‘ಬದುಕಿನ ಬಂಡಿಗೆ ಶರಣರ ಸೂತ್ರ’

 ಓಂ ಶ್ರೀಗುರು ಬಸವಲಿಂಗಾಯ ನಮಃ


ಬದುಕಿನ ಬಂಡಿಗೆ ಶರಣರ ಸೂತ್ರ


ಕಾಲುಗಳೆರಡು ಗಾಲಿ ಕಂಡಯ್ಯಾ

ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ

ಬಂಡಿಯ ಹೊಡೆವರು ಐವರು ಮಾನಿಸರು

ಒಬ್ಬರಿಗೊಬ್ಬರು ಸಮನಿಲ್ಲವಯ್ಯಾ 

ಅದರಿಚ್ಚೆಯನರಿದು ಹೊಡೆಯದಿರ್ದಡೆ

ಅದರಚ್ಚು ಮುರಿದಿತ್ತು #ಗುಹೇಶ್ವರಾ.


✍🏾-;#ಶೂನ್ಯ_ಸಿಂಹಾಸನಾಧೀಶ್ವರ ಅಲ್ಲಮಪ್ರಭುಗಳು.



‘ಕಾಲುಗಳೆರಡು ಗಾಲಿ ಕಂಡಯ್ಯಾ’

ಬಂಡಿಗೆ ಗಾಲಿಗಳಿರುವಂತೆ

ಇದಕ್ಕೂ ಎರಡು ಗಾಲಿಗಳು ಅವು ಕಾಲುಗಳು.


‘ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ’

ಆಸೆ ಆಮಿಷ ಹಲವಾರು ಸಂಸಾರಿಕ ಚಿಂತೆಗಳ ತುಂಬಿರುವ ದೇಹವೆಂಬ ಬಂಡಿಯನ್ನು, ಹೊಡೆವವರು ಐವರು ಮಾನಿಸರು

ದೇಹವೆಂಬ ಬಂಡಿಗೆ ಆತ್ಮ ಒಡಯ, ಅದನ್ನು ಹೊಡೆಯುವವರು ಐದು ಜನ ಮಾನಿಸರು,ಅಂದರೆ ಪಂಚೇಂದ್ರಿಯಗಳು ಐದು ಇಂದ್ರಿಯಗಳಲ್ಲಿ ಒಂದಕ್ಕೆ ಒಂದು ಹೊಂದಾಣಿಕೆ ಇಲ್ಲಎಲ್ಲವು ತಮ್ಮ ತಮ್ಮ ಪಥದಲ್ಲಿ ಮುನ್ನಡೆಯಲು ಪ್ರಯತ್ನಿಸುತ್ತವೆ,ತಮ್ಮ ಇಷ್ಟದ ಸುಖಗಳನ್ನು ಅನುಭವಿಸಲು ಪ್ರಯತ್ನಿಸುತ್ತವೆ. 'ಇವುಗಳನ್ನು ದುರ್ಗುಣಗಳಿಂದ ಸದ್ಗುಣಗಳ ಕಡೆಗೆ ಕರೆತರಬೇಕು ಯಾವುದು   ಸತ್ಯ ಸದ್ಗುಣ ಮಾರ್ಗ ಯಾವ ರೀತಿಯಲ್ಲಿ ಪಂಚೇಂದ್ರಿಯಗಳ  ನಿಯಂತ್ರಣ ಮಾಡಿಕೊಳ್ಳಬೇಕು ಎಂಬುವುದಕೆ ಚೆನ್ನಬಸವಣ್ಣನವರ ಒಂದು ವಚನವಿದೆ.


ಶಿವಭಕ್ತಿಯುಳ್ಳವಂಗೆ;

ಕಾಮ ಬೇಡ, ಕ್ರೋಧ ಬೇಡ, ಲೋಭ ಬೇಡ;

ಮೋಹ ಬೇಡ, ಮದ ಬೇಡ, ಮತ್ಸರ ಬೇಡ.

ಶಿವಭಕ್ತಿಯುಳ್ಳವಂಗೆ:

ಕಾಮ ಬೇಕು, ಕ್ರೋಧ ಬೇಕು, ಲೋಭ ಬೇಕು;

ಮೋಹ ಬೇಕು, ಮದ ಬೇಕು, ಮತ್ಸರ ಬೇಕು.

ಬೇಕೆಂಬುದಕ್ಕಾವ ಗುಣ?

ಕಾಮ ಬೇಕು ಲಿಂಗದಲ್ಲಿ, ಕ್ರೋಧ ಬೇಕು ಕರಣಂಗಳಲ್ಲಿ,

ಲೋಭ ಬೇಕು ಪಾದೋದಕ ಪ್ರಸಾದದಲ್ಲಿ,

ಮೋಹ ಬೇಕು ಗುರುಲಿಂಗ ಜಂಗಮದಲ್ಲಿ,

ಮದ ಬೇಕು ಶಿವಾಚಾರದಿಂದ ಘನವಿಲ್ಲವೆಂದು,

ಮತ್ಸರ ಬೇಕು ಹೊನ್ನು ಹೆಣ್ಣು ಮಣ್ಣಿನಲ್ಲಿ ಇಂತೀ ಷಡ್ಗುಣವಿರವೇಕು.

ಬೇಡವೆಂಬುದಕ್ಕಾವುದು ಗುಣ?

ಕಾಮ ಬೇಡ ಪರಸ್ತ್ರೀಯರಲ್ಲಿ, ಕ್ರೋಧ ಬೇಡ ಗುರುವಿನಲ್ಲಿ

ಲೋಭ ಬೇಡ ತನು ಮನ ಧನದಲ್ಲಿ, ಮೋಹ ಬೇಡ ಸಂಸಾರದಲ್ಲಿ,

ಮದ ಬೇಡ ಶಿವಭಕ್ತರಲ್ಲಿ, ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ.-

ಇಂತೀ ಷಡ್ಗುಣವನರಿದು ಮೆರೆಯಬಲ್ಲಡೆ

ಆತನೇ ಸಹಜ ಸದ್ಭಕ್ತ ಕಾಣಾ ಕೂಡಲಚೆನ್ನಸಂಗಮದೇವಾ.


ಭವವೆಂಬ ಬಯಕೆಯ ಕೆಸರಲ್ಲಿ ಬಿದ್ದಿರದೆ

ಅಂಗದಿಚ್ಚೆಯಿಂದ ಪಂಚೇಂದ್ರಿಯಗಳನ್ನು ಲಿಂಗದಿಚ್ಚೆಯ ಕಡೆಗೆ ಕರೆತರುತ್ತದೆ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ವಚನ


ಸದ್ಗುಣಗಳಿಂದ ತುಂಬಿದ ದೇಹವೆಂಬ ಬಂಡಿಯೊಳಗೆಆತ್ಮವೆಂಬ ನಿಜ ದೇವನ ಚೈತನ್ಯವು ತುಂಬಿರುತ್ತದೆಅಂತರಂಗ ಶುದ್ಧವಾದಲ್ಲಿ ದೇಹವೇ ದೇವಾಲಯ,

ಪ್ರಾಣವೇ ಲಿಂಗ ಎನ್ನುವ ಭಾವ  ಮೇಲಿನ ವಚನದಲ್ಲಿ ಕಂಡು ಬರುತ್ತದೆ.



ಶರಣು ಶರಣಾರ್ಥಿಗಳೊಂದಿಗೆ

        


                       ವಿಶ್ಲೇಷಣೆ-;

            #ಲೋಕೇಶ್_ಎನ್_ಮಾನ್ವಿ.


Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.