಾವುದೇ ಈ ಲೋಕದ ಹಂಗಿಲ್ಲ.. ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ, ಲೋಕದ ಮಾನವರಿಗುಂಟೆ? ನಿಮ್ಮ ನೆಲೆಯನರಿವುದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ. ಇಂತೀ ತನ್ನ ತಾನರಿದು ನಿಮ್ಮ...

ಸಿದ್ಧಿಪುರುಷ ಸದ್ಗುರು ಯಲ್ಲಾಲಿಂಗಪ್ರಭು ಮಹಾರಾಜರು,

Image
ಪರಮತ್ಯಾಗಿ ಘನವೈರಾಗಿ,  ಅಲ್ಲಮನಂತೆ ಬದುಕಿದ ಯೋಗಿ , ಸಿದ್ಧಿಪುರುಷ ಸದ್ಗುರು ಯಲ್ಲಾಲಿಂಗಪ್ರಭು ಮಹಾರಾಜರು , ಮುಗಳಖೋಡ   ಗ್ರಾಮದ ಸ್ಮಶಾನ ಭೂಮಿಯನ್ನೇ ಮುಕ್ತಿ ಮಂದಿರವಾಗಿದ ಯೋಗಿ , ಇಂದಿಗೆ 138 ವರ್ಷಗಳ ಹಿಂದೆ ಶರಣರ ನಾಡು ವಿಜಯಪುರದ ಇಂಡಿ ತಾಲೂಕಿನ ಮಿರಗಿ ಎಂಬ ಪುಟ್ಟ ಗ್ರಾಮದಲ್ಲಿ ಶಿವಪ್ಪ ಕಾಶಿಬಾಯಿ ಎಂಬ ಪುಣ್ಯ ದಂಪತಿಗಳ ಮಗನಾಗಿ ಜನಿಸಿ ಬಂದ ಮಗುವೇ ಯಲ್ಲಪ್ಪ   ಎಂಟು ವರ್ಷ ಪ್ರಾಯದಲ್ಲೇ ಶಿವ ಧ್ಯಾನ ನಿರತನಾಗಿ   ಕುರಿ ಕಾಯುವ ಕಾಯಕ ಮಾಡುತ್ತಿದ್ದರು , ಇಪ್ಪತ್ತು ವರ್ಷ ತುಂಬುವಷ್ಟರಲ್ಲಿ ಗರಡಿ ಮನೆಯಲ್ಲಿ ಪಳಗಿ ಕುಸ್ತಿ ಪಟುವಾಗಿದ್ದ ಯಲ್ಲಪ್ಪ , ಮನೆಯವರ ಬಲವಂತಕ್ಕೆ ಒಲ್ಲದ ಮನಸ್ಸಿನಿಂದಲೇ ಹೊನ್ನಮ್ಮ ಎಂಬವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು , ಸಂಸಾರವೂ ಅನ್ಯೂನ್ಯವಾಗಿ ಸಾಗಿತ್ತು ಮಡದಿ ಗರ್ಭವತಿಯಾದಳು , ನವಮಾಸಗಳು ತುಂಬುವಷ್ಟರಲ್ಲೇ ತಾಯಗರ್ಭದಲ್ಲೇ ಶಿಶು ಸತ್ತಿತು ಅದರೊಂದಿಗೆ ಯಲ್ಲಪ್ಪನ ಮಡದಿ ಹೊನ್ನಮ್ಮಳು ಕೂಡ ಕೊನೆಉಸಿರೆಳೆದು ಬಾರದ ಲೋಕಕ್ಕೆ ಹೊರಟಳು , ಸುತ್ತಮುತ್ತಲ ಗ್ರಾಮಗಳಲ್ಲಿ   ಕುಸ್ತಿ ಪಂದ್ಯಾವಳಿಗಳನ್ನು ಗೆದ್ದು ಜಗಜಟ್ಟಿಯಾಗಿ ಖುಷಿಯಿಂದ ಬಂದ ಯಲ್ಲಪ್ಪ , ಗರ್ಭಿಣಿಯಾದ ತನ್ನ ಮಡದಿ ಹಾಗೂ ಮಗುವನ್ನು ಕಳೆದು ಕೊಂಡ ಯಲ್ಲಪ್ಪ , ಅದೇ ಚಿತೆಯಲ್ಲಿ ಸಂಸಾರ ...