Posts

Showing posts with the label ‘ಸಂಸಾರದಿಂದಲೇ ಸದ್ಗತಿ ಕಂಡ ಶರಣ ದಂಪತಿಗಳು’

‘ದೇವರಿಗೂ ಕಾಯಕ ತತ್ವ ತಿಳಿಸಿದ ಶರಣ ದಂಪತಿಗಳು ‘ಆಯ್ದಕ್ಕಿ ಲಕ್ಕಮ್ಮ ಆಯ್ದಕ್ಕಿ ಮಾರಯ್ಯನವರು’ ವಿಶೇಷ ಲೇಖನ-; ಲೋಕೇಶ್ ಎನ್ ಮಾನ್ವಿ.

Image
ಶ್ರೀಗುರು ಬಸವಲಿಂಗಾಯ ನಮಃ ‘ ದೇವರಿಗೂ ಕಾಯಕ ತತ್ವ ತಿಳಿಸಿದ ಶರಣ ದಂಪತಿಗಳು ‘ ಆಯ್ದಕ್ಕಿ ಲಕ್ಕಮ್ಮ ಆಯ್ದಕ್ಕಿ ಮಾರಯ್ಯನವರು ’ ಇಡೀ ಜಗತ್ತಿಗೆ ‘ ಕಾಯಕವೇ ಕೈಲಾಸ ’ ವೆಂಬ ಅದ್ವಿತೀಯ ತತ್ವವನ್ನು ತಿಳಿಸಿದ ಮೊದಲಿಗರು ಶರಣೆ ಆಯ್ದಕ್ಕಿ ಲಕ್ಕಮ್ಮನವರು , ಇವರು ಶರಣ ಆಯ್ದಕ್ಕಿ ಮಾರಯ್ಯನವರ ಧರ್ಮಪತ್ನಿಯಾಗಿದ್ದರು , ಶರಣ   ಸತಿಪತಿಗಳಿಬ್ಬರೂ ಮೂಲತಃ ರಾಯಚೂರು ಜಿಲ್ಲೆ , ಲಿಂಗಸೂಗೂರು ತಾಲೂಕಿನ ಅಮರೇಶ್ವರ ಗ್ರಾಮದವರಾಗಿದ್ದರೂ ಕಲ್ಯಾಣದಲ್ಲಿ ಜಗಜ್ಯೋತಿ ಬಸವಣ್ಣನವರ ತತ್ವಾದರ್ಶಗಳಿಗೆ ಮಾರು ಹೋಗಿ ಕಲ್ಯಾಣಕ್ಕೆ ಬರುತ್ತಾರೆ , ಕಲ್ಯಾಣಕ್ಕೆ ಬಂದ ನಂತರ ಅನುಭವ ಮಂಟಪದಲ್ಲಿ ಇಬ್ಬರಿಗೂ ಆತ್ಮೀಯ ಸ್ವಾಗತ ಕೋರಲಾಗುತ್ತದೆ , ಆದರೆ ಲಕ್ಕಮ್ಮನವರು ಹೆಚ್ಚಾಗಿ ಕಾಯಕ ದಾಸೋಹದಲ್ಲೇ ತೊಡಗುತ್ತಾರೆ , ಕಲ್ಯಾಣದಲ್ಲಿ ಇವರ ಕಾಯಕ ಹೊಲಗಳಲ್ಲಿ ಕೆಲಸ ಮಾಡುವುದು , ಭತ್ತದ ಕಣವಾದ ನಂತರ ಮಾಲಿಕರು ಮನೆಗೆ ಭತ್ತ ಒಯ್ಯುವಾಗ ಅಳಿದುಳಿದು ಬಿದ್ದ ಭತ್ತವನ್ನೇ ಕೂಲಿಯಾಗಿ  ಆಯ್ದು  ತಂದು ಅದರಲ್ಲೇ ದಾಸೋಹ ಮಾಡಿ   ಮಿಕ್ಕಿದ್ದನ್ನು   ಸೇವಿಸಿ ಸಂತೃಪ್ತರಾಗುತ್ತಿದ್ದರು , ಹೀಗಿರುವಾಗ ಪತಿ ಮಾರಯ್ಯ ಕೂಲಿಗೆಂದು ಹೊಲದಲ್ಲಿ ದುಡಿದು ಬರುವಾಗ ದಿನಕ್ಕಿಂತ ಹೆಚ್ಚಿನ ಅಕ್ಕಿಯನ್ನು  ಆಯ್ದು  ತರುತ್ತಾನೆ , ಇದನ್ನು ಗಮನಿಸಿದ ಪತ್ನಿ ...

