ಮನದೊಡೆಯ ಮಹಾದೇವ, ಅಕ್ಕನಾಗಲಾಂಬಿಕೆಯವರ ವಚನದ ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ.



 ಓಂ ಶ್ರೀಗುರುಬಸವಲಿಂಗಾಯ ನಮಃ


ಮನದೊಡೆಯ ಮಹಾದೇವ ಮನವ ನೋಡಿಹೆನೆಂದು

ಮನುಜರ ಕೈಯಿಂದ ಒಂದೊಂದ ನುಡಿಸುವನು.

ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ತನುವೆ,

ನಿಜವ ಮರೆಯದಿರು ಕಂಡಾ, ನಿಶ್ಚಿಂತನಾಗಿರು ಮನವೆ.

#ಬಸವಣ್ಣಪ್ರಿಯ_ಚೆನ್ನಸಂಗಯ್ಯನು

ಬೆಟ್ಟದನಿತಪರಾಧವನು ಒಂದು ಬೊಟ್ಟಿನಲ್ಲಿ ತೊಡೆವನು.



✍🏻 -: #ವೀರಮಾತೆ ಅಕ್ಕನಾಗಲಾಂಬಿಕೆಯವರು.


                            #ಭಾವಾರ್ಥ-:

ಮನದ ಒಡೆಯನಾದ ನಿರಾಕಾರ ಸೃಷ್ಟಿಕರ್ತನಾದ ಮಹಾದೇವನುನಿನ್ನ ಮನವು ಪರಿಪಕ್ವವಾಗಿದೆಯೊ ಇಲ್ಲಯೊಎಂದು ನೋಡಲು ಈ ಲೋಕದ ಜನರಿಂದ ಒಂದೊಂದು ರೀತಿಯಾಗಿ ನುಡಿಸುತ್ತಾನೆಒಬ್ಬರು ಬೈದರೆ ಮತ್ತೊಬ್ಬರು ಹೊಗಳುವಂತೆಹೀಗೇ ಒಬ್ಬೊಬ್ಬರಿಂದ ಒಂದೊಂದ ನುಡಿಸಿ

ನಿನ್ನ ಮನಸ್ಸಿನ ದೃಢತೆಯನ್ನು ಪರೀಕ್ಷಿಸುತ್ತಾನೆ, ಇದಕ್ಕೆ ನೀನು ಸೋತು ಕಳವಳಗೊಳ್ಳದಿರು ಮನವೆಏನಾಗುವುದೊಎಂತಾಗುವುದೊ ಎಂದು ಕಾತರಿಸದಿರು ತನುವೆಸ್ತುತಿಸುವರು ನಿಂದಿಸುವರು ವಂದಿಸುವರು ಎಲ್ಲರೂ ನನ್ನವರೆ‌ನನ್ನ ಒಳಿತಿಗಾಗಿ ಬಂದವರು ಎಂದು ತಿಳಿಯಬೇಕು ಮನವೆ,

‘ಅದು ಹೇಗೆಂದರೆ’

ಅನ್ನವು ಪರಿಪಕ್ವವಾಗಿ ಬೆಂದಿದೆಯೊ ಇಲ್ಲವೊ ಎಂದು ನೋಡಲುಒಂದಗುಳು ಅನ್ನವನ್ನು ಒತ್ತಿನೋಡಿ ಪರೀಕ್ಷಿಸುವಂತೆ.

ಚಿನ್ನವೂ ಕೂಡ ಕುಲುಮೆಯಲ್ಲಿ ಸುಟ್ಟು ಬೆಂದು ಪೆಟ್ಟು ತಿಂದ ನಂತರವೇ 

ತನ್ನ ಮಹತ್ವವನ್ನು ಹೆಚ್ಚಿಸಿಕೊಳ್ಳುವಂತೆನಿನಗೂ ಕೂಡ ಸ್ತುತಿ-ನಿಂದೆಗಳು

ಮಾನ ಅಪಮಾನಗಳೆಂಬ ಪೆಟ್ಟು ಬಿದ್ದಿದ್ದೂ ತಲೆಕೆಡಿಸಿಕೊಳ್ಳದಿರು

#ನಿಜವ_ಮರೆಯದಿರು ಕಂಡಾನಿಶ್ಚಿಂತನಾಗಿರು ಮನವೆ.

ನೋವು ನಲಿವುಗಳನ್ನು ಏಕರೀತಿಯನಲ್ಲಿ ಸ್ವೀಕರಿಸಿ ನಿಶ್ಚಿಂತನಾಗಿರು ಮನವೆ, ನಿನ್ನ ವ್ಯಕ್ತಿತ್ವದ ಪರೀಕ್ಷೆಯಲ್ಲಿ  ತಾಳ್ಮೆಯಿಂದ ಉತ್ತೀರ್ಣನಾಗು,

#ಬಸವಣ್ಣಪ್ರಿಯ ಚೆನ್ನಸಂಗಯ್ಯನು  ಬೆಟ್ಟದನಿತಪರಾಧವನು ಒಂದು ಬೊಟ್ಟಿನಲ್ಲಿ ತೊಡೆವನುಸೃಷ್ಟಿಕರ್ತನ ಪರೀಕ್ಷೆಯಲಿ ನೀನು ಉತ್ತೀರ್ಣನಾದಾಗನಿನ್ನ ಮೇಲೆ ಬಂದ ಬೆಟ್ಟದಷ್ಟು ಅಪರಾಧಿಗಳು

ಸ್ತುತಿ-ನಿಂದೆಗಳು ಎಲ್ಲವನೂ 

ಒಂದೇ ಒಂದು ಕ್ಷಣದಲ್ಲಿ ಬೊಟ್ಟಿನಿಂದ ಸರಿಸಿದಂತೆ ದೂರಮಾಡುತ್ತಾನೆ,

ಜಗವೇ ನಿನ್ನ ಕೊಂಡಾಡುವಂತೆ ನಿನ್ನ ಕೀರ್ತಿಯು ಮಹತ್ವ ಪಡೆಯುತ್ತದೆ,

ಆದ ಕಾರಣ ಎಂದೂ ಕೂಡ ನೀನು ಹತಾಶನಾಗದೆ ಸದಾ ಉತ್ಸುಕನಾಗಿರು ಎಂಬುದಾಗಿ #ವೀರಮಾತೆ_ಅಕ್ಕನಾಗಲಾಂಬಿಕೆಯವರು ತಿಳಿಸುತ್ತಾರೆ.👏🏻👏🏻



   ✍🏻 ವಿಶ್ಲೇಷಣೆ -: #ಲೋಕೇಶ್ ಎನ್ ಮಾನ್ವಿ.



Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.