ಅಂದಣವನೇರಿದ ಸೊಣಗನಂತೆ, ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ -; ಲೋಕೇಶ್ ಎನ್ ಮಾನ್ವಿ.
ಶ್ರೀಗುರುಬಸವಲಿಂಗಾಯ ನಮಃ
ಅಂದಣವನೇರಿದ ಸೊಣಗನಂತೆಕಂಡರೆ ಬಿಡದು ತನ್ನ ಮುನ್ನಿನ ಸ್ವಭಾವವನುಸುಡು, ಸುಡು; ಮನವಿದು ವಿಷಯಕ್ಕೆ ಹರಿವುದು,ಮೃಡ, ನಿಮ್ಮನನುದಿನ ನೆನೆಯಲೀಯದು.ಎನ್ನೊಡೆಯನೇ, ಕೂಡಲಸಂಗಮದೇವ,ನಿಮ್ಮ ಚರಣವ ನೆನೆವಂತೆ ಕರುಣಿಸು,ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ.
✍🏾-ವಿಶ್ವಗುರು ಬಸವಣ್ಣನವರು.
ಭಾವಾರ್ಥ-
#ಅಂದಣವನೇರಿದ ಸೊಣಗನಂತೆ
#ಕಂಡರೆ ಬಿಡದು ತನ್ನ ಮುನ್ನಿನ ಸ್ವಭಾವವನು
#ಸುಡು, ಸುಡು; ಮನವಿದು ವಿಷಯಕ್ಕೆ ಹರಿವುದು,
ಅಂದಣವೆಂದರೆ ಪಲ್ಲಕ್ಕಿ, ಒಂದೊಮ್ಮೆ ಬಂಗಾರದ ಪಲ್ಲಕ್ಕಿಯಲ್ಲಿ ಕೂಡಲು ಯೋಗ್ಯವಾದ ಆಮಂತ್ರಿತ ವ್ಯಕ್ತಿ ಬರದಿದ್ದಾಗ (ಸೊಣಗ) ನಾಯಿಯೊಂದನ್ನು ತಂದು ತರತರದ ಬಣ್ಣಗಳನ್ನು ಹಚ್ಚಿ ಸುಂದರವಾದ ವಸ್ತ್ರಗಳನ್ನು ಹೊದಿಸಿ, ಮೇಲೆ ಆಭರಣಗಳನ್ನು ಹಾಕಿ,
ಯಾರಿಗೂ ಅದರ ಗುರುತು ಸಿಗದ ಹಾಗೆ ಅಲಂಕರಿಸಿ ಪಲ್ಲಕ್ಕಿಯಲ್ಲಿ ಕುಡಿಸಿ ಇದೋ ಮೆರವಣಿಗೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ,
ಅಲ್ಲೇ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಸತ್ತ ಪ್ರಾಣಿಯ ಮೂಳೆಯನ್ನು ಕಂಡ ತಕ್ಷಣ ನಾಯಿ ತನ್ನ ಮುನ್ನಿನ ಸ್ವಭಾವವನ್ನು ಬಿಡದೇ ಬಂಗಾರದ ಪಲ್ಲಕ್ಕಿಯಲ್ಲಿ ಕುಳುತಿದ್ದರೂ, ಮೂಳೆಯತ್ತ ಟಣಕ್ ಎಂದು ಜಿಗಿದು ಹೋಗುವಂತೆ,
ಇನ್ನೊಂದೆಡೆ ಅಧಿಕಾರವೆಂಬ ಪಲ್ಲಕ್ಕಿಯಲ್ಲಿ ,
ಯೋಗ್ಯರಲ್ಲದವರು ಕುಳಿತರೂ ಹಾಗೇ,.
ಸುಡು ಸುಡು ಮನವಿದು ವಿಷಯಕ್ಕೆ ಹರಿವುದು,
ನಾಯಿಯನ್ನು ತಂದು ಪಲ್ಲಕ್ಕಿಯಲ್ಲಿ ಕೂಡಿಸಿದ್ದರೂ ಮೂಳೆಯನ್ನು ಕಂಡಾಗ ಅದು ತನ್ನ ಸ್ವಭಾವ ಬಿಡದೇ ಜಿಗಿದು ಹೋಗುವಂತೆ,
ಮನುಷ್ಯನಿಗೆ ಎಂಥಹಾ ಹಿತನುಡಿಗಳನ್ನು ಹೇಳಿದರೂ, ಉಪದೇಶವಿತ್ತರೂ, ದೀಕ್ಷೆ ಕೊಟ್ಟರೂ, ಸಂಸ್ಕಾರವಿಲ್ಲದಿದ್ದಡೆ ನಾಯಿ ಮೂಳೆಯನ್ನು ಕಂಡಾಗ ಜಿಗಿದಂತೆ, ಮನುಷ್ಯನ ಮನಸ್ಸು ಲೋಕದ ಆಕರ್ಷಣೆಗೆ ಸುಳ್ಳು-ಮೋಸ, ಲಂಚಾ-ವಂಚನೆಗೆ,ಆಕರ್ಷಿತವಾಗಿ ವಿಷಯವಾಸನೆಯಲ್ಲಿ ಸುಡುತ್ತದೆ,
#ಮೃಡ, ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯನೇ, ಕೂಡಲಸಂಗಮದೇವ,
ನಿಮ್ಮ ಚರಣವ ನೆನೆವಂತೆ ಕರುಣಿಸು,
ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ.
ಮೃಡ, ಎಂದರೆ ಮೃತ್ಯೂ ಭಯವಿಲ್ಲದ ಪರಮಚೈತನ್ಯಾತ್ಮಕ ಸರ್ವವ್ಯಾಪಿಯಾದ ನಿಜ ದೇವನೇ, ಈ ಮನಸ್ಸು ನಿನ್ನನ್ನು ಅನುದಿನವು ಅನುಕ್ಷಣವೂ ನೆನೆಯಲು ಬಿಡದೇ ಲೋಕದ ಭ್ರಮೆಯಲ್ಲೇ ಮುಳುಗುವಂತೆ ಮಾಡಿದೆ ದೇವ, ಹೇ ಎನ್ನೊಡೆಯನೇ ಕೂಡಲಸಂಗಮದೇವ, ಈ ಲೋಕದ ಭ್ರಾಂತಿಯ ಬಿಡಿಸಿ , ಎನ್ನ ಮನವು ಸದಾ ನಿಮ್ಮ (ಸದಾಚಾರದಲ್ಲಿ) ಚರಣವ ನೆನೆವಂತೆ ಕರುಣಿಸು ದೇವ ಕರುಣಾಕರನೇ ಸೆರಗೊಡ್ಡಿ ಬೇಡುವೆ, ಕಾಯುವುದು ನಿಮ್ಮ ಧರ್ಮವೆಂದು ಬಿನ್ನಹಿಸುತ್ತಾರೆ ಅಪ್ಪ ಬಸವಣ್ಣನವರು,..👏🏻👏🏻
✍🏾ವಿಶ್ಲೇಷಣೆ-;
ಲೋಕೇಶ್_ಎನ್_ಮಾನ್ವಿ.
-/ 9972536176
Comments
Post a Comment