ಆರು ಮುನಿದು ನಮ್ಮನೇನ ಮಾಡುವರು, ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ ಲೋಕೇಶ್ ಎನ್ ಮಾನ್ವಿ.
ಓಂ ಶ್ರೀಗುರುಬಸವಲಿಂಗಾಯ ನಮಃ
ಆರು ಮುನಿದು ನಮ್ಮನೇನ ಮಾಡುವರು
ಊರು ಮುನಿದು ನಮ್ಮನೆಂತು ಮಾಡುವರು
ನಮ್ಮ ಕುನ್ನಿಗೆ ಕೂಸ ಕೊಡಬೇಡ.
ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ.
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ,
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ.
✍🏻 -:#ವಿಶ್ವಗುರು_ಬಸವಣ್ಣನವರು.
#ಭಾವಾರ್ಥ-:
ನ್ಯಾಯ ನಿಷ್ಠೂರರಾಗಿ ತತ್ವ ನಿಷ್ಠರಾಗಿ
ಸತ್ಯ ಸನ್ಮಾರ್ಗದಲ್ಲಿ ನಡೆವ ಶರಣರ ಕಂಡರೆ,
ತತ್ವದ ಸತ್ವಹೀನ ಮನುಜರು ಬೊಗಳುವುದು ಸಹಜ.
ಸಕಲ ದಾಯಮಯರಾದ ಶರಣರ ಕಂಡರೆ,
ಅವರ ಕಾಯಕ ತತ್ವ ದಾಸೋಹತ್ವ ಸಮತೆ ಪ್ರೀತಿ ನ್ಯಾಯ ನಿಷ್ಠೂರತೆಯ ಸದ್ವಿಚಾರಗಳ ಕಂಡು ಲೋಕಲೌಕಿಕದ ಜಡಜೀವಿಗಳೆತ್ತ ಮೆಚ್ಚಿ ನುಡಿವರು.
ಆರು ಮುನಿದು ನಮ್ಮನೇನ ಮಾಡುವರು
ಊರು ಮುನಿದು ನಮ್ಮನೆಂತು ಮಾಡುವರು
ಅಂಥ ಜನರಿರುವ ಊರಿಗೆ ಊರೇ ಮನಿದರೂ ನಮ್ಮನ್ನು ಎಂತೂ ಮಾಡಲಾಗದು, ನಮ್ಮನ್ನು ಅಡ್ಡಿಪಡಿಸಲಾಗದು.
’ನಮ್ಮ ಕುನ್ನಿಗೆ ಕೂಸ ಕೊಡಬೇಡ’ ಹೆಚ್ಚೆಂದರೆ ಏನು ಮಾಡುವರು ? ನಮ್ಮ ಮನೆಯ ಮಗನಿಗೆ ತಮ್ಮ ಮಗಳನ್ನು ಕೊಡದಿರಬಹುದು ಅಷ್ಟೆ, ಅಂಥ ಸೋಮಾರಿಗಳ ಸಂಗ ನಮಗೆ ಮೊದಲೇ ಬೇಡವಾದದ್ದು .
ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ.
ಇನ್ನು ನಮ್ಮ ಮನೆಯ ಶ್ವಾನಕ್ಕೆ ಅವರು ಅನ್ನವನಿಕ್ಕದಿರಬಹುದಷ್ಟೇ, ಆದರೆ ಪರಮ ದಾಸೋಹಿಗಳಾದ ಶರಣರ ಮನೆಯ ಶ್ವಾನವೂ ಕೂಡ ಸತ್ಯ ಶುದ್ಧವಾಗಿ ದುಡಿಯದ ಸೋಮಾರಿಗಳ ಮನೆಯ ಬೋನವನ್ನು ಎಂದಿಗೂ ಮೂಸಿ ಸಹ ನೋಡದು,.
#ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ,
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ.
ಆನೆಯು ಬಂದಾಗ ಅದು ನಡೆದದ್ದೇ ದಾರಿ,
ಶ್ವಾನಗಳು ಅದರ ನಡೆಯನ್ನು ಕಂಡು ಬೀದಿಗೆ ಬಂದು ಬೊಗಳುವುದು ಸಹಜ ಮತ್ತು ಸಾಮಾನ್ಯ.
ಹಾಗೆಯೇ ಜಾತಿ_ಮತ_ಪಂಥ, ವರ್ಗ_ವರ್ಣ_ಲಿಂಗ,ವೆಂಬ ಅಂಧ ಶ್ರದ್ಧೆಯ ಅಲ್ಪವಿಷಯಗಳಲ್ಲೇ ಕಚ್ಚಾಡುತ್ತಿರುವ ಲೌಕಿಕದ ಅಜ್ಞಾನಿಗಳ ನಡುವೆ, ಕೂಡಲಸಂಗಮದೇವನೆಂಬ ಕರುಣಾಸಾಗರನ
ಭಕ್ತಿ_ಜ್ಞಾನ_ಕಾಯಕ_ದಾಸೋಹದ ಸತ್ಯ ಮಾರ್ಗದಲ್ಲಿರುವ ಶಿವಶರಣರನ್ನು ಕಂಡಾಗ ಲೋಕಲೌಕಿಕದ ಅಜ್ಞಾನ ತುಂಬಿದ ಜನಗಳು ಬೊಗಳುವುದು ಸಹಜ, ಆದರೆ ಅದರ ಬಗ್ಗೆ ಯೋಚಿಸಲು ಕೂಡ ಶರಣರಿಗೆ ಕಿಚ್ಚಿತ್ತೂ ಸಮಯವಿಲ್ಲ, ಕಾರಣ ಸತ್ಯಶುದ್ಧವಾದ ನಿತ್ಯಕಾಯಕ, ಅನ್ನ_ಅರಿವು_ಆರ್ಶಯವೆಂಬ ತ್ರಿವಿಧ ದಾಸೋಹದಲ್ಲಿ ಮಗ್ನರಾದ ಶರಣರಿಗೆ ಸ್ತುತಿ ನಿಂದೆಗಳ ಚಿಂತೆಯೂ ಅಲ್ಲ, ಅದರ ಬಗ್ಗೆ ಯೋಚನೆಯೂ ಇಲ್ಲ, ಕಾರಣ ಅದಕ್ಕೆ ತಕ್ಕ ಉತ್ತರ ನೀಡಲು ಕೂಡಲಸಂಗಮದೇವನಿರುವ ತನಕ, ಶರಣರಿಗೆ ಮತ್ತಿನ್ಯಾವ ಭಯವಿಲ್ಲ..
ಎಂಬುದಾಗಿ #ವಿಶ್ವಗುರು_ಬಸವಣ್ಣನವರು ತಿಳಿಸುತ್ತಾರೆ..💐🙏🏻🙏🏻💐
ವಿಶ್ಲೇಷಣೆ-:
#ಲೋಕೇಶ್_ಎನ್_ಮಾನ್ವಿ.
-/ 9972536176
👏👏
ReplyDelete🙏 ಜಯ ಗುರು ಬಸವೇಶ ಶ್ರೀ ಗುರು ಬಸವೇಶ 🙏
ReplyDelete🙏🙏🙏
ReplyDeleteಚಿಂತನ ಚೆನ್ನಾಗ ಬಂದಿದೆ
ReplyDelete