ಕಟ್ಟೇ ಕಟ್ಟುತ್ತೇವೆ ಕಲ್ಯಾಣ, ನಾವ್ ಮತ್ತೆ ಕಟ್ಟುತ್ತೇವೆ ಕಲ್ಯಾಣ, ✍🏾-ಲೋಕೇಶ್ ಎನ್ ಮಾನ್ವಿ.
ಕಟ್ಟೇ ಕಟ್ಟುತ್ತೇವೆ ಕಲ್ಯಾಣ,
ನಾವ್ ಮತ್ತೆ ಕಟ್ಟುತ್ತೇವೆ ಕಲ್ಯಾಣ,
ದುಷ್ಟರ ದೂಳೆಬ್ಬಿಸಿ, ಭ್ರಷ್ಟರ ಬಡೆದೋಡಿಸಿ, ಜಾತಿ ಬೇಧಗಳ ಬೇಲಿ ಸುಟ್ಟು ಸ್ವಚ್ಚ ಮಾಡುತ್ತೇವೆ ಕಲ್ಯಾಣ,
ನಾವ್ ಮತ್ತೆ ಕಟ್ಟುತ್ತೇವೆ ಕಲ್ಯಾಣ,
ನಾವ್ ಕಟ್ಟೇ ಕಟ್ಟುತ್ತೇವೆ ಕಲ್ಯಾಣ,
ಮೌಢ್ಯತೆ ಅಸಮಾನತೆಯ ಅಡ್ಡ ಗೋಡೆ ತಗೆದು,
ಕಟ್ಟುತ್ತೇವೆ ಕಲ್ಯಾಣ,
ನಾವ್ ಮತ್ತೆ ಕಟ್ಟುತ್ತೇವೆ ಕಲ್ಯಾಣ,
ಮತ್ತೆ ಬರುತಾರ ಅಮರ ಗಣಂಗಳು,
ಒಟ್ಟುಕೂಡುತಾರ ಸರ್ವ ಶರಣ ಬಂಧುಗಳು,
ಕಟ್ಟೇ ಕಟ್ಟುತ್ತೇವೆ ಕಲ್ಯಾಣ,
ನಾವ್ ಮತ್ತೆ ಕಟ್ಟುತ್ತೇವೆ ಕಲ್ಯಾಣ,
ಬಂದೇ ಬರುತಾರ ಬಸವಣ್ಣ ಮತ್ತೆ ಬರುತಾರ ಚೆನ್ನಬಸವಣ್ಣ,
ಗುಡುಗುತ ಬರುವ ಮಾಚಯ್ಯ,
ಸಿಡಿಯುತ ಬರುವ ಚೌಡಯ್ಯ,
ಪ್ರಸಾದವ ತರುವ ಚೆನ್ನಯ್ಯಾ,
ಚಂಡಮಾರುತವಾಗಿ ಬರುವ ಅಲ್ಲಮ ಪ್ರಭುರಾಯ,
ಕಟ್ಟೇ ಕಟ್ಟುತ್ತೇವೆ ಕಲ್ಯಾಣ,
ನಾವ್ ಮತ್ತೆ ಕಟ್ಟುತ್ತೇವೆ ಕಲ್ಯಾಣ,
ಮತ್ತೆ ಕಾಣುವೆವು ಅನುಭವ ಮಂಟಪ , ಅರಿವಿನ ಮನೆ, ಅಪ್ಪಬಸವನ ಮಹಾಮನೆ,
ಕಟ್ಟೇ ಕಟ್ಟುವೆವು ಕಲ್ಯಾಣ ನಾವ್ ಮತ್ತೆ ಕಟ್ಟುವೆವು ಕಲ್ಯಾಣ,
ಸೂರ್ಯ ಚಂದ್ರರ ಸಾಕ್ಷಿಗೂ ಮತ್ತೆ ಬಸವಣ್ಣ ಬರುವ ಬಂದೇ ಬರುವ,,
ಅಪ್ರಮಾಣ ಚಿನ್ಮಯಲಿಂಗದಿ ಅಸಂಖ್ಯಾತ ಅನುಯಾಯಿಗಳ ಹೃದಯದಲ್ಲಿ ಹುಟ್ಟಿ ಬರುವ ನಮ್ ಬಸವಣ್ಣ,
ರಚನೆ-; ಲೋಕೇಶ್ ಎನ್ ಮಾನ್ವಿ.
Comments
Post a Comment