ಅಂತರಂಗ ಶುದ್ಧವಿಲ್ಲದವರ ಭಕ್ತಿ ಹೆಂಡದ ಮಡಿಕೆಯ ಹೊರಗೆ ತೊಳೆದಂತೆ ಎನ್ನುತ್ತಾರೆ ವಿಶ್ವಗುರು ಬಸವಣ್ಣನವರು, ವಿಶ್ಲೇಷಣೆ- ಲೋಕೇಶ್_ಎನ್_ಮಾನವಿ
ಓಂ ಶ್ರೀಗುರುಬಸವಲಿಂಗಾಯ ನಮಃ
ಗಂಡ ಶಿವಲಿಂಗದೇವರ ಭಕ್ತ,ಹೆಂಡತಿ ಮಾರಿ ಮಸಣಿಯ ಭಕ್ತೆ. ಗಂಡ ಕೊಂಬುದು ಪಾದೋದಕ-ಪ್ರಸಾದ ಹೆಂಡತಿ ಕೊಂಬುದು ಸುರೆ-ಮಾಂಸ. ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ ಹೆಂಡದ ಮಡಿಕೆಯ ಹೊರಗೆ ತೊಳೆದಂತೆ ಕೂಡಲಸಂಗಮದೇವಾ.
-;ವಿಶ್ವಗುರು ಬಸವಣ್ಣನವರು
ಭಾವಾರ್ಥ-
ಶರಣರ ದೃಷ್ಠಿಯಲ್ಲಿ ಅರಿವು ಪತಿಯಾಗಿ, ಮನಸ್ಸು ಸತಿಯಾಗಿ ಬದುಕು ಅರಿವಿನ ಮಾರ್ಗದಲ್ಲಿ ನಡೆಯಬೇಕು ಎಂಬುದಾಗಿತ್ತು,
ಇಲ್ಲಿ ಗಂಡ ಎಂದರೆ, (ಅರಿವು) ಎಂದರ್ಥ, ಅಂತಃಕರಣದ ಅರಿವು ಇಷ್ಟಲಿಂಗದ ಭಕ್ತನಾಗು ಎನ್ನುತ್ತಿದೆ, ಆದರೆ ಹೆಂಡತಿಯಾದ ಮನಸ್ಸು ಮಾರಿಮಸಣಿಯ ಭಕ್ತನಾಗು ಎನ್ನುತ್ತಿದೆ, ಏಕಾಗಿ ಹೀಗೆ,? ಮುಂದೆ ನೋಡೋಣ ಬನ್ನಿ…
ಗಂಡ-(ಅರಿವಿನ) ಹಾದಿಯಲ್ಲಿ ಹೋದರೆ ಲಭಿಸುವುದು ಪಾದೋದಕ ಪ್ರಸಾದ, ಪಾದೋದಕ ಕೊಂಬುದು ಎಂದರೆ ಅದೊಂದು ಚೈತನ್ಯ ಕಾರುಣ್ಯ ಪಡೆದಂತೆ, ಇನ್ನು ಪ್ರಸಾದವೆಂದರೆ ಬಂದುದನ್ನು ಸಂತೃಪ್ತಿಯಿಂದ ಸ್ವೀಕರಿಸಿ ಆನಂದಿಸುವ ಪರಿ ಬದುಕೇ ಪ್ರಸಾದಮಯ,. ಇಲ್ಲಿ ಸಂತೃಪ್ತ ಜೀವನಕ್ಕೆ ಬೇಕಾದ ಮೌಲ್ಯಯುತ ಜ್ಞಾನದ ಅರಿವಿದೆ ಅದುವೇ ಪತಿ,
ಹೆಂಡತಿ ಕೊಂಬುದು ಸುರೆ-ಮಾಂಸ.
