ನೀರಿಂಗೆ ನೈದಿಲೆಯೆ ಶೃಂಗಾರ, ಸಮುದ್ರಕ್ಕೆ ತೆರೆಯೆ ಶೃಂಗಾರ, ವಿಶ್ವಗುರು ಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.
ಓಂ ಶ್ರೀಗುರುಬಸವಲಿಂಗಾಯ ನಮಃ ನೀರಿಂಗೆ ನೈದಿಲೆಯೆ ಶೃಂಗಾರ , ಸಮುದ್ರಕ್ಕೆ ತೆರೆಯೆ ಶೃಂಗಾರ , ನಾರಿಗೆ ಗುಣವೆ ಶೃಂಗಾರ , ಗಗನಕ್ಕೆ ಚಂದ್ರಮನೆ ಶೃಂಗಾರ , ನಮ್ಮ # ಕೂಡಲಸಂಗನ ಶರಣರ ನೊಸಲ ವಿಭೂತಿಯೆ ಶೃಂಗಾರ . ✍🏾-;ವಿಶ್ವಗುರು ಬಸವಣ್ಣನವರು. ಭಾವಾರ್ಥ -; ‘ ನೀರಿಂಗೆ ನೈದಿಲೆಯೆ ಶೃಂಗಾರ ’ ಬಾಹ್ಯ -; ನೀರಿನ ಅಂದ ಚೆಂದಕ್ಕೆ ಅದರಲ್ಲಿ ಅರಳಿದ ತಾವರೆಯ ಹೂ ಮತ್ತಷ್ಟು ಮೆರುಗು ನೀಡುವಂತೆ , ಆಂತರಿಕ -: ನಿಂತ ನೀರಂತೆ ಲೌಕಿಕದ ಚಿಂತೆಯಲ್ಲಿರುವ ಮನದಲ್ಲಿ ಅರಿವೆಂಬ ತಾವರೆ ಅರಳಿ ನಿಂತರೆ ಬದುಕಿಗೆ ಅದುವೇ ಶೃಂಗಾರ ಸೊಗಸು .👌 ‘ ಸಮುದ್ರಕ್ಕೆ ತೆರೆಯೆ ಶೃಂಗಾರ ’ ಬಾಹ್ಯ -; ಹಲವು ನದಿಗಳ ಸಂಗಮವಾದ ಸಮುದ್ರವು ಕೆರೆಯ ನೀರಂತೆ ಸುಮ್ಮನಿದ್ದರೆ ಏನು ಚೆಂದ ? ಅದು ಚಂದಲ್ಲ , ಸಮುದ್ರಕ್ಕೆ ತುಂಬಿ ತುಳುಕುವ ಅಲೆಗಳ ನರ್ತನವೇ ಬಲು ಸುಂದರ .. 👌🏻 ಆಂತರಿಕ -; ಜೀವನವು ಒಂದು ಮಹಾನ್ ಸಾಗರವಿದ್ದಂತೆ , ಇಲ್ಲಿ ಕಷ್ಟಸುಖ ಲಾಭನಷ್ಟ ಸ್ತುತಿನಿಂದೆಗಳೆಂಬ ನೆರೆತೊರೆಗಳು ಬಂದಾಗ ಗಟ್ಟಿತನದಿಂದ ಎದುರಿಸಿ ನಿಂತಾಗಲೇ ಆ ಬಾಳಿಗೊಂದು ಶೃಂಗಾರ .👌 ‘ ನಾರಿಗೆ ಗುಣವೇ ಶೃಂಗಾರ ' ಸೌಂದರ್ಯ ಪ್ರಿಯೆಯಾದ ನಾರಿಯರಿಗೆ ಅವ್ಯಾವುದೇ ...