‘ಗುರುವಿಲ್ಲದ ಗುಡ್ಡ ಬಸವಣ್ಣ’ ವಿಶ್ಲೇಷಣೆ- ಲೋಕೇಶ್ _ಎನ್_ಮಾನ್ವಿ.

ಅ ಣ್ಣ ಬ ಸವಣ್ಣನವರ ವ ಚನದಲ್ಲಿ ‘ ಗು ರು ’ ಎ ನ್ನ ಗುರು ಪರಮಗುರು ನೀವೆ ಕಂಡಯ್ಯ , ಎ ನ್ನ ಗತಿಮತಿ ನೀವೆ ಕಂಡಯ್ಯ , ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ , ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ . ಕೂಡಲಸಂಗಮದೇವಾ , ನೀವೆನಗೆ ಗುರು , ನಾ ನಿಮಗೆ ಶಿಷ್ಯನೆಂಬುದನು ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು . -; # ವಿ ಶ್ವಗುರು_ಬಸವಣ್ಣನವರು. ಭಾ ವಾರ್ಥ- ಲಿಂ ಗಾಯತ ಧರ್ಮದಲ್ಲಿ ಅಷ್ಟಾವರಣ ಎಂಟು ಆವರಣಗಳು ಪ್ರಮುಖವಾಗಿವೆ , ಇದರಲ್ಲಿ ಮೊದಲನೆಯದು ‘ ಗುರು ’ ಪರಮ ಜ್ಞಾನಿಗೆ ತನ್ನ ಅರಿವೇ ಗುರು , ಸಾಧಕನಿಗೆ ತನ್ನ ನಿಜದ ನಿಲುವನ್ನು ತೋರಬಲ್ಲವನೇ ಗುರು , ಇನ್ನು ಬಸವಣ್ಣನವರಿಗೆ ಯಾರು ಗುರು ..? ಎಂದರೆ ತನ್ನರಿವೇ ಗುರು , ಗುರುವಿಲ್ಲದ ಗುಡ್ಡ ಬಸವಣ್ಣ , ಜಗತ್ ಗುರುವಾದ ಬಸವಣ್ಣ , ತನಗೆ ಯಾರು ಗುರು ಎಂಬುದನ್ನು ಮೇಲಿನ ವಚನದಲ್ಲಿ ಹೇಳಿದ್ದಾರೆ ,. ‘ ಎ ನ್ನ ಗುರು ಪರಮಗುರು ನೀವೆ ಕಂಡಯ್ಯಾ ’ ಇಲ್ಲಿ ಬಸವಣ್ಣನವರು ತಮ್ಮ ಗುರು ಪರಮಗುರು ಯಾರೆಂದರೆ ಕೂಡಲಸಂಗಮದೇವನಿಗೆ ಗುರುವೆಂದು ಕರೆಯುತ್ತಾರೆ , ಬಾಲ್ಯದಲ್ಲೇ ಮನೆ ಬಿಟ್ಟ ಅಪ್ಪ ಬಸವರು ಕೂಡಲಸಂಗಮದಲ್ಲಿ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದರೂ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಕಲ ಭಾಷ ವಿ...