ಸಂಸಾರದಲ್ಲೇ ಶಿವನನ್ನು ಕಂಡ ಶರಣ ಜೇಡರ ದಾಸಿಮಯ್ಯ ಮತ್ತು ಶರಣೆ ದುಗ್ಗಳೆಯವರ, ‘ಶರಣ ಸಂಸಾರಿಕ ಸೂತ್ರ’ ✍🏾ವಿಶೇಷ ಲೇಖನ-; ಲೋಕೇಶ್_ಎನ್_ಮಾನ್ವಿ.

 ಓಂ ಶ್ರೀಗುರುಬಸವಲಿಂಗಾಯ ನಮಃ


ಸಂಸಾರದಲ್ಲೇ ಶಿವನನ್ನು ಕಂಡ ಶರಣ ಜೇಡರ ದಾಸಿಮಯ್ಯ ಮತ್ತು ಶರಣೆ ದುಗ್ಗಳೆಯವರ, ‘ಶರಣ ಸಂಸಾರಿಕ ಸೂತ್ರ



ಸಂಸಾರವನ್ನು ಕಷ್ಟವೆಂದಾಗಲಿ; ದುಖಃವೆಂದಾಗಲಿನರಕವೆಂದಾಗಲಿ; ಬಂಧನವೆಂದಾಗಲಿ ಕರೆದವರಲ್ಲ ನಮ್ಮ ಬಸವಾದಿ ಶಿವಶರಣರು

ಅದಕ್ಕೆ ಬದಲಾಗಿ; ಸಂಸಾರವನ್ನು ಶಿವನನ್ನೊಲಿಸುವ ಸಾಧನವಾಗಿ ಕಂಡವರು ಶರಣರು.


ಸಂಸಾರಿಕ ಶರಣರ ಬಗ್ಗೆ ನನಲ್ಲಿ ಹೆಚ್ಚು ಆಸಕ್ತಿ ಮೂಡಿಸಿದವರಲ್ಲಿ ಜೇಡರ_ದಾಸಿಮಯ್ಯ ದುಗ್ಗಳೆಯವರು ಪ್ರಮುಖರು.

ಇವರ ‘ಶರಣ ಸಂಸಾರಿಕ ಸೂತ್ರವು’ 

ನನಗೆ ಬಹಳ ಇಷ್ಟವಾದುದ್ದಾಗಿದೆ,. ಸಂಸಾರಿಕರಾಗಬೇಕೆ,? ಸನ್ಯಾಸಿಯಾಗಬೇಕೆ,? 

ಸಂಸಾರಿಗಳಾದರೆ ಹೇಗೆ ಸಂತೃಪ್ತ ಜೀವನ ಸಾಗಿಸಬಹುದು, ಎಂಬ ಹಲವಾರು ಯುವಕರ ಗೊಂದಲಕ್ಕೆ ಇಲ್ಲಿ ದಾಸಿಮಯ್ಯನವರು ಪರಿಹಾರ ಸೂಚಿಸುತ್ತಾರೆ


ಮೊದಲನೆಯದಾಗಿಜೇಡರ ದಾಸಿಮಯ್ಯನವರು ಮಹಾನ್ ಶಿವಭಕ್ತರು, ಲಿಂಗ ನಿಷ್ಠರು, ಕಾಯಕ ಜೀವಿಗಳು ದಾಸೋಹ ಪ್ರೇಮಿಗಳಾದ ಶರಣರು ಮೊದಲು ತಮ್ಮ ಮನಸ್ಸಿನಲ್ಲಿ ಸಂಸಾರಿಕರಾಗಲು ನಿರ್ಧರಿಸಿ ಕನ್ಯಾನ್ವೇಷಣೆಗೆ ‘ಕನ್ಯಾ ನೋಡಲು ಸಿದ್ಧರಾಗುತ್ತಾರೆ


ಆದರೆ ದಾಸಿಮಯ್ಯನವರದ್ದು ಒಂದು ಷರತ್ತು ಇರುತ್ತದೆ; (ನೀರು ಮತ್ತು ಸೌದೆ ಉಪಯೋಗಿಸದೇ ಕಬ್ಬು ಮತ್ತು ಅರ್ಧಮರಳು ಮಿಶ್ರಿತ ಅಕ್ಕಿಯಿಂದ ಮರಳಕ್ಕಿಪಾಯಸ ಮಾಡಬೇಕುಎಂಬುದಾಗಿ ಷರತ್ತು ವಿಧಿಸಿರುತ್ತಾರೆ ಯಾರು  ತಮ್ಮ ಷರತ್ತುನ್ನು ಒಪ್ಪಿ ಗೆಲ್ಲುತ್ತಾರೊ ಹೆಣ್ಣನ್ನು ಮದುವೆಯಾಗುವುದಾಗಿ ನಿರ್ಧರಿಸಿ,

