'ಬಸವ ಸಂಸ್ಕೃತಿ' ಮಾನವೀಯತೆಯ ಮೇರು ಸಂಸ್ಕೃತಿ. ಲೇಖನ: #ಲೋಕೇಶ್_ಎನ್_ಮಾನವಿ.
•ಮಾನವೀಯತೆಯ ಮೇರು ಸಂಸ್ಕೃತಿ•
•ಬಸವ ಸಂಸ್ಕೃತಿ•
ದುಡಿಮೆಯನ್ನು ದೈವತ್ವಕ್ಕೇರಿಸಿ
ಕಾಯಕದಲ್ಲೇ ಕೈಲಾಸ ತೋರಿದ ಸಂಸ್ಕೃತಿ.
•ಬಸವ ಸಂಸ್ಕೃತಿ•
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಎಂಬ ಸಮಾನತೆಯ ಸಂಸ್ಕೃತಿ,
•ಬಸವ ಸಂಸ್ಕೃತಿ•
ಅನ್ನ_ಅರಿವು_ಅಕ್ಷರ ದಾಸೋಹದ ಸಂಸ್ಕೃತಿ
•ಬಸವ ಸಂಸ್ಕೃತಿ•
ಎನ್ನಗಿಂತ ಕಿರಿಯರಿಲ್ಲ, ಎಂಬ ಸರಳ ಸುಂದರ ಸಂಸ್ಕೃತಿ.
•ಬಸವ ಸಂಸ್ಕೃತಿ•
ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ,
ಹೆಣ್ಣು ಸಾಕ್ಷಾತ್ ಶಿವನೆಂದ ಸಂಸ್ಕೃತಿ.
•ಬಸವ ಸಂಸ್ಕೃತಿ•
ನುಡಿದಂತೆ, ನಡೆದು ತೋರಿದ ಸಂಸ್ಕೃತಿ.
•ಬಸವ ಸಂಸ್ಕೃತಿ•
ವಿಭೂತಿಯ ಧರಿಸಿ ಹಣೆಯ ಬರಹವನ್ನು ನೆಚ್ಚದೇ ಮುನ್ನುಗ್ಗಿ ಸಾಧಿಸುವ ಸಂಸ್ಕೃತಿ,
•ಬಸವ ಸಂಸ್ಕೃತಿ•
ಅಂಗೈಯಲ್ಲಿ ಲಿಂಗವ ಹಿಡಿದು,
ಹಸ್ತ ರೇಖೆಯ ನೆಚ್ಚದೇ ತೋಳ್ ಬಲದಿಂದ ದುಡಿದು ತಿನ್ನುವ ಸ್ವಾಭಿಮಾನದ ಸಂಸ್ಕೃತಿ.
•ಬಸವ ಸಂಸ್ಕೃತಿ•
ಸ್ವರ್ಗ ನರಕಗಳ ಹಂಗಿಲ್ಲದೇ
ಆಚಾರವೇ ಸ್ವರ್ಗ, ಅನಾಚಾರವೇ ನರಕವೆಂದ ಸಂಸ್ಕೃತಿ.
•ಬಸವ ಸಂಸ್ಕೃತಿ•
ಕಳ್ಳನನ್ನೂ ಕಾಯಕ ಜೀವಿಯಾಗಿಸಿ ಶರಣತ್ವಕ್ಕೇರಿಸಿದ ಸಂಸ್ಕೃತಿ.
•ಬಸವ ಸಂಸ್ಕೃತಿ•
ಹನ್ನೆರಡು ಸಾವಿರ ಪನ್ನಾಂಗಿನಿಯರನ್ನು ಪುಣ್ಯಾಂಗಿನಿಯರನ್ನಾಗಿಸಿದ ದಿವ್ಯ ಸಂಸ್ಕೃತಿ.
•ಬಸವ ಸಂಸ್ಕೃತಿ•
ಎಲ್ಲರಿಗೂ ಕನ್ನಡ ಕಲಿಸಿ,
ಕನ್ನಡ ಭಾಷೆಯನ್ನು, ದೇವ ಭಾಷೆಯಾಗಿಸಿದ ಮೇರು ಸಂಸ್ಕೃತಿ.
•ಬಸವ ಸಂಸ್ಕೃತಿ•
ನುಡಿಯು ಮುತ್ತಿನ ಹಾರ, ನಡೆದು ಸದ್ಗುಣ ಸಾರವೆಂದು ತೋರಿದ ಸಂಸ್ಕೃತಿ.
•ಬಸವ ಸಂಸ್ಕೃತಿ•
ದೇಹವನ್ನು ದುರ್ವ್ಯಸನಗಳಿಂದ ಮುಕ್ತಗೊಳಿಸಿ ದೇಹ ದೇವಾಲಯವಾಗಿಸುವ ಪರಿಶುದ್ಧ ಸಂಸ್ಕೃತಿ.
•ಬಸವ ಸಂಸ್ಕೃತಿ•
ದಯೆ_ಕರಣೆ_ಪ್ರೀತಿಯೇ ಧರ್ಮವೆಂದ ಸಾರಿದ ಸಂಸ್ಕೃತಿ.
•ಬಸವ ಸಂಸ್ಕೃತಿ•
ಅಜ್ಞಾನದ ಕತ್ತಲೆ ಕಳೆಯಲೆಂದು
ವಚನ ದೀವಿಗೆಯ ಮುಡಿಸಿ ಜಗವ ಬೆಳಗಿದ ಸಂಸ್ಕೃತಿ.
•ಬಸವ ಸಂಸ್ಕೃತಿ•
ದಣಿದವರು ದಾಹ ನೀಗಿಸುವ ಸಂಸ್ಕೃತಿ,
ಬಿದ್ದವರ ಮೇಲೆತ್ತುವ ಸಂಸ್ಕೃತಿ,
ಹಸಿದವರಿಗೆ ಅನ್ನವನಿಕ್ಕುವ ಸಂಸ್ಕೃತಿ,
•ಬಸವ ಸಂಸ್ಕೃತಿ•
ಎಲ್ಲರನ್ನೂ ನಮ್ಮವರೆಂದು ಒಪ್ಪಿ ಅಪ್ಪಿಕೊಳ್ಳುವ ಸಂಸ್ಕೃತಿ.
ಅರಿವು_ಆಚಾರ_ಅನುಭವ_ಅನುಭಾವದ ಸಂಸ್ಕೃತಿ.
•ಬಸವ ಸಂಸ್ಕೃತಿ•
ವಿಶ್ವಕ್ಕೆ ಮೊಟ್ಟಮೊದಲ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟ ಮಹಾನ್ ಸಂಸ್ಕೃತಿ.
•ಬಸವ ಸಂಸ್ಕೃತಿ•
ಜಾತಿ_ಮತ_ಪಂಥ_ದೇಶ, ಗಡಿ, ಭಾಷೆಯನ್ನೂ ಮೀರಿ ತೊಳಗಿ ಬೆಳಗುವ ಮಹಾಮಾನವೀಯತೆಯ ಮೇರು ಸಂಸ್ಕೃತಿಯೇ ಬಸವ ಸಂಸ್ಕೃತಿ..👏🏻👏🏻👏🏻
✍🏻ರಚನೆ-:#ಲೋಕೇಶ್_ಎನ್_ಮಾನ್ವಿ.
9972536176
Comments
Post a Comment