ಮನದೊಡೆಯ ಮಹಾದೇವ, ಅಕ್ಕನಾಗಲಾಂಬಿಕೆಯವರ ವಚನದ ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ.
ಓಂ ಶ್ರೀಗುರುಬಸವಲಿಂಗಾಯ ನಮಃ ಮನದೊಡೆಯ ಮಹಾದೇವ ಮನವ ನೋಡಿಹೆನೆಂದು ಮನುಜರ ಕೈಯಿಂದ ಒಂದೊಂದ ನುಡಿಸುವನು . ಇದಕ್ಕೆ ಕಳವಳಿಸದಿರು ಮನವೆ , ಕಾತರಿಸದಿರು ತನುವೆ , ನಿಜವ ಮರೆಯದಿರು ಕಂಡಾ , ನಿಶ್ಚಿಂತನಾಗಿರು ಮನವೆ . # ಬಸವಣ್ಣಪ್ರಿಯ _ ಚೆನ್ನಸಂಗಯ್ಯನು ಬೆಟ್ಟದನಿತಪರಾಧವನು ಒಂದು ಬೊಟ್ಟಿನಲ್ಲಿ ತೊಡೆವನು . ✍🏻 -: # ವೀರಮಾತೆ ಅಕ್ಕನಾಗಲಾಂಬಿಕೆಯವರು . # ಭಾವಾರ್ಥ -: ಮನದ ಒಡೆಯನಾದ ನಿರಾಕಾರ ಸೃಷ್ಟಿಕರ್ತನಾದ ಮಹಾದೇವನು , ನಿನ್ನ ಮನವು ಪರಿಪಕ್ವವಾಗಿದೆಯೊ ಇಲ್ಲಯೊ , ಎಂದು ನೋಡಲು ಈ ಲೋಕದ ಜನರಿಂದ ಒಂದೊಂದು ರೀತಿಯಾಗಿ ನುಡಿಸುತ್ತಾನೆ , ಒಬ್ಬರು ಬೈದರೆ ಮತ್ತೊಬ್ಬರು ಹೊಗಳುವಂತೆ , ಹೀಗೇ ಒಬ್ಬೊಬ್ಬರಿಂದ ಒಂದೊಂದ ನುಡಿಸಿ . ನಿನ್ನ ಮನಸ್ಸಿನ ದೃಢತೆಯನ್ನು ಪರೀಕ್ಷಿಸುತ್ತಾನೆ , ಇದಕ್ಕೆ ನೀನು ಸೋತು ಕಳವಳಗೊಳ್ಳದಿರು ಮನವೆ , ಏನಾಗುವುದೊ , ಎಂತಾಗುವುದೊ ಎಂದು ಕಾತರಿಸದಿರು ತನುವೆ , ಸ್ತುತಿಸುವರು ನಿಂದಿಸುವರು ವಂದಿಸುವರು ಎಲ್ಲರೂ ನನ್ನವರೆ , ನನ್ನ ಒಳಿತಿಗಾಗಿ ಬಂದವರು ಎಂದು ತಿಳಿಯಬೇಕು ಮನವೆ, ‘ಅದ...