ಕನ್ಯಾ ನೋಡಲು ಪ್ರಾರಂಭಿಸುತ್ತಾರೆ;

ಷರತ್ತಿನಂತೆ ಕೈಯಲ್ಲಿ ಕಬ್ಬು ಮತ್ತು ಮರಳು ಮಿಶ್ರಿತ ಅಕ್ಕಿ ಗಂಟನ್ನು ಹಿಡಿದು ಕೊಂಡು ಕನ್ಯಾನ್ವೇಷಣೆಗೆ ಹೊರಡುತ್ತಾರೆ

ಹತ್ತು_ಹನ್ನೆರಡು  ವರ್ಷ ಕಳೆದರೂ ಅಂಥ ಕನ್ಯೆ ಸಿಗುವುದಿಲ್ಲ.  ಕೊನೆಗೆ ಗೊಬ್ಬೂರಿಗೆ ಬಂದು ಮಲ್ಲಿನಾಥ ಶಿವಯೋಗಿ ದಂಪತಿಗಳಿಗೆ ತನ್ನ ಅಭಿಲಾಷೆಯನ್ನು ತಿಳಿಸುತ್ತಾನೆ. ಅವನ ಷರತ್ತು ಕೇಳಿ  ಅಂಥ  ಕನ್ಯೆ ನಿನಗೆ  ಈ ಜನ್ಮದಲ್ಲಿ ಸಿಗಲಾರಳು ಎನ್ನುತ್ತಿರುವಾಗಲೇ  ಅವರ ಮಾತನ್ನು  ಆಲಿಸಿದ ಅವರ ಮಗಳು ದುಗ್ಗಳೆ.


ದುಗ್ಗಳೆ -; ಅದೇಕೆ  ಸಿಗಲಾರಳು ?

ಅದೇನು ದೊಡ್ಡದು ಮರಳಕ್ಕಿ  ಪಾಯಸ ನಾನು ಮಾಡಿಕೊಡುವೆನೆಂದು ದಾಸಿಮಯ್ಯನ  ಸವಾಲು ಸ್ವೀಕರಿಸುತ್ತಾಳೆ. 

ದುಗ್ಗಳೆಯು ಕಬ್ಬುಗಳನ್ನು ತರಿಸಿ ಬುಡದ ಭಾಗ ಹಾಗೂ ತುದಿ ಭಾಗಗಳನ್ನು ಬೇರೆ ಬೇರೆ ಮಾಡಿ ಸಿಹಿರಸ ಹಾಗೂ ಸಪ್ಪೆರಸಗಳನ್ನು  ಬೇರೆ ಬೇರೆ ಪಾತ್ರೆಗಳಲ್ಲಿ ಸಂಗ್ರಹಿಸುತ್ತಾಳೆ. ನೀರಿನ ಬದಲು ಕಬ್ಬಿನ ರಸವನ್ನೇ ಹಾಕಿ, ಸೌದೆಯ ಬದಲಿಗೆ ಕಬ್ಬಿನ ಸಿಪ್ಪೆ  ಒಣಗಿಸಿ ಬೆಂಕಿ  ಹೊತ್ತಿಸಿ ಸಪ್ಪೆ ಸರದ ಪಾತ್ರೆಯಲ್ಲಿ ಮರಳು ಮಿಶ್ರಿತ  ಅಕ್ಕಿ ಹಾಕಿ ಕುದಿಸಲು  ಪಾಕ ಸಿದ್ಧವಾಗುತ್ತದೆ. ಅದನ್ನು ಜಾಲಾಡಿ  ತಳದಲ್ಲಿ ಮರಳು ಉಳಿಯುವಂತೆ  ಮಾಡಿ ಮೇಲಿನ  ಪಾಕವನ್ನು ಸಿಹಿ ರಸದ ಪಾತ್ರೆಯಲ್ಲಿ ಕೂಡಿಸಿ ತಯಾರಾದ  ಪಾಯಸವನ್ನು ದಾಸಿಮಯ್ಯನಿಗೆ ಕೊಡುತ್ತಾಳೆ.  ಹೀಗೆ  ನೀರು ಮುಟ್ಟದೆ, ಸೌದೆ  ಉಪಯೋಗಿಸದೆ ಮಳಲಕ್ಕಿ ಪಾಯಸ ತಯಾರಿಸಿಕೊಟ್ಟ ಚಿಕ್ಕ ಹುಡುಗಿ ದುಗ್ಗಳೆಯ ಜಾಣತನಕ್ಕೆ ಎಲ್ಲರೂ  ತಲೆ ದೂಗುತ್ತಾರೆ ಅವಳನ್ನು  ಹೊಗಳಿಕೊಂಡಾಡುತ್ತಾರೆ. ದಾಸಿಮಯ್ಯನು ದುಗ್ಗಳೆಯನ್ನು  ಮೆಚ್ಚಿ ಕೊಂಡಾಡಿ ಅಲ್ಲೇ ಆ ಕ್ಷಣವೇ ಲಿಂಗ ನಿರೀಕ್ಷಣೆಯಲ್ಲಿ ವಿವಾಹವಾಗುತ್ತಾರೆ, ದಾಸಿಮಯ್ಯ ದುಗ್ಗಳೆಯವರು, ನಂತರ ತಮ್ಮೂರಿಗೆ ಬಂದ ದಾಸಿಮಯ್ಯ  ದಂಪತಿಗಳು ತಾವಿಬ್ಬರು ನೇಯ್ಗೆ ಕಾಯಕ  ಮಾಡಿಕೊಂಡು  ಅತ್ಯಂತ ಶ್ರದ್ಧೆ ಭಕ್ತಿ ಅನ್ಯೌನ್ಯತೆಯಿಂದ ಜೀವನ  ಸಾಗಿಸುತ್ತಿರುವಾಗ, 


