ಸಂಸಾರದಲ್ಲೇ ಶಿವನನ್ನು ಕಂಡ ಶರಣ ಜೇಡರ ದಾಸಿಮಯ್ಯ ಮತ್ತು ಶರಣೆ ದುಗ್ಗಳೆಯವರ, ‘ಶರಣ ಸಂಸಾರಿಕ ಸೂತ್ರ’ ✍🏾ವಿಶೇಷ ಲೇಖನ-; ಲೋಕೇಶ್_ಎನ್_ಮಾನ್ವಿ.
ಓಂ ಶ್ರೀಗುರುಬಸವಲಿಂಗಾಯ ನಮಃ ಸಂಸಾರದಲ್ಲೇ ಶಿವನನ್ನು ಕಂಡ ಶರಣ ಜೇಡರ ದಾಸಿಮಯ್ಯ ಮತ್ತು ಶರಣೆ ದುಗ್ಗಳೆಯವರ , ‘ ಶರಣ ಸಂಸಾರಿಕ ಸೂತ್ರ ’ ಸಂಸಾರವನ್ನು ಕಷ್ಟವೆಂದಾಗಲಿ ; ದುಖಃವೆಂದಾಗಲಿ ; ನರಕವೆಂದಾಗಲಿ ; ಬಂಧನವೆಂದಾಗಲಿ ಕರೆದವರಲ್ಲ ನಮ್ಮ ಬಸವಾದಿ ಶಿವಶರಣರು , ಅದಕ್ಕೆ ಬದಲಾಗಿ ; ಸಂಸಾರವನ್ನು ಶಿವನನ್ನೊಲಿಸುವ ಸಾಧನವಾಗಿ ಕಂಡವರು ಶರಣರು . ಸಂಸಾರಿಕ ಶರಣರ ಬಗ್ಗೆ ನನಲ್ಲಿ ಹೆಚ್ಚು ಆಸಕ್ತಿ ಮೂಡಿಸಿದವರಲ್ಲಿ ಜೇಡರ _ ದಾಸಿಮಯ್ಯ ದುಗ್ಗಳೆಯವರು ಪ್ರಮುಖರು . ಇವರ ‘ ಶರಣ ಸಂಸಾರಿಕ ಸೂತ್ರವು ’ ನನಗೆ ಬಹಳ ಇಷ್ಟವಾದುದ್ದಾಗಿದೆ ,. ಸಂಸಾರಿಕರಾಗಬೇಕೆ ,? ಸನ್ಯಾಸಿಯಾಗಬೇಕೆ ,? ಸಂಸಾರಿಗಳಾದರೆ ಹೇಗೆ ಸಂತೃಪ್ತ ಜೀವನ ಸಾಗಿಸಬಹುದು, ಎಂಬ ಹಲವಾರು ಯುವಕರ ಗೊಂದಲಕ್ಕೆ ಇಲ್ಲಿ ದಾಸಿಮಯ್ಯನವರು ಪರಿಹಾರ ಸೂಚಿಸುತ್ತಾರೆ , ಮೊದಲನೆಯದಾಗಿ ‘ ಜೇಡರ ದಾಸಿಮಯ್ಯನವರು ಮಹಾನ್ ಶಿವಭಕ್ತರು , ಲಿಂಗ ನಿಷ್ಠರು , ಕಾಯಕ ಜೀವಿಗಳು ದಾಸೋಹ ಪ್ರೇಮಿಗಳಾದ ಶರಣರು ’ ಮೊದಲು ತಮ್ಮ ಮನಸ್ಸಿನಲ್ಲಿ ಸಂಸಾರಿಕರಾಗಲು ನಿರ್ಧರಿಸಿ ಕನ್ಯಾನ್ವೇಷಣೆಗೆ ‘ ಕನ್ಯಾ ನೋಡಲು ಸಿದ್ಧರಾಗುತ್ತಾರೆ ’ ಆದರೆ ದಾಸಿಮಯ್ಯನವರದ್ದು ಒಂದು ಷರತ್ತು ಇರುತ್ತದೆ; ( ನೀರು ಮತ್ತು ಸೌದ...