‘ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ’ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ವಚನದ ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ ಇವರಿಂದ.

‘ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ’



ಬಟ್ಟಬಯಲೆಲ್ಲ ಗಟ್ಟಿಗೊಂಡಡೆ ಸ್ವರ್ಗ ಮತ್ರ್ಯ ಪಾತಾಳಕ್ಕೆ ಠಾವೆಲ್ಲಿಯದೊ ? ಮೇಘನಿರ್ಮಳಜಲವೆಲ್ಲ ಮುತ್ತಾದಡೆ ಸಪ್ತಸಾಗರಂಗಳಿಗೆ ಉದಕವೆಲ್ಲಿಯದೊ ? ಕಷ್ಟಜೀವಿ ಮನುಜರೆಲ್ಲ ನೆಟ್ಟನೆ ಶಿವಜ್ಞಾನಿಗಳಾದಡೆ ಮುಂದೆ ಭವದ ಬಳ್ಳಿ ಬೆಳೆಯಲಿನ್ನೆಲ್ಲಿಯದೊ ,?  ಇದು ಕಾರಣ ಕೂಡಲಚೆನ್ನಸಂಗಯ್ಯಾ ಲಕ್ಷಕ್ಕೊಬ್ಬ ಭಕ್ತ ಕೋಟಿಗೊಬ್ಬ ಶರಣ,.


                                 ಭಾವಾರ್ಥ-

ಬಟ್ಟಬಯಲೆಲ್ಲ ಗಟ್ಟಿಗೊಂಡಡೆ ಸ್ವರ್ಗ ಮತ್ರ್ಯ ಪಾತಾಳಕ್ಕೆ ಠಾವೆಲ್ಲಿಯದೊ ?

ಎಡೆಯಿಲ್ಲದ ಕಡೆಯಿಲ್ಲದ, ಆರಂಭವೂ ಇಲ್ಲದ, ಅಂತ್ಯವೂ ಇಲ್ಲದ, ಕಾಲಕಲ್ಪನೆಗಳಿಗೆ ಗೋಚರಿಸದ ಖಗೋಳ ವಿಜ್ಞಾನಕ್ಕೂ ನಿಲುಕದ ವಿಸ್ಮಯ ಕೌತುಕ, ಸೂರ್ಯ_ಚಂದ್ರ_ಭೂಮಿಗಳಂಥಹ ಸಹಸ್ರ ಸಹಸ್ರ ಗ್ರಹಗಳನ್ನೊಳಗೊಂಡಿರುವ ಬ್ರಹ್ಮಾಂಡ (Galaxy), ಅಂತಪ್ಪ  ಸಹಸ್ರ ಸಹಸ್ರ (Galaxy) ಬ್ರಹ್ಮಾಂಡಗಳನ್ನೇ ತನ್ನೊಳು ಕಿಂಚಿತ್ತಾಗಿ ಇಟ್ಟುಕೊಂಡದ್ದೇ ಶರಣರು ಹೇಳುವ   ಬಯಲು_ಬಟ್ಟಬಯಲು,
ಅಂತಹ ಬಟ್ಟಬಯಲು ಭೂಮಿ,ನೀರು,ಅಗ್ನಿ,ವಾಯು,ಆಕಾಶವನ್ನೊಳಗೊಂಡ ಬಟ್ಟಬಯಲು ಪ್ರಕೃತಿಯೇ ಹೆಪ್ಪಾಗಿ ಗಟ್ಟಿಕೊಂಡರೆ, ಉಸಿರಾಟಕ್ಕೆ ಆಮ್ಲಜನಕವಿಲ್ಲ, ಕುಡಿಯಲು ನೀರಿಲ್ಲ, ಚಲನೆಯಿಲ್ಲದ ಆಕಾಶ, ಹೆಪ್ಪುಗಟ್ಟಿದ ಅಂತರ್ಜಲದಿಂದ  
ಜಲಚರ_ಕ್ರಿಮಿಕೀಟ_ಪಶುಪಕ್ಷಿ_ಪ್ರಾಣಿ ಸಂಕುಲವೇ ನಾಶವಾಗಿ ಹೋಗುವಂತೆ,.


ಮೇಘನಿರ್ಮಳಜಲವೆಲ್ಲ ಮುತ್ತಾದಡೆ ಸಪ್ತಸಾಗರಂಗಳಿಗೆ ಉದಕವೆಲ್ಲಿಯದೊ ?