ಹೆಂಡತಿ ಎಂದರೆ- (ಮನಸ್ಸು) ಇಲ್ಲಿ ಮನಸ್ಸು ಬಯಸುವುದು ಮದ್ಯ ಮಾಂಸ, ಇಲ್ಲಿ ಮದ್ಯವೆಂದರೆ ಕುಡಿತದ ಅಮಲು ಮಾತ್ರವಲ್ಲ, ಇದಕ್ಕಿಂತ ವಿನಾಶಕಾರಿ, ಜಾತಿ ಧರ್ಮ ಅಂತಸ್ತು ಪ್ರತಿಷ್ಠೆಯ ಅಮಲು ಕೂಡ ಬಹಳ ಡೇಜರ್, ಇವು ಕೂಡ ಅತ್ಯಂತ ವಿನಾಶಕಾರಿಯಾಗಿವೆ, ಮತ್ತು ಮಾಂಸವೆಂದರೆ ಕೇವಲ ಸತ್ತ ಪ್ರಾಣಿಯ ದೇಹವಲ್ಲ, Negative things ಕೆಟ್ಟ ಆಲೋಚನೆ ಕೂಡ ಸತ್ತ ಪ್ರಾಣಿಯ ದೇಹಕ್ಕಿಂತ ಕೊಳಕಾಗಿರುತ್ತವೆ, ಮನಸ್ಸಿನಲ್ಲಿ ಇಂಥಹಾ ಆಲೋಚನೆಗಳಲ್ಲಿ ಬಿದ್ದರೆ ಅದು ಬದುಕಿನ ವಿನಾಶಕ್ಕೆ ನಾಂದಿ ಹಾಡಿದಂತೆ,
ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ ಹೆಂಡದ ಮಡಿಕೆಯ ಹೊರಗೆ ತೊಳೆದಂತೆ ಕೂಡಲಸಂಗಮದೇವಾ.
ಹೆಂಡ ತುಂಬಿದ ಮಡಕೆಯನ್ನು ನೀರಿನಿಂದ ಅದೆಷ್ಟೇ ತೊಳೆದರೂ, ಮಡಕೆಯ ಮೇಲೆ ಹಾಲು ಸುರಿದರು, ಮಡಕೆಯ ಸುತ್ತ ಜೇನು ಚೆಲ್ಲಿದರೂ , ಅದರಲ್ಲಿನ ಸುರೆ ಹೆಂಡದ ಗುಣ ಮಾತ್ರ ಕಿಂಚಿತ್ತೂ ಕಡಿಮೆಯಾಗುವುದಿಲ್ಲ, ಅದರಂತೆಯೇ ಮನುಷ್ಯನೊಳಗಿನ ಅಂತರಂಗದಲ್ಲಿ ಹತ್ತು ಹಲವಾರು ದುರ್ವಿಚಾರ ತುಂಬಿದಾಗ ಮನಸ್ಸು ಸದಾ ಕೊಳಕಾಗಿರುತ್ತದೆ, ಈ ಮನಸ್ಸನ್ನು ಶುಚಿಗೊಳಿಸಬೇಕೆಂದು ಹೊರಗಿನ ದೇಹವನ್ನು ತೊಳೆದರೆ ಅಂತರಂಗ ಶುದ್ಧಿಯಾಗುವುದಿಲ್ಲ, ಅದು ಹೆಂಡದ ಮಡಕೆಯನ್ನು ಹೊರಗೆ ತೊಳೆದಂತೆ ಅಷ್ಟೇ, ಅದನ್ನು ಬಿಟ್ಟು ಮನಸ್ಸೆಂಬ ಹೆಂಡತಿಯು, ಅರಿವೆಂಬ ಗಂಡನ ಕೈಯಿಡಿದು ಅಂತರಂಗ ಶುದ್ಧರಂಗ ಬಹಿರಂಗ ಶುದ್ಧರಾಗಿ ಶರಣ ಪಥದಲ್ಲಿ ಮುನ್ನಡೆಯಲು ಸದಾ ಉತ್ಸುಕರಾಗಿರಬೇಕೆನ್ನುತ್ತಾರೆ ಅಪ್ಪ ಬಸವಣ್ಣನವರು,..👏🏻👏🏻
✍🏾ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ
-/9972536176
Comments
Post a Comment