‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’
ಶ್ರೀಗುರು ಬಸವಲಿಂಗಾಯ ನಮಃ ‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’ ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ, ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ. ಮೇಲಿನ ವಚನಕ್ಕೆ ಸಂಬಂಧಿಸಿದಂತೆ ಕಾನೂನಿನ ಅಡಿಯಲ್ಲಿ ಬರುವ ಸೆಕ್ಷನ್ಸ್….👇🏻 ೧)ಕಳಬೇಡ, ಕಳ್ಳತನ ಮಾಡಬೇಡ ಇದು ಐಪಿಸಿ ಸೆಕ್ಷನ್- 378ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ೨) ಕೊಲಬೇಡ, ಜೀವಹತ್ಯೆ ಮಾಡಬೇಡ ಇದು ಐಪಿಸಿ ಸೆಕ್ಷನ್- 300ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ೩)ಹುಸಿಯ ನುಡಿಯಲು ಬೇಡ, ಸುಳ್ಳು ಹೇಳಬೇಡ ಇದು ಐಪಿಸಿ ಸೆಕ್ಷನ್ - 415 ಮತ್ತು 420ರ ಪ್ರಕಾರ ಅಪರಾಧವಾಗಿದೆ. ೪)ಮುನಿಯಬೇಡ, ಇದು ಐಪಿಸಿ ಸೆಕ್ಷನ್ - 319ರ ಪ್ರಕಾರ ಇದು ಇನ್ನೊಬ್ಬರ ಮನಸ್ಸಿದೆ ನೋವುಂಟು (hurt)ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ೫)ಅನ್ಯರಿಗೆ ಅಸಹ್ಯಪಡಬೇಡ, ಇದು ಐಪಿಸಿ ಸೆಕ್ಷನ್- 295, 295A, 296, 297, 298,ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ೬) ತನ್ನ ಬಣ್ಣಿಸಬೇಡ, ಇದು ಐಪಿಸಿ ಸೆಕ್ಷನ್- 192, ಪ್ರಕಾರ ತನ್ನ ಬಣ್ಣಿಸಿಕೊಂಡು ಸುಳ್ಳು ಸಾಕ್ಷಿ ಹೇಳಿಕೊಳ್ಳುವುದು ಇದು ಅಪರಾಧವಾಗಿದೆ. ೭)ಇದಿರ ಹಳಿಯಲು ಬೇಡ. ಇದು ಐಪಿಸಿ ಸೆಕ್ಷನ್ - 499ರ ಪ್ರಕಾರ ಇದು ಮಾನನಷ್ಟ, ಮೊಕದ್ದಮೆ ಅಪರಾಧವ...