Posts

Showing posts from January, 2024

‘ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ’ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ವಚನದ ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ ಇವರಿಂದ.

Image
‘ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ’ ಬಟ್ಟಬಯಲೆಲ್ಲ ಗಟ್ಟಿಗೊಂಡಡೆ ಸ್ವರ್ಗ ಮತ್ರ್ಯ ಪಾತಾಳಕ್ಕೆ ಠಾವೆಲ್ಲಿಯದೊ ? ಮೇಘನಿರ್ಮಳಜಲವೆಲ್ಲ ಮುತ್ತಾದಡೆ ಸಪ್ತಸಾಗರಂಗಳಿಗೆ ಉದಕವೆಲ್ಲಿಯದೊ ? ಕಷ್ಟಜೀವಿ ಮನುಜರೆಲ್ಲ ನೆಟ್ಟನೆ ಶಿವಜ್ಞಾನಿಗಳಾದಡೆ ಮುಂದೆ ಭವದ ಬಳ್ಳಿ ಬೆಳೆಯಲಿನ್ನೆಲ್ಲಿಯದೊ ,?   ಇದು ಕಾರಣ ಕೂಡಲಚೆನ್ನಸಂಗಯ್ಯಾ ಲಕ್ಷಕ್ಕೊಬ್ಬ ಭಕ್ತ  ಕೋಟಿಗೊಬ್ಬ ಶರಣ,.                                   ಭಾವಾರ್ಥ- ಬಟ್ಟಬಯಲೆಲ್ಲ ಗಟ್ಟಿಗೊಂಡಡೆ ಸ್ವರ್ಗ ಮತ್ರ್ಯ ಪಾತಾಳಕ್ಕೆ ಠಾವೆಲ್ಲಿಯದೊ ? ಎಡೆಯಿಲ್ಲದ ಕಡೆಯಿಲ್ಲದ, ಆರಂಭವೂ ಇಲ್ಲದ, ಅಂತ್ಯವೂ ಇಲ್ಲದ, ಕಾಲಕಲ್ಪನೆಗಳಿಗೆ ಗೋಚರಿಸದ ಖಗೋಳ ವಿಜ್ಞಾನಕ್ಕೂ ನಿಲುಕದ ವಿಸ್ಮಯ ಕೌತುಕ, ಸೂರ್ಯ_ಚಂದ್ರ_ಭೂಮಿಗಳಂಥಹ ಸಹಸ್ರ ಸಹಸ್ರ ಗ್ರಹಗಳನ್ನೊಳಗೊಂಡಿರುವ ಬ್ರಹ್ಮಾಂಡ (Galaxy), ಅಂತಪ್ಪ  ಸಹಸ್ರ ಸಹಸ್ರ (Galaxy) ಬ್ರಹ್ಮಾಂಡಗಳನ್ನೇ ತನ್ನೊಳು ಕಿಂಚಿತ್ತಾಗಿ ಇಟ್ಟುಕೊಂಡದ್ದೇ ಶರಣರು ಹೇಳುವ   ಬಯಲು_ಬಟ್ಟಬಯಲು, ಅಂತಹ ಬಟ್ಟಬಯಲು ಭೂಮಿ,ನೀರು,ಅಗ್ನಿ,ವಾಯು,ಆಕಾಶವನ್ನೊಳಗೊಂಡ ಬಟ್ಟಬಯಲು ಪ್ರಕೃತಿಯೇ ಹೆಪ್ಪಾಗಿ ಗಟ್ಟಿಕೊಂಡರೆ, ಉಸಿರಾಟಕ್ಕೆ ಆಮ್ಲಜನಕವಿಲ್ಲ, ಕುಡಿಯಲು ನೀರಿಲ್ಲ, ಚಲನೆಯಿಲ್ಲದ ಆಕಾಶ, ಹೆಪ್ಪುಗಟ್ಟಿದ ಅಂತರ್ಜಲದಿಂದ   ಜಲಚರ_ಕ್ರಿಮಿಕೀಟ_ಪಶುಪಕ...