ವಿಶ್ವಗುರು ಬಸವಣ್ಣನವರ ವಚನದಲ್ಲಿ ಆರ್ಥಿಕತೆ ವಿಶ್ಲೇಷಣೆ - #ಲೋಕೇಶ್_ಎನ್_ಮಾನ್ವಿ.
ಶ್ರಿಗುರುಬಸವಲಿಂಗಾಯ ನಮಃ
•ವಿಶ್ವಗುರು ಬಸವಣ್ಣನವರ ವಚನದಲ್ಲಿ ಆರ್ಥಿಕತೆ.•
ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು.
ಕಳ್ಳನಾಣ್ಯ ಸಲುಗೆಗೆ ಸಲ್ಲದು, ಕಳ್ಳನಾಣ್ಯವ ಸಲ್ಲಲೀಯರಯ್ಯಾ.
ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ ಕೂಡಲಸಂಗಮದೇವಾ.
ಭಾವಾರ್ಥ-
ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು.
ಬಸವಾದಿ ಶರಣರದ್ದುಕಾಯಕ ಮತ್ತು ದಾಸೋಹ ಪ್ರಧಾನವಾದ ಜೀವನ,
ಉತ್ಪಾದನೆ ಮತ್ತು ವಿತರಣೆ ದೇಶದ ಅರ್ಥಿಕತೆಯ ಬಹುದೊಡ್ಡ ಮೂಲ, ಇಲ್ಲಿ ದುಡಿತ ಕೇವಲ ತಮಗಾಗಿ ಮಾತ್ರವಲ್ಲ, ಲೋಕ ಹಿತಕ್ಕಾಗಿ, ತನ್ನೊಂದಿಗೆ ಸಮಾಜದ ಏಳಿಗೆಗಾಗಿ ಶ್ರಮಿಸುವುದೆ ಕಾಯಕ ತತ್ವ, ಭಂಡವ (ತ್ರಿಜೋರಿ) ತುಂಬಿದ ಬಳಿಕ ಅದಕ್ಕೆ ಸುಂಕ (ತೆರಿಗೆ) ಕಟ್ಟಲೇ ಬೇಕು. ಇಲ್ಲದಿದ್ದರೆ. ಅದು ಕಪ್ಪುಹಣವಾಗುತ್ತದೆ ಅದು ಹೋಗಲು ಬಾರದು ಚಲಾವಣೆಗೆ ನಿಷಿದ್ಧವೆನ್ನುತ್ತಾರೆ ಬಸವಣ್ಣನವರು,
ಕಳ್ಳನಾಣ್ಯ ಸಲುಗೆಗೆ ಸಲ್ಲದು, ಕಳ್ಳನಾಣ್ಯವ ಸಲ್ಲಲೀಯರಯ್ಯಾ.
ತನಗಾಗಿ ತನ್ನ ಹೆಂಡಿರು ಮಕ್ಕಳಿಗಾಗಿ ಎಂದು ತೆರಿಗೆ ಕಟ್ಟದೆ, ಆದಾಯವನ್ನು ನಾಳೆಗೆಂದು ಕೂಡಿಟ್ಟು, ನಾಳಿನ ದಿನ ದುಡಿಯದೆಯೆ ಕುಳಿದು ತಿನ್ನುವುದು, ದೇಶದ ಅರ್ಥಿಕ ವ್ಯವಸ್ಥೆಗೆ ಅದು ಮಾರಕವಾಗುತ್ತದೆ, ಅಂದರೆ ಹಣ ತ್ರಿಜೋರಿ (ಲಾಕರ್) ಸೇರದೇ ಸಮಾಜದಲ್ಲಿ ಚಲಾವಣೆಯಲ್ಲಿರಬೇಕು.
