ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ. ವಿಶ್ವಗುರು ಬಸವಣ್ಣನವರು. ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ.

ಓಂ ಶ್ರೀಗುರುಬಸವಲಿಂಗಾಯ ನಮಃ



ತಾಳಮಾನ ಸರಿಸವನರಿಯೆ,

ಓಜೆ ಬಜಾವಣೆಯ ಲೆಕ್ಕವನರಿಯೆ,

ಅಮೃತಗಣ ದೇವಗಣವನರಿಯೆ,

ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ

ಆನು ಒಲಿದಂತೆ ಹಾಡುವೆ.


✍🏾-;#ವಿಶ್ವಗುರು_ಬಸವಣ್ಣನವರು.

                  ಭಾವಾರ್ಥ-;


ಭಕ್ತನಾದವನು ದೇವನನ್ನು ಸ್ತುತಿಸಲು ರಾಗ_ತಾಳ,ವ್ಯಾಕರಣ ಛಂದಸ್ಸುಗಳ , ಅರಿಯಬೇಕಾಗಿಲ್ಲ,

ಇಲ್ಲಿ ಭಾಷೆಯೂ ಪ್ರಾಮುಖ್ಯವಲ್ಲ,

ಸಮಯ_ವೇಳೆಯೂ ಗಣನೆಗೆ ಬರುವುದಿಲ್ಲ

ಇಲ್ಲಿ ಬೇಕಿರುವುದು ನಿಜ ಭಕ್ತನ ನಿಷ್ಕಲ್ಮಶ ಅಂತಃಕರಣದ ಭಕ್ತಿ ಭಾವನೆಯ ಧ್ವನಿ ಮಾತ್ರ,


ದೇವಗಣ_ಅಮೃತಗಣಗಳೂ ಬೇಕಿಲ್ಲ,

ಇದು ಭಕ್ತಿಯ ಮಧುರ ಭಾಷೆ, ಮೂಕನಾಗಿ ಗುಗ್ಗುವ ಧ್ವನಿಯಲ್ಲಿ ಭಕ್ತಿಯಲಿ ವಟವಟಿಸಿದರೂ ಅದು ದೇವನಿಗೆ ಪ್ರಿಯವಾದ ಭಾಷೆಯಾಗುತ್ತದೆ, ಅದು ದೇವರಿಗೆ ಪ್ರಿಯವಾದ ಗೀತೆಯಾಗುತ್ತದೆ, 

ಮಾತು ಬಾರದ ಮುಗ್ದಮಗು ಯಾವ ರೀತಿಯಲ್ಲಿ ಕರೆದರೂ ತಾಯಿ ಬರುವಂತೆ,

ನಿಷ್ಕಲ್ಮಶವಾದ ಭಕ್ತಿಯಿಂದ  ಒಲಿದಂತೆ, ಯಾವ ರಾಗ_ತಾಳ_ಸ್ವರವಿಲ್ಲದೆಯೇ ತಿಳಿದಂತೆ ಹಾಡಿದಡೂ ನಿನಗೆ ಕೇಡಿಲ್ಲವಾಗಿ,ನಿನ್ನಲ್ಲಿ ಬಿನ್ನತೆಯಿಲ್ಲವಾಗಿ ನಿಜ ಭಕ್ತಿಗೆ ನೀನೊಲಿದು ಕೈವಿಡಿವೆ, ಎಂಬುದನ್ನು ಬಸವಣ್ಣನವರು ತಿಳಿಸುತ್ತಾರೆ..




                     ವಿಶ್ಲೇಷಣೆ-;

          #ಲೋಕೇಶ್_ಎನ್_ಮಾನ್ವಿ.

                     -/ 9972536176

Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

ಆರು ಮುನಿದು ನಮ್ಮನೇನ ಮಾಡುವರು, ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ ಲೋಕೇಶ್ ಎನ್ ಮಾನ್ವಿ.

ಸಿದ್ಧಿಪುರುಷ ಸದ್ಗುರು ಯಲ್ಲಾಲಿಂಗಪ್ರಭು ಮಹಾರಾಜರು,