‘ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ’ ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.
ಓಂ ಶ್ರೀಗುರುಬಸವಲಿಂಗಾಯ ನಮಃ
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ ಸಲಹುತ್ತ
ಶಿವ ಶಿವಾ ಎಂದೋದಿಸಯ್ಯಾ. ಭಕ್ತಿಯೆಂಬ ಪಂಜರದೊಳಗಿಕ್ಕಿ ಸಲಹು
ಕೂಡಲಸಂಗಮದೇವಾ.
✍🏾-; ವಿಶ್ವಗುರು ಬಸವಣ್ಣನವರು.
ಭಾವಾರ್ಥ-
ನರಜನ್ಮದಲ್ಲಿ ನನ್ನನ್ನು ಅತೀ ಚಿಕ್ಕದಾದ ಗಿಳಿ ಮರಿಯನ್ನಾಗಿ ಮಾಡಿ ಸಲಹುತ್ತ ಶಿವ ಶಿವ ಎಂದೋದಿಸಯ್ಯ, ಭಕ್ತಿಯೆಂಬ ಪಂಜರದಲ್ಲಿಕ್ಕಿ ಸಲಹು ಎನ್ನುತ್ತಾರೆ ಬಸವಣ್ಣನವರು.
ಇಲ್ಲಿ ಅವರು ಹೇಳಿದ ಪಂಜರವಾವುದು,? ಗಿಳಿಯಾವುದು,? ಎಂದು ತಿಳಿಯೋಣ ಬನ್ನಿ.
ನಾವು ಸಾಕುವ ಗಿಳಿಗೆ ತಂತಿಯ ಪಂಚರವಿರುವಂತೆ,ಇಲ್ಲಿ ಬಸವಣ್ಣನವರು ಹೇಳಿದ ಗಿಳಿಗೆ ಭಕ್ತಿಯೆಂಬ ಪಂಜರ, ಇದು ದೇಹವನ್ನೇ ದೇಗುಲವಾಗಿಸುವ ಇನ್ನೊಂದು ಪರಿ, ಈ ದೇಹವು ನರ_ಮಾಂಸ ಪಿಂಡದಿಂದ ರಚನೆಯಾಗಿದೆ,ಈ ಮಾಂಸ ಪಿಂಡವನ್ನು ಮಂತ್ರಪಿಂಡವಾಗಿಸುವ ಪರಿ ಇದು.
ತನುಮನದಲ್ಲಿ ನಾನು ನನ್ನದೆಂಬ ಮೋಹದ ಜಾಲವನ್ನು ಬಿಡಿಸಿ, ಭಕ್ತಿಯ ಜಾಲದಲ್ಲಿರಿಸಿ, ದೇಹ ಅಹಂಕಾರ ಕಳೆದು ಈ ದೇಹವನ್ನೇ ಭಕ್ತಿಯ ಪಂಜರವಾಗಿಸಿ, ಆತ್ಮವೆಂಬುದನ್ನು ಗಿಳಿಯಾಗಿಸಿ ‘ಶಿವ ಶಿವ’ ಎಂದೋದುವಂತೆ ಮಾಡಿ, ಸದಾ ಕಾಲ ಆತ್ಮದರಿವನ್ನು ಜಾಗ್ರತವಾಗಿರಿಸಿ ಶಿವ ನಾಮಸ್ಮರಣೆಯೆಂಬ ಅಮೃತವನ್ನುಣಿಸಿ ಸಲಹು ಕೂಡಲಸಂಗಮದೇವಾ, ಎನ್ನುತ್ತಾರೆ ವಿಶ್ವಗುರು ಬಸವಣ್ಣನವರು.👏🏻👏🏻👏🏻
🙏🏻ಶರಣು ಶರಣಾರ್ಥಿಗಳೊಂದಿಗೆ🙏🏻
✍🏾-;#ಲೋಕೇಶ್_ಎನ್_ಮಾನ್ವಿ.
Comments
Post a Comment