‘ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ ತೊರೆಯಿಂ ಭೋ, ತೊರೆಯಿಂ ಭೋ ಪರನಾರಿಯರ ಸಂಗವ’ ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ, ಇವರಿಂದ.
ಓಂ ಶ್ರೀಗುರುಬಸವಲಿಂಗಾಯ ನಮಃ
ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ
ತೊರೆಯಿಂ ಭೋ, ತೊರೆಯಿಂ ಭೋ
ಪರನಾರಿಯರ ಸಂಗವ ತೊರೆಯಿಂ ಭೋ !
ಪರಧನದಾಮಿಷವ ತೊರೆಯಿಂ ಭೋ !
ಇವ ತೊರೆಯದೆ ಹೋಗಿ ತೊರೆಯ ಮಿಂದಡೆ
ಬರುದೊರೆ ಹೋಹುದು, ಕೂಡಲಸಂಗಮದೇವಾ.
✍🏻-:#ವಿಶ್ವಗುರು_ಬಸವಣ್ಣನವರು,
#ಭಾವಾರ್ಥ-;
#ತೊರೆಯ_ಮೀವ_ಅಣ್ಣಗಳಿರಾ,
#ತೊರೆಯ_ಮೀವ_ಸ್ವಾಮಿಗಳಿರಾ,
ಜೀವನದಲ್ಲಿ ಅಜ್ಞಾನದಿಂದ ಮಾಡಿದ ಪಾಪ ಪ್ರಾಯಶ್ಚಿತ್ತವಾಗಿ ಪುಣ್ಯ ಲಭಿಸುತ್ತದೆ ಎಂದು, ಕೆರೆ ತೊರೆ ಹಳ್ಳ ಬಾವಿಗಳಲ್ಲಿ ಮಿಂದು ಬರುವ ಅಣ್ಣಂದಿರಾ. ತೀರ್ಥಕ್ಷೇತ್ರ ಪುಣ್ಯನದಿ ಎಂದು ಪುಣ್ಯಸ್ನಾನವೆಂದು ಮಿಂದು ಬರುವ ಸ್ವಾಮಿಗಳಿರಾ.
#ತೊರೆಯಿಂ_ಭೋ, #ತೊರೆಯಿಂ_ಭೋ
#ಪರನಾರಿಯರ_ಸಂಗವ_ತೊರೆಯಿಂ_ಭೋ !
ಕೆರೆ ತೊರೆಯ ನೀರಲ್ಲಿ ಮುಳುಗೇಳುವ ಮುನ್ನ ಕೇಳಿರಿಲ್ಲಿ, ಕರೆಯಲ್ಲಿ ನೀರಲ್ಲಿ ಮಿಂದರೆ ತಲೆಯ ತುರಿಕೆ ಹೋಗುವುದಲ್ಲದೆ, ನಿನ್ನ ಅವಗುಣ ಕಳೆಯುವುದಿಲ್ಲ, ನಿನ್ನ ದುರ್ನಡತೆ ಹೋಗುವುದಿಲ್ಲ, ನಿನ್ನೊಳಗಿನ ಆಸೆ ಆಮಿಷ ರೋಷ ವಿಷಯಾದಿಗಳು ತ್ಯಜಿಸಬೇಕು, ಪರನಾರಿಯ ಸಂಗವನ್ನು ತೊರೆಯಬೇಕು, ಪರನಾರಿಯನ್ನು ತನ್ನ ಸ್ವಂತ ಸಹೋದರಿ ಎಂದೇ ಭಾವಿಸಿ, ತನ್ನ ಮನೆಯ ಮಗಳೆಂದೇ ಗೌರವಿಸಬೇಕು, ಅದ ಬಿಟ್ಟು ಮನದಲ್ಲಿ ದುರ್ವಿಚಾರ ತುಂಬಿಕೊಂಡು ನೀರಲ್ಲಿ ಮಿಂದರೆ ಏನು ಫಲ, ಕುಡಿಯುವ ನೀರು ಕೂಡ ಕೊಳೆಯಾಗಿ ಮಲಿನವಾದೀತೆ ವಿನಃ ನಿನ್ನ ಪಾಪ ಕಳೆಯುವುದಿಲ್ಲ.
#ಪರಧನದಾಮಿಷವ_ತೊರೆಯಿಂ_ಭೋ !
ಪರರ ದುಡಿಮೆಯ ಮೂಲಕ ಬಂದ
ಹಣಕ್ಕೆ ಆಸೆಯಿಂದ ಹಾತೊರೆಯಬೇಡಿ,
ಪರರ ಆಸ್ತಿಪಾಸ್ತಿಗಾಗಿ ಕಾದಾಡಬೇಡಿ.
ಮತ್ತೊಬ್ಬರ ಮನೆಯ ಒಡವೆಗಳ ಕಂಡು ಒಂದುಕ್ಷಣವೂ ಮೈಮರೆಯಬೇಡಿ,
ನಿಮ್ಮೊಳಗಿನ ಈ ಮೋಹಗಳನ್ನು ತೊರೆದು ಪರಧನದಾಮಿಷವ ತ್ಯಜಿಸಿಬಿಡಿ.
#ಇವ_ತೊರೆಯದೆ_ಹೋಗಿ_ತೊರೆಯ_ಮಿಂದಡೆ
#ಬರುದೊರೆ_ಹೋಹುದು, #ಕೂಡಲಸಂಗಮದೇವಾ.
ಪರನಾರಿಯ ಸಂಗ ಬಿಡದೆ, ಮನದಲ್ಲಿನ ಪರಧನದ ಆಸೆ ಬಿಡದೆ, ಮತ್ತೊಬ್ಬರ ವಸ್ತು ತನಗೆ ಬೇಕೆಂಬ ಮೋಹವನ್ನು ತ್ಯಜಿಸದೆ, ಬರಿಯ ಕೆರೆ ತೊರೆ ನದಿಯಲ್ಲಿ ಮಿಂದರೆ
ಅದು ‘ನಿಷ್ಠೆಯಿಲ್ಲದ ಭಕ್ತಿ’ ‘ತೈಲವಿಲ್ಲದ ದೀಪದಂತೆ. ‘ಸತ್ಯವಿಲ್ಲದ ಆಚರಣೆ, ನೀರಿಲ್ಲದೆ ಬತ್ತಿಹೋದ ನದಿಯಂತೆ’
ವ್ಯರ್ಥ ಹೋಗುವುದು ಜೀವನ ಅರ್ಥವಿಲ್ಲದೆ ಇದನ್ನು ಅರಿತು ಸದ್ಗುಣವಂತನಾಗಿ ಸದಾಚಾರದಲ್ಲಿ ಬದುಕಿದರೆ ಜೀವನ ಸಾರ್ಥಕ ಎನ್ನುತ್ತಾರೆ. #ವಿಶ್ವಗುರು_ಬಸವಣ್ಣನವರು.👏🏻👏🏻👏🏻
ಎಲ್ಲರಿಗೂ
🙏🏻ಶರಣು ಶರಣಾರ್ಥಿಗಳೊಂದಿಗೆ🙏🏻
✍🏾ವಿಶ್ಲೇಷಣೆ-;
#ಲೋಕೇಶ್_ಎನ್_ಮಾನ್ವಿ
-/ 9972536176
Comments
Post a Comment