‘ಇಬ್ಬರು ಸಾಧಕರಾಗ ಬಯಸಿದ ಯುವಕರು’ 

ಸಂಸಾರ ಶ್ರೇಷ್ಠವೊ, ಸನ್ಯಾಸ ಶ್ರೇಷ್ಠವೊ; 

ಸಂಸಾರ ಹಾಗೂ ಸನ್ಯಾಸ ಇವುಗಳಲ್ಲಿ ಯಾವುದು ಶ್ರೇಷ್ಠವೆಂಬ  ವಿಷಯದಲ್ಲಿ ವಾದ ವಿವಾದ ನಡೆದು ಅಂತ್ಯಕಾಣದೇ. ಇದರ ಪರಾಮರ್ಶೆಗೆ ಅವರಿಬ್ಬರು ಅನುಭಾವಿ 

ಶರಣ ದಾಸಿಮಯ್ಯನಲ್ಲಿಗೆ ಬರುತ್ತಾರೆ’. ಅವರಿಗೆ ಆದಾರಾತಿಥ್ಯ ಮಾಡಿ ಮನೆಯ ಹೊರಗಿನ ಕಟ್ಟೆ ಮೇಲೆ ಕೂಡಿಸಿದ ದಾಸಿಮಯ್ಯರು ಎಳೆ ಬಿಸಿಲಿನಲ್ಲಿ ಕುಳಿತು, ಕಾಯಕ ನಿರತನಾಗಿ ಬಿಸಿಲಿನಲ್ಲೂ , ದುಗ್ಗಳೆಗೆ ಕತ್ತಲಿದೆ ದೀಪ ಹಚ್ಚಿ ತರಲು ಹೇಳುತ್ತಾರೆ. 

ದುಗ್ಗಳೆ ನಗು ಮುಖದಲ್ಲೇ- ದೀಪ ಹಚ್ಚಿ ತಂದು ಬಿಸಿಲಲ್ಲಿ  ಕುಳಿತ ದಾಮಯ್ಯನ ಮುಂದಿಡುತ್ತಾಳೆ ತಲೆಗೆ ಹೊದ್ದುಕೊಳ್ಳಲು  ವಸ್ತ್ತ್ರ ತೆಗೆದುಕೊಡಲು ಹೇಳುತ್ತಾರೆ. ಅವನ ಹೆಗಲ ಮೇಲೆಯೇ ಇದ್ದ ವಸ್ತ್ತ್ರವನ್ನು  ದುಗ್ಗಳೆ ತೆಗೆದು ಅವನ ತಲೆಯ ಮೇಲಿರಿಸುತ್ತಾಳೆ. ಸ್ವಲ್ಪ ಹೊತ್ತು ಕಾಯಕ ಮಾಡಿ ಮುಗಿದ ನಂತರ ಮನೆಯಲ್ಲಿ ಪ್ರಸಾದಕ್ಕೆಂದು ಕರೆದುರು, 


ಇಬ್ಬರು ಸಾಧಕರೊಂದಿಗೆ ದಾಸಿಮಯ್ಯನವರು ಪ್ರಸಾದ ಸೇವನೆಗೆ ಕುಳಿತರು, ಆಗ ದುಗ್ಗಳೆ ಕುಡಿಯಲು ರಾತ್ರಿ ಮಾಡಿದ ತಂಗಳು ಅಂಬಲಿ ತಂದು ಕೊಟ್ಟಳು, 