ಸಂಸಾರದಲ್ಲೇ ಶಿವನನ್ನು ಕಂಡ ಶರಣ ಜೇಡರ ದಾಸಿಮಯ್ಯ ಮತ್ತು ಶರಣೆ ದುಗ್ಗಳೆಯವರ, ‘ಶರಣ ಸಂಸಾರಿಕ ಸೂತ್ರ’ ✍🏾ವಿಶೇಷ ಲೇಖನ-; ಲೋಕೇಶ್_ಎನ್_ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಸಂಸಾರದಲ್ಲೇ ಶಿವನನ್ನು ಕಂಡ ಶರಣ ಜೇಡರ ದಾಸಿಮಯ್ಯ ಮತ್ತು ಶರಣೆ ದುಗ್ಗಳೆಯವರ , ‘ ಶರಣ ಸಂಸಾರಿಕ ಸೂತ್ರ ’ ಸಂಸಾರವನ್ನು ಕಷ್ಟವೆಂದಾಗಲಿ ; ದುಖಃವೆಂದಾಗಲಿ ;  ನರಕವೆಂದಾಗಲಿ ; ಬಂಧನವೆಂದಾಗಲಿ ಕರೆದವರಲ್ಲ ನಮ್ಮ ಬಸವಾದಿ ಶಿವಶರಣರು ,  ಅದಕ್ಕೆ ಬದಲಾಗಿ ; ಸಂಸಾರವನ್ನು ಶಿವನನ್ನೊಲಿಸುವ ಸಾಧನವಾಗಿ ಕಂಡವರು ಶರಣರು . ಸಂಸಾರಿಕ ಶರಣರ ಬಗ್ಗೆ ನನಲ್ಲಿ  ಹೆಚ್ಚು ಆಸಕ್ತಿ ಮೂಡಿಸಿದವರಲ್ಲಿ ಜೇಡರ _ ದಾಸಿಮಯ್ಯ ದುಗ್ಗಳೆಯವರು   ಪ್ರಮುಖರು . ಇವರ  ‘ ಶರಣ ಸಂಸಾರಿಕ ಸೂತ್ರವು ’  ನನಗೆ ಬಹಳ ಇಷ್ಟವಾದುದ್ದಾಗಿದೆ ,. ಸಂಸಾರಿಕರಾಗಬೇಕೆ ,?  ಸನ್ಯಾಸಿಯಾಗಬೇಕೆ ,?  ಸಂಸಾರಿಗಳಾದರೆ ಹೇಗೆ ಸಂತೃಪ್ತ ಜೀವನ ಸಾಗಿಸಬಹುದು,  ಎಂಬ  ಹಲವಾರು ಯುವಕರ ಗೊಂದಲಕ್ಕೆ ಇಲ್ಲಿ   ದಾಸಿಮಯ್ಯನವರು ಪರಿಹಾರ   ಸೂಚಿಸುತ್ತಾರೆ ,  ಮೊದಲನೆಯದಾಗಿ ‘ ಜೇಡರ ದಾಸಿಮಯ್ಯನವರು ಮಹಾನ್ ಶಿವಭಕ್ತರು , ಲಿಂಗ ನಿಷ್ಠರು , ಕಾಯಕ ಜೀವಿಗಳು ದಾಸೋಹ ಪ್ರೇಮಿಗಳಾದ ಶರಣರು ’ ಮೊದಲು ತಮ್ಮ ಮನಸ್ಸಿನಲ್ಲಿ ಸಂಸಾರಿಕರಾಗಲು ನಿರ್ಧರಿಸಿ ಕನ್ಯಾನ್ವೇಷಣೆಗೆ  ‘ ಕನ್ಯಾ ನೋಡಲು ಸಿದ್ಧರಾಗುತ್ತಾರೆ ’ ಆದರೆ ದಾಸಿಮಯ್ಯನವರದ್ದು ಒಂದು ಷರತ್ತು ಇರುತ್ತದೆ;   ( ನೀರು ಮತ್ತು ಸೌದ...

