‘ಶರಣ ಲಿಂಗವನಪ್ಪಿ ಮಹಾಲಿಂಗವೇ ತಾನಾದ ಪರಿಯನ್ನು ತಿಳಿಸುತ್ತಾರೆ ಎಡೆಯೂರ ಸಿದ್ಧಲಿಂಗೇಶ್ವರ ಶಿವಯೋಗಿಗಳು’ ವಿಶ್ಲೇಷಣೆ-;#ಲೋಕೇಶ್_ಎನ್_ಮಾನ್ವಿ.



 ಓಂ ಶ್ರೀಗುರುಬಸವಲಿಂಗಾಯ ನಮಃ



ಗಾಳಿ ಗಂಧವನಪ್ಪಿದಂತೆ, ಬಯಲು ಬಯಲನಪ್ಪಿದಂತೆ,


ಬೆಳಗು ಬೆಳಗವಪ್ಪಿ ಮಹಾ ಬೆಳಗಾದಂತೆ,


ಶರಣ ಲಿಂಗವನಪ್ಪಿ, ಮಹಾಲಿಂಗವೇ ತಾನು ತಾನಾಗಿನಿರ್ವಯಲಾದನು ನೋಡಾ,

 

ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.


✍🏾-; ಎಡೆಯೂರ ಸಿದ್ಧಲಿಂಗೇಶ್ವರ ಶಿವಯೋಗಿಗಳು.


                 ಭಾವಾರ್ಥ-:


ಗಾಳಿ ಗಂಧವನಪ್ಪಿದಂತೆ

ತಂಪಾಗಿ ಬೀಸುವ ಗಾಳಿಯು ಸುಗಂಧವನ್ನು ಸೂಸುವ ಪರಿಮಳವನ್ನು ಕೂಡಿ ತನ್ನೊಳಗೆ ಗಾಳಿ-ಗಂಧವೆರಡು ಭಿನ್ನವಿಲ್ಲದೆ ಬಿಡಿಸಲಾರದಂತೆ ಒಂದಾದಂತೆ,



ಬಯಲು ಬಯಲನಪ್ಪಿದಂತೆ ಬೆಳಗು ಬೆಳಗವಪ್ಪಿ ಮಹಾ ಬೆಳಗಾದಂತೆ


ನಾನಾ ಹಳ್ಳಕೊಳ್ಳ ನದಿಗಳು ಬೇರೆ ಬೇರೆಯಾಗಿ ಹರಿಯುತ್ತಿರುವಾಗ

ಭಿನ್ನ ಹೆಸರಿನಿಂದ ತುಂಗಾ-ಭದ್ರಾ ಗಂಗಾ, ಕಾವೇರಿ,ಗೋದಾವರಿ ಎಂದು ಗುರುತಿಸಬಹುದು,

ಅದೇ ನದಿಗಳು ಸಾಗರದಲ್ಲಿ ಸೇರಿ ಒಂದಾಗಿ ಕೂಡಿ ಬೆರೆತಾಗ ಎಲ್ಲದರ ಸ್ವಾದವೂ ಒಂದೇಎಲ್ಲಿಯ ಭಿನ್ನತೆ, ಎಲ್ಲವೂ ಅದರ ಏಕತೆ,

ನಿರ್ಗುಣ ನಿರಾಕಾರ ಬಯಲು ಬಯಲನಪ್ಪಿದಂತೆ ನಿರಾಳಬೆಳಕಿಗೂ ಬೇಧವಿಲ್ಲ,

ಮಣ್ಣಿನ ಹಣತೆಯಲ್ಲಿ ಹಚ್ಚಿದರೇನು.?

ಬಂಗಾರದ ಪ್ರಣತೆಯಲ್ಲಿ ಹಚ್ಚಿದರೇನು.?

ಒಂದನ್ನು ತುಪ್ಪದಿಂದ, ಮತ್ತೊಂದನ್ನು ಎಣ್ಣೆಯಿಂದ ಬೆಳಗಿಸಿದರೇನು.? ಎರಡು ಬೆಳಕು ಸೇರಿ ಬೆರೆತು ಒಂದಾಗಿ ಬೀರುವ ಮಹಾಬೆಳಕನ್ನು.

ಭಿನ್ನವಾಗಿ ಇದು ಚಿನ್ನದ ಪ್ರಣತೆಯದ್ದು,

ಇದು ಮಣ್ಣಿನ ಹಣತೆಯದ್ದೆಂದು ಹೇಳಲಾದೀತೆ.?

ಹಾಗೇ ಅಂಧಕಾರ ಕಳೆದುಮನೆಯನ್ನು ಬೆಳಗುತ್ತಿರುವ ಮಹಾಬೆಳಕು, ತುಪ್ಪದ್ದೊ, ಎಣ್ಣೆಯದೋ. ಎಂದು ಗುರುತಿಸಿ ಬೇರ್ಪಡಿಸಲು ಸಾಧ್ಯವಿಲ್ಲ,

ಬದಲಾಗಿ ಎರಡೂ ಕೂಡಿ ಒಂದಾಗಿ ಬೆಳಗು ಮಹಾಬೆಳಗಾಗಿ ಅತ್ಯಂತ ಪ್ರಕಾಶಮಾನವಾಗಿ ಬೆಳಗುವಂತೆ.


ಶರಣ ಲಿಂಗವನಪ್ಪಿ, ಮಹಾಲಿಂಗವೇ ತಾನು ತಾನಾಗಿನಿರ್ವಯಲಾದನು ನೋಡಾ,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ

ಮರೆವನ್ನು ಅಳಿದ ಬೆಳಗು ಮಹಾ ಶರಣನ ಅಂತಃಕರಣವುಆ ಪವಿತ್ರವಾದ ಅಂತಃಕರಣದ ಚೇತನವನ್ನು ಕೂಡಿದಾಗ ರೂಪವಿಲ್ಲದ ಆತ್ಮವು ಬಯಲುನಿರಾಕಾರ ಪ್ರಕೃತಿಯದು ಮಹಾಬಯಲುಆತ್ಮದ ಅರಿವೇ ನಿಜಶರಣ, ನಿರಾಕಾರ ಸೃಷ್ಟಿಯ ಪರಮಸತ್ಯವೇ ಪ್ರಕೃತಿಯ ಚಿದ್ಬಯಲು, ‘ಅದೇ ಮಹಾಲಿಂಗ’ ಇಂತಪ್ಪ ಶರಣನ ಅಂತಃಕರಣವು ಗಾಳಿ-ಗಂಧವನ್ನು ಕೂಡಿ ಬೇಧವಿಲ್ಲದೆ ಬೆರೆತು ಒಂದಾದಂತೆ, ತಾನು ತನಾಗಿ ನಿರ್ವಯಲಾದನು ನೋಡಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ಎನ್ನುತ್ತಾರೆ ಎಡೆಯೂರ ಸಿದ್ಧಲಿಂಗೇಶ್ವರ ಶಿವಯೋಗಿಗಳು.




                       

         🙏🏻ಶರಣು ಶರಣಾರ್ಥಿಗಳೊಂದಿಗೆ.🙏🏻


                      ✍🏾ವಿಶ್ಲೇಷಣೆ-; 

               #ಲೋಕೇಶ್_ಎನ್_ಮಾನ್ವಿ.

                    -/ 9972536176




Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

ಆರು ಮುನಿದು ನಮ್ಮನೇನ ಮಾಡುವರು, ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ ಲೋಕೇಶ್ ಎನ್ ಮಾನ್ವಿ.

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’