ತಣ್ಣನೆ ಅಂಬಲಿ ಸೇವಿಸುತ್ತಿರುವ ದಾಸಿಮಯ್ಯರು ಅಯ್ಯೋ ಬಾಯಿ ಸುಟ್ಟಿತು ಆರಿಸಿಕೊಡು ದುಗ್ಗಳೆ  ಎಂದು ಹೇಳಿದರು, ಆಗ ದುಗ್ಗಳೆ ತಣ್ಣಗಿರುವ ಅಂಬಲಿಗೆ ಗಾಳಿ ಹಾಕುತ್ತಾ ಕುಳಿತಳು, ಇದನ್ನೆಲ್ಲ ನೋಡುತ್ತ ಕುಳಿತಿದ್ದ ಆ ಇಬ್ಬರು ಯುವಕರು ಮುಸಿಮುಸಿ ನಗುತ್ತಿರುತ್ತಾರೆ. 

ಆಗ ದಾಸಿಮಯ್ಯರು ಹೇಳುತ್ತಾರೆ; 

ಸಾಧಕರೆ ಪತಿಯ ಮಾತಿಗೆ ತಕ್ಷಣವೇ ಎದುರು ನುಡಿಯದೆ, ತಾಳ್ಮೆಯಿಂದ ಇದ್ದು, ಪತಿಯ ಮಾತಿನ ಹಿಂದೆ ಏನೋ ಅರ್ಥವಿದೆ ಎಂದು, ಸಂಸಾರದ ಒಳ ಅರಿವನ್ನು ಅರಿತು, ಮನಪೂರ್ವಕವಾಗಿ   ನನ್ನ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬಲ್ಲ, ನನ್ನ ಮಾತಿನ ಹಿಂದಿರುವ ನೀತಿಯನ್ನು ಅರ್ಥ ಮಾಡಿಕೊಂಡಿರಬಲ್ಲ ನಮ್ಮ ದುಗ್ಗಳೆಯಂಥ ಸತಿ ಇದ್ದರೆ ಸಂಸಾರ ಲೇಸು,  ಇಲ್ಲದಿದ್ದರೆ  ಸನ್ಯಾಸ ಲೇಸು, 

ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ.
ಸತಿಪತಿಗಳೊಂದಾಗದವರ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ. 


ಬಂದುದನರಿದು ಬಳಸುವಳು ಬಂದುದ ಪರಿಣಮಿಸುವಳು ಬಂಧು ಬಳಗದ ಮರೆಸುವಳು ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ" ಎಂದು ನನ್ನ ಜೀವನ ಸಾಕ್ಷಾತ್ಕಾರವಾಯಿತು ಎಂದು ಹೇಳಿತ್ತಾರೆ.

ನಂತರ ಅತ್ಯಂತ ಶ್ರದ್ಧೆ ಭಕ್ತಿಯಿಂದ ಕಾಯಕ ಜೀವಿಗಳಾಗಿ ಜಂಗಮಪ್ರೇಮಿಗಳಾಗಿ ಇವರ ಕೀರ್ತಿ ಶಿಖರಪ್ರಾಯವಾಗಿ ಬೆಳೆಯುತ್ತಿರುವಾಗಲೇ, 