ನಿತ್ಯ ನಿರಂತರ ಕಾಯಕ, ದೇಶದ ಅಭಿವೃದ್ಧಿಗೆ ಪೂರಕ, ಒಂದು ದಿನವೂ ಒಬ್ಬ ವ್ಯಕ್ತಿಯೂ ಕಾಯಕ ಮಾಡದೇ ಉಣಬಾರದು, ಕಾಯಕ ಮಾಡಿದ ನಂತರ ಇತರರಿಗೆ ಉಣಿಸಿ ತಾನು ಉಣುವುದು. ಇದು ದೇಶದ ಬಡತನ ನಿರ್ಮೂಲನೆಗೆ ಸಹಕಾರಿಯಾಗುತ್ತದೆ ಎನ್ನುವುದೇ ಬಸವಣ್ಣನವರ ದಾಸೋಹ ತತ್ವ.
ಈಗಿನ ಸರ್ಕಾರದ ITR ಆದಾಯ ಘೋಷಣೆ, ಮತ್ತು INCOME TAX ತೆರಿಗೆ ಯೋಜನೆಯೇ ಬಸವಣ್ಣನವರ ಅಂದಿನ ಕಾಯಕ-ದಾಸೋಹ ತತ್ವ.
ತಮ್ಮ ಕಾಯಕದಿಂದ ಬಂದ ಆದಾಯದ ಮೌಲ್ಯವನ್ನು ಸ್ವಯಂ ಘೋಷಿಸಿ ದಾಸೊಹದಲ್ಲಿ ವಿನಿಯೋಗಿಸುವುದು, ಅದನ್ನು ಬಿಟ್ಟು ಅಕ್ರಮ ಸಂಗ್ರಹಣೆ ಎಂಬುದು ನಿಷಿದ್ಧವಾಗಿತ್ತು, ಅದು ಕಪ್ಪುಹಣ ಕಳ್ಳನಾಣ್ಯ, ಅದನ್ನು ತೆರಿಗೆ ಕಟ್ಟದೆ ಬಳಸುವುದು ಅಕ್ಷಮ್ಯ, ಕಳ್ಳನಾಣ್ಯ ಸಲುಗೆಗೆ ಸಲ್ಲದು, ಕಳ್ಳನಾಣ್ಯವ ಸಲ್ಲಲೀಯರಯ್ಯಾ. ಕಳ್ಳನಾಣ್ಯವನ್ನು ಬಚ್ಚಿಟ್ಟುಕೊಂಡು ಬದುಕುವುದು, ಕಟ್ಟಬೇಕಾದ ತೆರಿಗೆಯನ್ನು ವಂಚಿಸುವುದು,
ಕಳ್ಳತನದಲ್ಲಿ ಬದುಕಿದಂತೆ. ಅದು ಅಪರಾದ, ಕಳ್ಳನಾಣ್ಯ ಎಂದೂ ನಿನಗೆ ಸಲ್ಲದು ಎನ್ನುತ್ತಾರೆ ಬಸವಣ್ಣನವರು.
ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ ಕೂಡಲಸಂಗಮದೇವಾ.
ನನ್ನಲ್ಲಿ ಇರುವುದು ಸಮತೆ ಪ್ರೇಮ ಭಕ್ತಿ ಜ್ಞಾನವೆಂಬ ಭಂಡಾರ,
ಇದನ್ನೇ ನಾನು ಇಡೀ ವಿಶ್ವಕ್ಕೆ ಹಂಚುತ್ತೇನೆ. ಈ ಇಡೀ ಜಗತ್ತೇ ನನಗೆ ಕೂಡಲಸಂಗಮದೇವನ ಸ್ವರೂಪವಾದ ಕಾರಣ ನನಗೆ ಈ ಚಲನಶೀಲ ಸಮಾಜ-ಪ್ರಕೃತಿಯೇ ಸುಂಕಿಗ ಎನ್ನುತ್ತಾರೆ ವಿಶ್ವಗುರು ಬಸವಣ್ಣನವರು.🙏🏻🙏🏻🙏🏻
✍🏻 ವಿಶ್ಲೇಷಣೆ -
#ಲೋಕೇಶ್_ಎನ್_ಮಾನ್ವಿ.
9972536176
Comments
Post a Comment