Posts

Showing posts from April, 2022

ಅರಿವಿನ ಮಾರಿತಂದೆಗಳ ವಚನದಲ್ಲಿ ಗುರು-ಶಿಷ್ಯರ ಸಂಬಂಧ, ವಿಶ್ಲೇಷಣೆ ಲೋಕೇಶ್ ಎನ್ ಮಾನ್ವಿ.

Image
ಶ್ರೀಗುರುಬಸವಲಿಂಗಾಯ ನಮಃ ಗುರುಶಿಷ್ಯನ ಇರವಿನ ಸ್ಥಲವೆಂತುಟೆಂದಡೆ: ಮಣಿ ದಾರವ ನುಂಗಿ ಸರವಾಗಿ ನಿಂದು ಕಾಣಿಸಿಕೊಂಡಂತಿರಬೇಕು, ರತ್ನಪುಂಜ ಕುಂದಣದ ಮೇಲೆ ನಿಂದು ಚಂದವ ಕಾಣಿಸಿಕೊಂಡಂತಿರಬೇಕು, ಶಂಖದ ಮೇಲೆ ಸಂಭ್ರಮದ ಜಾತಿ ಉತ್ತರ ನಿಂದು ತೋರಿದಂತಿರಬೇಕು, ಇಂತೀ ಭೇದ. ಘಟ ಗುರು, ಆತ್ಮ ಶಿಷ್ಯನಾಗಿ ತೋರುವ ಬೆಳಗು ತಾನೆ,ಸದಾಶಿವಮೂರ್ತಿಲಿಂಗವು. ✍🏾-#ಶರಣ_ಅರಿವಿನ_ಮಾರಿತಂದೆಯವರು, ಭಾವಾರ್ಥ - ಮೇಲಿನ ವಚನದಲ್ಲಿ ಶರಣರು ಶ್ರೀಗುರು-ಶಿಷ್ಯರ ಶ್ರೇಷ್ಠ ಸಂಬಂಧದ ಬಗ್ಗೆ ತುಂಬಾ ಸೊಗಸಾದ ಹೊಂದಿಕೆಯೊಂದಿಗೆ ತಿಳಿಸಿದ್ದಾರೆ, #ಗುರುಶಿಷ್ಯನ ಇರವಿನ ಸ್ಥಲವೆಂತುಟೆಂದಡೆ:   ಮಣಿ ದಾರವ ನುಂಗಿ ಸರವಾಗಿ ನಿಂದು ಕಾಣಿಸಿಕೊಂಡಂತಿರಬೇಕು, ಮುತ್ತು ಮತ್ತು ಹವಳದ ಮಣಿಗಳು ಹೇಗೆ ದಾರವನ್ನೇ ಹಿಡಿದು, ಆ ದಾರವನ್ನೇ ನುಂಗಿ, ದಾರದಲ್ಲಿಯೇ ಬೆರಸಿ ಬೇರಿಲ್ಲದಂತೆ ತಾವು ಮುತ್ತಿನ ಹಾರವಾಗುತ್ತವೊ ಹಾಗೇ ಇಲ್ಲಿ ಮಣಿ ಎಂದರೆ (ಸಾಧನೆಯ ಆಕಾಂಕ್ಷಿ - ಶಿಷ್ಯ,) ದಾರ ಎಂದರೆ (ಸಾಧನೆಗೆ ಬೇಕಾದ ಸನ್ಮಾರ್ಗ ಅರಿವು-ಗುರು,) ಸಾಧನೆಯ ಆಕಾಂಕ್ಷಿಯಾದ ಶಿಷ್ಯನು ಸಾಧನೆಯ ಮಾರ್ಗವೇ ಆದ (ಅರಿವು) ಗುರು ತತ್ವವನ್ನೇ ಬೆನ್ನತ್ತಿ, ಅರಿವನ್ನು ಅನುಕರಿಸಿ, ಅರಿವನ್ನು ಆಸ್ವಾಧಿಸಿ, ಅರಿವನ್ನೇ ಆನಂದಿಸಿ, ಆ ಅರಿವನ್ನೇ ಆವರಿಸಿಕೊಂಡು, ಗುರುವೆಂಬ ಜ್ಯೋತಿ ಮುಟ್ಟಿ ತಾನೂ ಪ್ರತಿಜ್ಯೋತಿಯಾಗಿ ಪ್ರಜ್ವಲಿಸಿ, ಶ್ರೀಗುರು ಶಿಷ್ಯರು ಬೆರಸಿ ಬೇರಿಲ್ಲದಂಗ ಒಂದಾಗಬೇಕು,  #ರತ್ನಪುಂಜ ಕು...