ನೇಯ್ಗೆ ಕಾಯಕದಲ್ಲಿ ಪರಿಣಿತರಾದ ದಾಸಿಮಯ್ಯ ದಂಪತಿಗಳು, ಹನ್ನೆರಡು ವರ್ಷ ಕಷ್ಟಪಟ್ಟು ಒಂದು ಸುಂದರವಾದ ಬಹುಬೆಲೆಯುಳ್ಳ ಹೊದ್ದುಕೊಳ್ಳುವ ವಸ್ತುವನ್ನು ನೇಯ್ದಿರುತ್ತಾನೆ. ಅದನ್ನು ಮಾರಲು  ಸಂತೆಗೆ ಒಯ್ಯುತ್ತಾನೆ. ಬಹು ಬೆಲೆಯುಳ್ಳ ಆ ವಸ್ತ್ತ್ರವನ್ನು ಕೊಳ್ಳಲು ಯಾರೂ ಬಾರದಿದ್ದಾಗ. ದಾಸಿಮಯ್ಯರು ಮನೆಗೆ ಮರಳಿ ಬರುವಾಗ  ಒಬ್ಬ ಜಂಗಮನು  ಆ ದಿವ್ಯಾಂಬರವನ್ನು  ಬೇಡುತ್ತಾನೆ. ದಾಸಿಮಯ್ಯ ಒಂಚೂರು ವಿಚಾರಿಸದೆ ಅದನ್ನು ಜಂಗಮನಿಗೆ ಕೊಟ್ಟು  ನಮಸ್ಕರಿಸಿ ಬಿಡುತ್ತಾನೆ. ಜಂಗಮನು ಆ ದಿವ್ಯಾಂಬರವನ್ನು ದಾಸಿಮಯ್ಯನ  ಎದುರಲ್ಲೇ  ಹರಿದು ಚೂರು, ಚೂರು, ಮಾಡಿ ಗಾಳಿಯಲ್ಲಿ ತೂರುತ್ತಾನೆ. ಆಗ ದಾಸಿಮಯ್ಯನು ಸ್ವಲ್ಪವೂ ವಿಚಲಿತನಾಗದೇ ಮಂದಹಾಸದಿಂದ ನಗುತ್ತಿದ್ದಾಗ , ಆಗ ಆ ಜಂಗಮ ನಿನಗೆ ಕಿಂಚಿತ್ ಕೂಡ ಕೋಪ ಬರಲಿಲ್ಲವೇಕೆ ಎಂದು ಕೇಳುತ್ತಾನೆ, 

ಆಗ ದಾಸಿಮಯ್ಯನು; ನನ್ನಲ್ಲಿರುವ ವರೆಗೆ ಅದು ನನ್ನದಾಗಿತ್ತು ನಾನು ಜಂಗಮನಿಗೆಂದು ಕೊಟ್ಟಾಗ ಅದು ನಿನ್ನ ವಸ್ತುವಾಗಿದೆ ಅದರ ಮೇಲೆ ನನಗೆ ಯಾವುದೇ ಅಧಿಕಾರವಾಗಲೇ ವ್ಯಾಮೋಹವಾಗಲಿ ನನಗಿಲ್ಲ. ಅದನ್ನು ಏನಾದರೂ ಮಾಡಿ  ಎಂದು    ಅವನು ಜಂಗಮನನ್ನು ಮನೆಗೆ  ಕರೆದುಕೊಂಡು ಹೋಗಿ ಸತ್ಕರಿಸುತ್ತಾನೆ.  ದಾಸಿಮಯ್ಯ ದಂಪತಿಗಳ ಜಂಗಮ ನಿಷ್ಠೆಗೆ ಸಂಪ್ರೀತನಾಗಿ ಜಂಗಮನು  ಅವರಿಗೆ ತವನಿಧಿ (ಅಕ್ಷಯ ಪಾತ್ರೆಯನ್ನು) ದಯಪಾಲಿಸಿ ಬಯಲಾಗುತ್ತಾನೆ. ತವನಿಧಿ ಪಡೆದುಕೊಂಡ ಆ ದಂಪತಿಗಳು ನೊಂದು ಬಂದ ದೀನ ದಲಿತರಿಗೆ ಸಾಧು ಸಂತರಿಗೆ ಶರಣರಿಗೆ ದಾಸೋಹ ಮಾಡುತ್ತಿರುವಾಗ ಒಬ್ಬ ಜಂಗಮ ತವನಿಧಿಯನ್ನೇ ಬೇಡಲು ಅದನ್ನೂ ಕೂಡ ಕೊಟ್ಟು, ಕಾಯಕದಿಂದ ಬಂದದನ್ನು ದಾಸೋಹದಲ್ಲಿ ವಿನಯೋಗಿಸಿ ಶರಣ ದಂಪತಿಗಳಾದ ಜೇಡರ ದಾಸಿಮಯ್ಯ_ದುಗ್ಗಳ್ಳೆಯವರು ಅತ್ಯಂತ ಅನ್ಯೂನ್ಯತೆಯಿಂದ ಬದುಕಿ ಬಾಳಿ ನಮ್ಮೆಲ್ಲ ಯುವಕ ಯುವತಿಯರಿಗೆ ಮಾದರಿಯಾಗಿದ್ದಾರೆ,.👏🏻👏🏻



              ✍🏾ವಿಶೇಷ ಲೇಖನ

          -;ಲೋಕೇಶ್ ಎನ್ ಮಾನ್ವಿ.

                -/ 9972536176







ಮುಂದಿನ ಲೇಖನ…


‘ಕಾಯಕವೇ ಪ್ರಾಣವಾದ  ಆಯ್ದಕ್ಕಿ  ಲಕ್ಕಮ್ಮ_ಮಾರಯ್ಯನವರು’

Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.