ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ ? ಚಿನ್ಮಯಜ್ಞಾನಿ_ಚೆನ್ನಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ- ಲೋಕೇಶ್_ಎನ್_ಮಾನ್ವಿ.

ಓಂ ಶ್ರೀಗುರುಬಸವಲಿಂಗಾಯ ನಮಃ ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ ? ಶಬ್ದ ಮೌನಿಯಾದಡೇನಯ್ಯಾ ನೆನಹು ಮೌನಿಯಾಗದನ್ನಕ್ಕರ ? ತನು ಬೋಳಾದಡೇನಯ್ಯಾ ಮನ ಬೋಳಾಗದನ್ನಕ್ಕರ ? ಇದು ಕಾರಣ _ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಸ್ಥಲವಾರಿಗೆಯೂ ಅಳವಡದು ,. ವಚನ-; #ಚಿನ್ಮಯಜ್ಞಾನಿ _ ಚೆನ್ನಬಸವಣ್ಣನವರು , ಭಾವಾರ್ಥ-; # ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ ? ಬ್ರಹ್ಮ + ಚಾರಿ = ಬ್ರಹ್ಮಚಾರಿ , ನಾನು ನನ್ನದೆಂಬ ಆಸೆ _ ಆಮಿಷ _ ರೋಷ _ ವಿಷಯಾದಿಗಳನ್ನು ಬಿಟ್ಟು , ಶ್ರೇಷ್ಠ ಸತ್ ಚಿಂತನೆಗಳನ್ನು ಆಚರಣೆಯಲ್ಲಿ ಮೈಗೂಡಿಸಿಕೊಂಡವನು ಎಂದರ್ಥ ,. ಹೀಗಿರುವಾಗ ನಾನು ಬ್ರಹ್ಮಚಾರಿ ಶ್ರೇಷ್ಠ ಚಿಂತನೆಗಳನ್ನು ಮೈಗೂಡಿಸಿಕೊಂವನೆಂದು ಲೋಕದ ಜನರೆದುರು ಬಿಂಬಿಸಿಕೊಂಡು , ಅಂತರಂಗದಲ್ಲಿ ಆಸೆ _ ಆಮಿಷ _ ರೋಷ _ ವಿಷಯಾದಿಗಳನ್ನು ಬಿಡದೆ , ಉದಾ - ಮಾವಿನ ಹಣ್ಣನ್ನು ಬಿಟ್ಟೆನೆಂದರೂ ಅದರ ಸವಿರುಚಿ ಮತ್ತು ರೂಪಕವನ್ನು ಮನದಲ್ಲಿ ತುಂಬಿಕೊಂಡ ಆಸೆಯಳಿಯದ ಕಪಟಿ ಎಂದೂ ಬ್ರಹ್ಮಚಾರಿಯಾಗಲಾರ .. ಶಬ್ದ ಮೌನಿಯಾದಡೇನಯ್ಯಾ ನೆನಹು ಮೌನಿಯಾಗದನ್ನಕ್ಕರ ? ಇನ್ನು ಲೋಕದ ಗೊಡವೆಯೇ ನನಗೆ ಬೇಡೆಂದು , ಮಾತು ಬಿಟ್ಟು ಮೌನಾಚರಣೆ ಮಾಡುವೆನೆಂದರೆ , ಮಾತಿನ...