‘ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ’ ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ -; ಲೋಕೇಶ್ ಎನ್ ಮಾನ್ವಿ.🙏🏻
ಶ್ರೀಗುರುಬಸವಲಿಂಗಾಯನಮಃ ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ ಧರೆ ಧನ ವನಿತೆಯರು ಎನ್ನವರು ತನ್ನವರೆಂದು ಹೋರಿ ಹೋರಿ ಸಾಯುತ್ತಿದೆ ಜೀವ , ಸರ್ವಕರ್ತೃ ಕೂಡಲಚೆನ್ನಸಂಗಯ್ಯನೆಂದರಿಯದೆ .. 👏👏 ✍🏾• ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು • 🙏 ಭಾವಾರ್ಥ -; ‘ ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ ’ ಚಿಲಿಪಿಲಿ ಎಂದು ಹಾಡುತ್ತಾ ಬಂದ ಗುಬ್ಬಚ್ಚಿಗಳು . ತನಗೆ ತನ್ನ ಮರಿಗಳಿಗೆಂದು , ಒಂದು ಗೂಡು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದವು , ಒಂದು ದಿನ ಗಡಿಬಿಡಿಯಲ್ಲಿ ಯಾವುದೊ ಪಾಳು ಬಿದ್ದ ಮನೆಯಲ್ಲೊ ಅಥವಾ ಇನ್ಯಾರೊ ಕಟ್ಟಿದ ಮನೆಯ ಗೋಡೆಯ ಸಂದಿಯಲ್ಲೊ ಗೂಡುಕಟ್ಟಿ , ಆಹಾರ ಸಂಗ್ರಹದಲ್ಲಿ ತೊಡುಗುತ್ತವೆ , ಇತರೆ ಗುಬ್ಬಿಗಳನ್ನು ಕರೆತಂದು ಆ ಮನೆ ತಮ್ಮದೆಂದು ಅತ್ಯಂತ ಗರ್ವದಿಂದ ತೋರ್ಪಡಿಸುತ್ತವೆ , ಒಂದುದಿನ ಎಲ್ಲವೂ ತನ್ನದೆನ್ನುವ ಸಂತಸದಲ್ಲಿ ಕುಳಿತು ಮೈಮರೆತವು ಗುಬ್ಬಿಗಳು . ಇದನ್ನು ಕಂಡ ಮನೆಯ ಮಾಲಿಕ ಗೋಡೆಯ ಸಂದಿಯನ್ನು ಮುಚ್ಚಿಬಿಡುತ್ತಾನೆ . ಅದನ್ನೇ ಆಶ್ರಯಿಸಿ ಕ್ಷಣಿಕವಾದುದ್ದನ್ನು ನಂಬಿ ಎಲ್ಲವೂ ತನ್ನದೆಂದು ಮೈಮರೆತ ಗುಬ್ಬಿಗಳು ...