‘ಶರಣರದ್ದು ಸಂಸಾರದಲ್ಲೇ ಸದ್ಗತಿ ಕಾಣುವ ಸಾರ್ಥಕ ಬದುಕು’ 🙏🏻👍🏻
ಓಂ ಶ್ರೀಗುರುಬಸವಲಿಂಗಾಯ ನಮಃ
‘ಶರಣರದ್ದು ಸಂಸಾರದಲ್ಲೇ ಸದ್ಗತಿ ಕಾಣುವ ಸಾರ್ಥಕ ಬದುಕು’ 🙏🏻🙏🏻👍🏻👍🏻
✍🏻 -;#ವಿಶ್ವಗುರು_ಬಸವಣ್ಣನವರು.
#ಭಾವಾರ್ಥ-:
ಶರಣರು ಸಂನ್ಯಾಸತ್ವವನ್ನು ಒಪ್ಪುವುದಿಲ್ಲ,
ನೀರಿಗಿಳಿಯದೆ ಈಜು ಕಲಿಯದೆ, ಸಾಗರವನ್ನು ದಾಟಲು ಹೇಗೆ ಸಾಧ್ಯವಿಲ್ಲವೊ.
ಹಾಗೇ ಸಂಸಾರಕ್ಕೆ ಹೆದರಿ ಸೋತು ಸಂನ್ಯಾಸಿಯಾದೆನೆಂದರೆ, ಈ ಭವ ಸಾಗರವನ್ನು ದಾಟಲು ಸಾಧ್ಯವೇ ಇಲ್ಲ.
ಹನ್ನೆರೆಡನೇ ಶತಮಾನದ ಬಹುತೇಕ ಶರಣರು ಸಂಸಾರಿಕರೆ ಆಗಿದ್ದಾರೆ,
ಸತಿಪತಿಗಳಾಗಿ ಆದರ್ಶಮಯವಾಗಿ ಬದುಕಿ ಶಾಶ್ವತ ಅಜರಾಮರಾದರು ಶರಣ ದಂಪತಿಗಳು.
‘ಬಸವಣ್ಣ- ನೀಲಾಂಬಿಕೆ’
‘ದಾಸಿಮಯ್ಯ- ದುಗ್ಗಳೆ’
‘ಆಯ್ದಕ್ಕಿ ಲಕ್ಕಮ್ಮ- ಮಾರಯ್ಯ’
‘ಹರಳಯ್ಯ- ಕಲ್ಯಾಣಮ್ಮ’
‘ಮೋಳಿಗೆಯ ಮಾರಯ್ಯ- ಮಹಾದೇವಿ’
‘ಹಡಪದ ಅಪ್ಪಣ್ಣ- ಲಿಂಗಮ್ಮ’
ಹೀಗೇ ಶರಣ- ಶರಣೆಯರು ನಮಗೆಲ್ಲ ಮಾದರಿಯಾಗಿದ್ದರೆ.
ಸತಿ ಪತಿಗಳಿಬ್ಬರು ಬಿನ್ನವಿಲ್ಲದಿರಬೇಕು, ಎರಡು ಕಣ್ಣುಗಳು ಹೇಗೆ ಏಕ ದೃಷ್ಟಿಯಿಂದ ಅಂಗೈಯ ಲಿಂಗವನು ನೋಡುತ್ತವೆಯೊ ಹಾಗೇ ಸತಿಪತಿಗಳ ದೇಹ ಬಿನ್ನವಾದರೂ ಭಾವ ಒಂದೇ ಇರಬೇಕು, ಜೀವವೇ ಶಿವನೆಂದಿರಬೇಕು, ಸತಿಪುರುಷರಿಬ್ಬರೂ ಸನ್ಮಾರ್ಗದಲ್ಲಿ ನಡೆದು, ಕಾಯಕ ಜೀವಿಗಳಾಗಿ ಅತ್ಯಂತ ಅನ್ಯೂನ್ಯತೆಯಿಂದ ಜೀವಿಸಿ,
ಒಬ್ಬರ ತಪ್ಪಿದ್ದರೆ; ಇನ್ನೊಬ್ಬರು ತಿದ್ದಿ ತೀಡಿ ಸನ್ಮಾರ್ಗದಲ್ಲಿ ಮುನ್ನಡೆಸಬೇಕು,
ಕೆಸರಿನಲ್ಲಿದ್ದರೂ ಕಮಲ ಹೇಗೆ ಆ ಕೆಸರನ್ನು ತನ್ನ ಒಂದು ದಳಕ್ಕೂ ಸೊಂಕದಂತೆ. ಅರಳಿ ಮೇಲೇರುತ್ತದೆಯೊ ಹಾಗೆ ಸಂಸಾರದಲ್ಲಿದ್ದೂ ಸನ್ಮಾರ್ಗದಲ್ಲಿ ನಡೆಯುವುದ ಕಲಿಸಿದರು ಶರಣರು, ಸತಿಪುರುಷರಿಬ್ಬರೂ ಸತ್ಯ ಮಾರ್ಗದಲ್ಲಿ ಸದ್ಭಕ್ತರಾಗಿ ನಡೆದು ಸಾರ್ಥಕವಾಗಿ ಬದುಕಿ-ಬಾಳಿವುದೇ ಕೂಡಲಸಂಗನ ಕೂಡುವ ಕೂಟ ಅದುವೇ(ಸಾರ್ಥಕ ಜೀವನದ ಸದ್ಗತಿ) ಎನ್ನುತ್ತಾರೆ #ವಿಶ್ವಗುರು_ಬಸವಣ್ಣನವರು..
ವಿಶ್ಲೇಷಣೆ
✍🏻-: #ಲೋಕೇಶ್_ಎನ್_ಮಾನ್ವಿ.
Comments
Post a Comment