Posts

Showing posts from November, 2026

💫 ಶರಣೆ ಧೂಪದ ಗೊಗ್ಗವ್ವೆಯವರ ವಚನದಲ್ಲಿ "ಲಿಂಗ ಸಮಾನತೆ" ಲೇಖನ- ಲೋಕೇಶ್ ಎನ್ ಮಾನ್ವಿ.

Image
  💫 ಶರಣೆ ಧೂಪದ ಗೊಗ್ಗವ್ವೆಯವರ ವಚನದಲ್ಲಿ                         "ಲಿಂಗ ಸಮಾನತೆ" ಇಡೀ ಜಗತ್ತು ಅಜ್ಞಾನದ ಅಂಧಕಾರದಲ್ಲಿ ಮುಳುಗಿರುವಾಗ, ತಮ್ಮ ವಚನಗಳ ಮೂಲಕ ಸುಜ್ಞಾನದ ಬೆಳಕನ್ನು ಪಸರಿಸಿ ಜಗಜ್ಯೋತಿಯಾಗಿ ಬೆಳಗಿದವರು ಬಸವಣ್ಣನವರು ಹಾಗೂ ಬಸವಾದಿ ಶರಣರು. ಜಾತಿ, ಧರ್ಮ, ವರ್ಗ, ವರ್ಣ ಮತ್ತು ಲಿಂಗ ತಾರತಮ್ಯಗಳನ್ನು ಖಂಡಿಸಿ, ಸಮಸಮಾಜದ ಕನಸನ್ನು ಕಂಡು, ಅದನ್ನು ತಮ್ಮ ನಡೆ-ನುಡಿಗಳ ಮೂಲಕ ಸಾಕಾರಗೊಳಿಸಲು ಶ್ರಮಿಸಿದವರು ಬಸವಾದಿ ಶರಣರು. ಹನ್ನೆರಡನೇ ಶತಮಾನದಲ್ಲಿ ಪುರುಷ ವಚನಕಾರರಂತೆ ಮಹಿಳಾ ವಚನಕಾರ್ತಿಯರೂ ಕೂಡ ಮೂಢನಂಬಿಕೆಗಳ ವಿರುದ್ಧ ಗಟ್ಟಿಯಾದ ಧ್ವನಿ ಎತ್ತಿ, ಸುಜ್ಞಾನದ ಶರಧಿಯನ್ನು ಹರಿಸಿ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ. ಅಂತಹ ಶರಣ ಪರಂಪರೆಯಲ್ಲಿ ಬಂದ ಶರಣೆ ಧೂಪದ ಗೊಗ್ಗವ್ವೆಯವರು, ಅಕ್ಕಮಹಾದೇವಿಯವರಂತೆ ಧೈರ್ಯಶಾಲಿ, ವೈಚಾರಿಕ ಚಿಂತನೆಯುಳ್ಳ ವಚನಕಾರ್ತಿಯಾಗಿದ್ದರು. ಅವರು ತಮ್ಮ ವಚನಗಳ ಮೂಲಕ ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುತ್ತಾರೆ. ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕು. ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು. ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ ನಾಸ್ತಿನಾಥನು ಪರಿಪೂರ್ಣನೆಂಬೆ॥ ಗಂಡು ಮೋಹಿಸಿ ಹೆಣ್ಣನ್ನು ತನ್ನದಾಗಿಸಿಕೊಂಡಾಗ, ಆಕೆ ಪುರುಷನ ಒಡೆ...