ಶಿವಯೋಗಿ ಸಿದ್ಧರಾಮೇಶ್ವರರ ವಚನದ ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ.
ಓಂ ಶ್ರೀಗುರುಬಸವಲಿಂಗಾಯ ನಮಃ ಕರಿಕೆಯ ಕಂಡು ಪಶುಗಳಾಶ್ರಯಿಸುವವು . ಔತಣ ಕಂಡು ದ್ವಿಜರಾಶ್ರಯಿಸುವರು . ಯುದ್ಧವ ಕಂಡು ಶೂರರಾಶ್ರಯಿಸುವರು . ಸಭೆಯ ಕಂಡು ವಿದ್ವಾಂಸರಾಶ್ರಯಿಸುವರು . ಇವರೆಲ್ಲ ಮಾಯಾಮೂಕರಲ್ಲದೆ ಮಾಯಾರಹಿತರಲ್ಲಯ್ಯಾ ಕಂಡು ಕಂಡು ಕಣ್ದೆರೆದು ನೋಡದ ಮಹಾಮಹಿಮ ಜಂಗಮನ ಪಾದಕ್ಕೆ ನಮೋ ನಮೋ ಎಂಬೆನಯ್ಯಾ , # ಕಪಿಲಸಿದ್ಧಮಲ್ಲಿಕಾರ್ಜುನ . ✍🏾-; ಶಿವಯೋಗಿ ಸಿದ್ಧರಾಮೇಶ್ವರರು # ಭಾವಾರ್ಥ -; ಕರಿಕೆಯ ಕಂಡು ಪಶುಗಳಾಶ್ರಯಿಸುವವು . ಔತಣ ಕಂಡು ದ್ವಿಜರಾಶ್ರಯಿಸುವರು . ಯುದ್ಧವ ಕಂಡು ಶೂರರಾಶ್ರಯಿಸುವರು . ಸಭೆಯ ಕಂಡು ವಿದ್ವಾಂಸರಾಶ್ರಯಿಸುವರು . ಹೊಲದಲ್ಲಿ ಹಸಿಯಾದ ಗರಿಕೆ ಹುಲ್ಲನ್ನು ಕಂಡಾಗ ಪಶುಗಳು - ದನಗಳು ಓಡೋಡಿ ಬಂದು ತಮ್ಮ ಹೊಟ್ಟೆಯ ತುಂಬಿಸಿಕೊಳ್ಳುವವು , ಔತಣ ಕೂಟವನ್ನು ಕಂಡಾಗ ಭೋಜನ ಪ್ರಿಯರು ಓಡೋಡಿ ಹೋಗಿ ಬಾಯಿ ಚಪ್ಪರಿಸಿ , ಬಾಡೂಟವನ್ನು ಸವಿದು ತುಂಬ ಖುಷಿಯಾಗಿ ಹಿಂದಿರುಗುವರು . ಯುದ್ದ ಭೂಮಿಯನ್ನು ಕಂಡಾಗ ಈ ಕಾಳಗವನ್ನು ಗೆದ್ದು ಹೆಸರುವಾಸಿಗಬೇಕೆಂದು , ಶೂರರು ಬಲಶಾಲಿಗಳು ಆಸೆ ಪಡುವವರು . ಸಭೆ ಸಮಾರಂಭಗಳನ್ನು ಕಂಡಾಗ ವೇದಿಕೆಯಲ್ಲಿ ತನ್ನ ವಿದ್ವತ್ತನ್ನು ತೋರಪಡಿಸಬೇಕು ಜಗತ್ತಿಗೆ ತ...