‘ಶರಣರದ್ದು ಸಂಸಾರದಲ್ಲೇ ಸದ್ಗತಿ ಕಾಣುವ ಸಾರ್ಥಕ ಬದುಕು’ 🙏🏻👍🏻

Image
ಓಂ ಶ್ರೀಗುರುಬಸವಲಿಂಗಾಯ ನಮಃ ‘ಶರಣರದ್ದು ಸಂಸಾರದಲ್ಲೇ ಸದ್ಗತಿ ಕಾಣುವ ಸಾರ್ಥಕ ಬದುಕು’ 🙏🏻🙏🏻👍🏻👍🏻 ಸತಿಪುರುಷರಿಬ್ಬರೂ ಪ್ರತಿದೃಷ್ಟಿಯಾಗಿ ಮಾಡಬಲ್ಲಡೆ  ಅದೆ ಮಾಟ,  ಕೂಡಲಸಂಗಮದೇವರ ಕೂಡುವ ಕೂಟ. ✍🏻 -;#ವಿಶ್ವಗುರು_ಬಸವಣ್ಣನವರು.                   #ಭಾವಾರ್ಥ-: ಶರಣರು ಸಂನ್ಯಾಸತ್ವವನ್ನು ಒಪ್ಪುವುದಿಲ್ಲ, ನೀರಿಗಿಳಿಯದೆ ಈಜು ಕಲಿಯದೆ, ಸಾಗರವನ್ನು ದಾಟಲು ಹೇಗೆ ಸಾಧ್ಯವಿಲ್ಲವೊ. ಹಾಗೇ ಸಂಸಾರಕ್ಕೆ ಹೆದರಿ ಸೋತು ಸಂನ್ಯಾಸಿಯಾದೆನೆಂದರೆ,  ಈ ಭವ ಸಾಗರವನ್ನು ದಾಟಲು ‌ಸಾಧ್ಯವೇ ಇಲ್ಲ. ಹನ್ನೆರೆಡನೇ ಶತಮಾನದ ಬಹುತೇಕ ಶರಣರು ಸಂಸಾರಿಕರೆ ಆಗಿದ್ದಾರೆ,  ಸತಿಪತಿಗಳಾಗಿ ಆದರ್ಶಮಯವಾಗಿ ಬದುಕಿ ಶಾಶ್ವತ ಅಜರಾಮರಾದರು ಶರಣ ದಂಪತಿಗಳು. ‘ಬಸವಣ್ಣ- ನೀಲಾಂಬಿಕೆ’ ‘ದಾಸಿಮಯ್ಯ- ದುಗ್ಗಳೆ’ ‘ಆಯ್ದಕ್ಕಿ ಲಕ್ಕಮ್ಮ- ಮಾರಯ್ಯ’ ‘ಹರಳಯ್ಯ- ಕಲ್ಯಾಣಮ್ಮ’ ‘ಮೋಳಿಗೆಯ ಮಾರಯ್ಯ- ಮಹಾದೇವಿ’ ‘ಹಡಪದ ಅಪ್ಪಣ್ಣ- ಲಿಂಗಮ್ಮ’ ಹೀಗೇ ಶರಣ- ಶರಣೆಯರು ನಮಗೆಲ್ಲ ಮಾದರಿಯಾಗಿದ್ದರೆ. ಸತಿ ಪತಿಗಳಿಬ್ಬರು ಬಿನ್ನವಿಲ್ಲದಿರಬೇಕು, ಎರಡು ಕಣ್ಣುಗಳು ಹೇಗೆ ಏಕ ದೃಷ್ಟಿಯಿಂದ ಅಂಗೈಯ ಲಿಂಗವನು ನೋಡುತ್ತವೆಯೊ ಹಾಗೇ ಸತಿಪತಿಗಳ ದೇಹ ಬಿನ್ನವಾದರೂ ಭಾವ ಒಂದೇ ಇರಬೇಕು, ಜೀವವೇ ಶಿವನೆಂದಿರಬೇಕು, ಸತಿಪುರುಷರಿಬ್ಬರೂ ಸನ್ಮಾರ್ಗದಲ್ಲಿ ನಡೆದು, ಕಾಯಕ ಜೀವಿಗಳಾಗಿ ಅತ್ಯಂತ ಅನ್ಯೂನ್ಯತೆಯಿಂದ ಜೀವಿ...