ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆನ್ನ ಬಾಳುವೆ -; ವಿಶ್ವಗುರು ಬಸವಣ್ಣನವರು, ವಿಶ್ಲೇಷಣೆ -ಲೋಕೇಶ್ ಎನ್ ಮಾನ್ವಿ.
ಓಂ ಶ್ರೀ ಗುರು ಬಸವಲಿಂಗಾಯ ನಮ:
‘ಆಸೆ ಮತ್ತು ಬದುಕಿನ ಗುರಿ’
ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆನ್ನ ಬಾಳುವೆ
ಸಂಸಾರಸಂಗವ ಬಿಡದು ನೋಡೆನ್ನ ಮನವು.
ಈ ನಾಯಿತನವ ಮಾಣಿಸು ಕೂಡಲಸಂಗಮದೇವಯ್ಯ ನಿಮ್ಮ ಧರ್ಮ.
✍🏾-;ವಿಶ್ವಗುರು ಬಸವಣ್ಣನವರು•
__________________________
ಭಾವಾರ್ಥ-
ಹಿಂದಿನ ಕಾಲದಲ್ಲಿ ರಾಜ ಮಹಾರಾಜರು
ತುಕ್ಕು ಹಿಡಿದ ಖಡ್ಗಗಳನ್ನು ಸಾಣೆ ಹಿಡಿಸಿ ತುಕ್ಕು ಬಿಟ್ಟು ಹರಿತವಾಗಲೆಂದು ತುಪ್ಪ ಹಚ್ಚಿ ಬಿಸಿಲಿನಲ್ಲಿ ಇಡುತಿದ್ದರು.
ಆ ತುಪ್ಪದ ಸವಿಗೆ ಸೊಣಗ (ನಾಯಿ) ಬಂದು
ಮೂಸಿ ನೋಡಿ ಲೊಚ ಲೊಚನೆ ನೆಕ್ಕತೊಡಗಿತು ಖಡ್ಗದ ಹರಿತಕ್ಕೆ ನಾಲಗೆ ತುಂಡಾಗಿ ಬಾಯಿಂದ ಗಳಗಳನೆ ರಕ್ತ ಸೋರುತಿತ್ತು, ಇದಾವುದರ ಪರಿವೇ ಇಲ್ಲದಂತೆ ಸೋರುತ್ತಿರುವ ಆ ರಕ್ತವನ್ನೇ ನೆಕ್ಕುತ್ತ ನೆಕ್ಕುತ್ತಾ ಸವೆಯುತ್ತಾ ಆ ಶ್ವಾನ ಅದರಲ್ಲಿಯೇ ಮೈ ಮರೆತು ಸತ್ತಿತ್ತು.
ಅದರಂತೆ; ನಾನು ನನ್ನದು ನನ್ನಿಂದಲೇ ಎಂದು ಹೆಣ್ಣು ಹೊನ್ನು ಮಣ್ಣನ್ನು ನೆಚ್ಚಿ ಸಂಸಾರದ ವಿಷಯ ವಾಸನೆಗೆ ಗುರಿಯಾಗುತ್ತಿದೆ ಈಗಿನ ಯುವ ಸಮೂಹ, ಇದರಿಂದ ಜಾಗ್ರತವಾಗಬೇಕಿದೆ.
ಓದುವ ವಯಸ್ಸಿನಲ್ಲೇ ಪ್ರೀತಿ ಪ್ರೇಮ ಎಂಬ ವ್ಯಾಮೋಹದ ಸಂಕೋಲೆಗೆ ಸಿಲುಕಿ ನಲುಗಿ ಹೋಗಿದೆ ಈಗಿನ ಯುವ ಸಮಾಜ,
ಇನ್ನೊಂದೆಡೆ ಸಮಾಜದ ಉನ್ನತಿಗೆ ಕೆಲಸ ಮಾಡಬೇಕಾದವರು
ನನ್ನ ಜಾತಿ ದೊಡ್ಡದು ನನ್ನ ಧರ್ಮ ದೊಡ್ಡದು,
ನಿನ್ನ ಜಾತಿ ಕೀಳು, ಅವನ ಜಾತಿ ಮೇಲು ಎಂಬ ಕಚ್ಚಾಟದಲ್ಲಿ ಬಿದ್ದಿದ್ದರೆ.
ಮತ್ತೊಂದೆಡೆ; ಆಸೆಬುರುಕತನ ಲಂಚ ವಂಚನೆ ಭ್ರಷ್ಟಾಚಾರ
ಇವಕ್ಕೆಲ್ಲಾ ಸಿಲುಕಿ ಇರುವುದನ್ನೂ ಕಳೆದುಕೊಂಡು ಬೀದಿಗೆ ಬೀಳುವ ಜನ.
ಇದೇ ಅಲ್ಲವೆ ವಿಷಯ ವಾಸನೆಯೆಂಬ ತುಪ್ಪ, ಇದನ್ನು ನೆಚ್ಚಿ ದುಃಖಕ್ಕೆ ಸಿಲುಕದೇ ತನ್ನ ತನವನ್ನು ಉಳಿಸಿಕೊಂಡು ಬದುಕಿನ ಮೌಲ್ಯಗಳನ್ನು ತಿಳಿದುಕೊಂಡು ಗುರು ಹಿರಿಯರ ಶಿಕ್ಷಕರ ಮಾರ್ಗದರ್ಶನದಂತೆ ನಡೆದುಕೊಂಡುಈ ನಾಯಿತನವನ್ನು ಮಣಿಸಿ ತನ್ನ ಬದುಕಿನ ದಿಟ್ಟಗುರಿಯನ್ನು ಮುಟ್ಟಬೇಕಿದೆ ಸಕಾರಾತ್ಮಕವಾಗಿ ಚಿಂತಿಸಿ, ದುರ್ಗುಣಗಳ ತ್ಯಜಿಸಿ,
ಮೌಲ್ಯಯುತವಾಗಿ ಬದುಕಿ ಬಾಳಬೇಕಿದೆ ನಮ್ಮ ಯುವ ಸಮೂಹ ದಯೆ ಕರುಣೆ ನಿಷ್ಕಲ್ಮಶ ಪ್ರೀತಿ ಸಮಾನತೆ ಮಾನವೀಯತೆ ಎಲ್ಲಿದೆಯೋ ಅದೇ ಧರ್ಮ, ಕೂಡಲಸಂಗಮದೇವ ದಯವೇ ನಿಮ್ಮ ಧರ್ಮದ ಮೂಲ.
ದುರಾಲೋಚನೆ ದುರ್ನಡತೆ ದುರ್ಭಾವ ದುರಾಸೆಗಳ ಬಿಟ್ಟು,
ಸದಾಲೋಚನೆ ಸನ್ನಡತೆ ಸದ್ಭಾವ ಸದಾಸೆಯಿಂದ ಸನ್ಮಾರ್ಗದಲ್ಲಿ ಸದಾಚಾರದಲ್ಲಿ ನಡೆಯುವುದೇ ಧರ್ಮ ಇದನ್ನೇ ಜೀವನದ ಗುರಿಯಾಗಿರಿಸಿಕೊಂಡು ಬದುಕೋಣ..👏🏻👏🏻
ಎಲ್ಲರಿಗೂ ಶರಣು ಶರಣಾರ್ಥಿಗಳೊಂದಿಗೆ
ವಿಶ್ಲೇಷಣೆ-;ಲೋಕೇಶ್_ಎನ್_ಮಾನ್ವಿ.
-/9972536176
Comments
Post a Comment