ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ? ಹಡಪದ ಅಪ್ಪಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.

ಓಂ ಶ್ರೀಗುರುಬಸವಲಿಂಗಾಯ ನಮಃ ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ? ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ ? ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ ? ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ, ಲೋಕದ ಮಾನವರಿಗುಂಟೆ? ನಿಮ್ಮ ನೆಲೆಯನರಿವುದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ. ✍🏾-; ನಿಜಸುಖಿ ಹಡಪದ ಅಪ್ಪಣ್ಣನವರು. ಭಾವಾರ್ಥ - ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ? ಈ ಭೂಮಿಯ ಮೇಲಿಹ ಕೆರೆ, ಹೊಳೆ, ನದಿ ದಾಂಟಲು ಅರಗೋಲುಗಳ ಅವಶ್ಯಕತೆ ಇದೆಯೇ ಹೊರತು, ಆಕಾಶದ ಮೋಡದಲ್ಲಿಹ ಮೇಘಜಲವನ್ನು ದಾಂಟಲು ಯಾವ ಅರಗೋಲಿನ ಅವಶ್ಯಕತೆಯ ಹಂಗಿಲ್ಲ. ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ ? ಮರೆವು ಅಳಿದು, ಅರಿವಿನ ಕಣ್ತೆರೆದು, ಪಂಚೇಂದ್ರಿಯಗಳೆಲ್ಲ ಜ್ಞಾನೇಂದ್ರಿಯಗಳಾಗಿ ತನ್ನ ಮನಸ್ಸನ್ನು ನಿರಾಕಾರ ಸೃಷ್ಟಿಕರ್ತನ ಬಯಲಲ್ಲಿರಿಸಿದ ಶಿವಶರಣರಿಗೆ ಯಾವುದೇ (ಮನುಜ ಕಲ್ಪಿತ) ಸಾಕಾರದ ಹಂಗಿಲ್ಲ ಅವಶ್ಯಕತೆಯೂ ಇಲ್ಲ. ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ ? ಬೇಕು ಬೇಡಗಳಿಂದಾಚೆ, ಆಸೆ ಆಮಿಷಗಳಿಂದಾಚೆ, ನಾನು ನನ್ನದೆಂಬ ಭ್ರಮೆಯಿಂದಾಚೆ, ನನ್ನದು ತನ್ನದೆಂಬ ಮೋಹದಿಂದಾಚೆಗೆ ಇರುವ ಶಿವಶರಣರಿಗೆ ಯಾವುದೇ ಈ ಲೋಕದ ಹಂಗಿಲ್ಲ.. ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ, ಲೋಕದ ಮಾನವರಿಗುಂಟೆ? ನಿಮ್ಮ ನೆಲೆಯನರಿವುದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ. ಇಂತೀ ತನ್ನ ತಾನರಿದು ನಿಮ್ಮ...