ಆಕಾಶದಲ್ಲಿಹ ನಿರ್ಮಲವಾದ ಸಿಹಿ ನೀರಹನಿಗಳೆಲ್ಲವೂ ಮಳೆಯ ನೀರಾಗಿ ಸುರಿಯದೇ, ಮುತ್ತಾಗಿ ಸುರಿದಡೆ,?ಮಹಾಸಾಗರಗಳೆಲ್ಲ ನೀರಿಲ್ಲದೇ ಬರಿದಾಗಿ ಬಿಡುವಂತೆ,.


ಕಷ್ಟಜೀವಿ ಮನುಜರೆಲ್ಲ ನೆಟ್ಟನೆ ಶಿವಜ್ಞಾನಿಗಳಾದಡೆ ಮುಂದೆ ಭವದ ಬಳ್ಳಿ ಬೆಳೆಯಲಿನ್ನೆಲ್ಲಿಯದೊ  ,?

ಹುಟ್ಟಿನಿಂದ ನಾನು ನನ್ನದೆನ್ನುವ ಮಾನವ, ರೂಪ_ರಸ_ಗಂಧ_ಶಬ್ಧ_ಸ್ಫರ್ಶಗಳಿಂದ, ಕಾಮ,ಕ್ರೋಧ, ಮೋಹ, ಮಾಯೆ, ಮದ, ಮತ್ಸರಗಳು ಹೆಚ್ಚಿ  ಆಸೆ, ಆಮಿಷ,ರೋಷ,ವಿಷಯಾದಿಗಳಿಗಾಗಿ ಬಡಿದಾಡುವ ಕಷ್ಟಜೀವಿ ಮನುಜರೆಲ್ಲರೂ, ನೆಟ್ಟನೆ ಶಿವಜ್ಞಾನಿಗಳಾಗಲು ಸಾಧ್ಯವೇ,? ಆಗಸದಿಂದ ಸುರಿವ ಮಳೆ ಹನಿಗಳೆಲ್ಲ ಮುತ್ತಾಗಲು ಹೇಗೆ ಸಾಧ್ಯವಿಲ್ಲವೋ ಹಾಗೆ ಹುಟ್ಟು ಸಾವುಗಳ ಕಾಲಚಕ್ರದಲ್ಲಿ ಜನಿಸಿ ಬರುವ ಮನುಜರೆಲ್ಲರೂ ಶಿವಜ್ಞಾನಿಗಳಾಗಲು ಸಾಧ್ಯವಿಲ್ಲ,


ಇದು ಕಾರಣ ಕೂಡಲಚೆನ್ನಸಂಗದೇವ ಲಕ್ಷಕ್ಕೊಬ್ಬ ಭಕ್ತ ಕೋಟಿಗೊಬ್ಬ ಶರಣ,.

ಆಗಸದಲ್ಲಿ ಸಾವಿರಾರು ನಕ್ಷತ್ರಗಳಿದ್ದರೂ ಭುವಿಯನ್ನು ಬೆಳಗುವ ಸೂರ್ಯನೊಬ್ಬನೆ ಇರುವಂತೆ,  ಕಡಲಾಳದಲ್ಲಿ ಸಿಗುವ ರತ್ನದಂತೆ, ಈ ಭುವಿಯಲ್ಲಿ ಜನಿಸುವ ಸಹಸ್ರಾರು ಜನರಲ್ಲಿ ಲಕ್ಷಕ್ಕೆ ಒಬ್ಬರಂತೆ ಭಕ್ತರು, ಕೋಟಿಗೆ ಒಬ್ಬರು ಶರಣರು ಹುಟ್ಟಿತ್ತಾರೆ, ಮಿಕ್ಕವರೆಲ್ಲರೂ ಡಾಂಭಿಕತೆಯ ಭಕ್ತರು ಜೊಳ್ಳುಜೊಟ್ಟಿಯಂತೆ ಎನ್ನುತ್ತಾರೆ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು.👏🏻👏🏻👏🏻


                             ವಿಶ್ಲೇಷಣೆ-;

                #ಲೋಕೇಶ್_ಎನ್_ಮಾನ್ವಿ.

                            9972536176

Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.