‘ಗುರುವಿಲ್ಲದ ಗುಡ್ಡ ಬಸವಣ್ಣ’ ವಿಶ್ಲೇಷಣೆ- ಲೋಕೇಶ್ _ಎನ್_ಮಾನ್ವಿ.
ಅಣ್ಣ ಬಸವಣ್ಣನವರ ವಚನದಲ್ಲಿ ‘ಗುರು’
ಎನ್ನ ಗುರು ಪರಮಗುರು ನೀವೆ ಕಂಡಯ್ಯ,
ಎನ್ನ ಗತಿಮತಿ ನೀವೆ ಕಂಡಯ್ಯ,
ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ,
ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ.
ಕೂಡಲಸಂಗಮದೇವಾ,
ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು
ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು.
-; #ವಿಶ್ವಗುರು_ಬಸವಣ್ಣನವರು.
ಭಾವಾರ್ಥ-
ಲಿಂಗಾಯತ ಧರ್ಮದಲ್ಲಿ ಅಷ್ಟಾವರಣ ಎಂಟು ಆವರಣಗಳು ಪ್ರಮುಖವಾಗಿವೆ,
ಇದರಲ್ಲಿ ಮೊದಲನೆಯದು ‘ಗುರು’
ಪರಮ ಜ್ಞಾನಿಗೆ ತನ್ನ ಅರಿವೇ ಗುರು, ಸಾಧಕನಿಗೆ ತನ್ನ ನಿಜದ ನಿಲುವನ್ನು ತೋರಬಲ್ಲವನೇ ಗುರು,
ಇನ್ನು ಬಸವಣ್ಣನವರಿಗೆ ಯಾರು ಗುರು..? ಎಂದರೆ ತನ್ನರಿವೇ ಗುರು, ಗುರುವಿಲ್ಲದ ಗುಡ್ಡ ಬಸವಣ್ಣ, ಜಗತ್ ಗುರುವಾದ ಬಸವಣ್ಣ,
ತನಗೆ ಯಾರು ಗುರು ಎಂಬುದನ್ನು ಮೇಲಿನ ವಚನದಲ್ಲಿ ಹೇಳಿದ್ದಾರೆ,.
‘ಎನ್ನ ಗುರು ಪರಮಗುರು ನೀವೆ ಕಂಡಯ್ಯಾ’
ಇಲ್ಲಿ ಬಸವಣ್ಣನವರು ತಮ್ಮ ಗುರು ಪರಮಗುರು ಯಾರೆಂದರೆ ಕೂಡಲಸಂಗಮದೇವನಿಗೆ ಗುರುವೆಂದು ಕರೆಯುತ್ತಾರೆ,
ಬಾಲ್ಯದಲ್ಲೇ ಮನೆ ಬಿಟ್ಟ ಅಪ್ಪ ಬಸವರು ಕೂಡಲಸಂಗಮದಲ್ಲಿ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದರೂ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಕಲ ಭಾಷ ವಿದ್ಯಾ ಪಾರಂಗತರಾಗಿದ್ದರು, ಅವರ ಪ್ರಕಾರ ಕೂಡಲಸಂಗಮದೇವ ಎಂಬುದು ತನ್ನ ತಾನರಿದವನ ಸ್ವಯಂ ಅರಿವು ಮತ್ತು ಜ್ಞಾನವಾಗಿದೆ,
ತನ್ನ ಅರಿವಿನ ಮೂಲ ವಸ್ತು ‘ಅರಿವಿನ ಬೀಜ’ವೇ ತನ್ಮ ದೈವವಾದ ಸಂಗಯ್ಯನೇ ಬಸವಣ್ಣನಿಗೆ ‘ಗುರು’ ಈ ಅರಿವೆಂಬ ಗುರುವೇ ಬಸವಣ್ಣನವರಿಗೆ ಗತಿಯು, ಮತಿಯು, ತನ್ನ ಅರಿವಿನ ಜ್ಯೋತಿಯೆಂದು ಹೇಳುತ್ತಾರೆ,
ಮತ್ತೆ ಮುಂದುವರೆದು ಎನ್ನ ಅಂತರಂಗದ ಮಹವು ನೀನೇ ಕಂಡಯ್ಯ ಎನ್ನುತ್ತಾರೆ ಎನ್ನ ಅಂತರಂಗದಲ್ಲಿ ಮತ್ತು ಈ ಇಡೀ ಸೃಷ್ಠಿಯಲ್ಲಿ ಓತಪ್ರೋತವಾಗಿ ತುಂಬಿದ ಅಸಾಧ್ಯವಾದ ಅಧ್ವಿತೀಯ ಅಮೋಘ ಶಕ್ತಿಯು ನೀವೆ ಕೂಡಲಸಂಗಮದೇವ ಎನ್ನುತ್ತಾ,.
ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು
ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು.
ಸೃಷ್ಠಿಕರ್ತನಾದ ನಿರಾಕಾರ ದೇವನೇ ನಿನ್ನ ನಿಜ ಸ್ಥತಿಯ ಅರಿವು, ಎನಗೆ ಗುರುವಾಗಿ ಉಪದೇಶಿಸುತ್ತಿದೆ, ನೀವೆನಗೆ ಗುರುವಾಗಿ ಅರಿವಾಗಿ, ವಿದ್ಯೆ, ಬುದ್ಧಿ, ಜ್ಞಾನ ಸಿದ್ಧಿಯಾಗಿ ಬಂದೆನ್ನ ಸಲಹಿದಿರಿ ನಾನು ನಿಮ್ಮ ಶಿಷ್ಯನೆಂಬುದ ನಿಮ್ಮ ಶರಣ ಸಿದ್ಧರಾಮಯ್ಯರೇ ಬಲ್ಲರು, ಎಂದು ತನಗೆ ತನ್ನಾತ್ಮದ ಅರಿವೇ ತನ್ನ ನಿಜವಾದ ಗುರುವೆಂಬುದನ್ನು ತಿಳಿಸುತ್ತಾರೆ,.
ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ
-/ 9972536176
Comments
Post a Comment